Published on: June 18, 2024

ಲಿಮ್ಕಾಬುಕ್ ಆಫ್ ರೆಕಾರ್ಡ್ಸ್

ಲಿಮ್ಕಾಬುಕ್ ಆಫ್ ರೆಕಾರ್ಡ್ಸ್

ಸುದ್ದಿಯಲ್ಲಿ ಏಕಿದೆ? ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ನಡೆದ ಸಾರ್ವಜನಿಕ ಸೇವಾ ಸಮಾರಂಭದಲ್ಲಿ ದಾಖಲೆ ಸಂಖ್ಯೆಯ ಜನರು ಪಾಲ್ಗೊಳ್ಳುವ ಮೂಲಕ ಭಾರತೀಯ ರೈಲ್ವೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ಗೆ ಸೇರಿದೆ.

ಮುಖ್ಯಾಂಶಗಳು

  • ರೈಲ್ವೆ ಸಚಿವಾಲಯವು 2024ರ ಫೆಬ್ರುವರಿ 26ರಂದು ದೇಶದ ವಿವಿಧೆಡೆ ರೈಲ್ವೆ ಬ್ರಿಡ್ಜ್, ವಿವಿಧ ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ಕ್ರಮವನ್ನು ಪ್ರಧಾನಿ ಅವರು ವರ್ಚುವಲ್ ಆಗಿ ನೆರವೇರಿಸಿದ್ದರು.
  • ರೈಲ್ವೇ ಸೇತುವೆಗಳ ಮೇಲಿನ ರಸ್ತೆ / ಸೇತುವೆ ಕೆಳಗಿನ ರಸ್ತೆ ಉದ್ಘಾಟನೆ ಮತ್ತು ರೈಲ್ವೆ ನಿಲ್ದಾಣಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
  • ದೇಶದ 2,140 ಸ್ಥಳಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ 40,19, 516 ಜನರು ಭಾಗವಹಿಸಿದ್ದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್

  • ಭಾರತೀಯರ ವಿಶ್ವ ದಾಖಲೆಗಳನ್ನು ದಾಖಲಿಸುವ ವಾರ್ಷಿಕ ಪ್ರಕಟಣೆಯಾಗಿದೆ.
  • 1990 ರಿಂದ 30 ಕ್ಕೂ ಹೆಚ್ಚು ಆವೃತ್ತಿಗಳೊಂದಿಗೆ, ಇದು ಭಾರತದ ಮೊದಲ ಮತ್ತು ಸುದೀರ್ಘವಾಗಿ ನಿರಂತರವಾಗಿ ಪ್ರಕಟವಾದ ದಾಖಲೆಗಳ ಪುಸ್ತಕವಾಗಿದೆ.
  • ದಾಖಲೆಗಳನ್ನು ಶಿಕ್ಷಣ, ಸಾಹಿತ್ಯ, ಕೃಷಿ, ವೈದ್ಯಕೀಯ ವಿಜ್ಞಾನ, ವ್ಯಾಪಾರ, ಕ್ರೀಡೆ, ಪ್ರಕೃತಿ, ಸಾಹಸ, ರೇಡಿಯೋ ಮತ್ತು ಸಿನಿಮಾ ಎಂದು ವರ್ಗೀಕರಿಸಲಾಗಿದೆ.

ಭಾರತೀಯ ರೈಲ್ವೇ: ಜನರನ್ನು ಸಂಪರ್ಕಿಸುವುದು, ಪ್ರಗತಿ ಮತ್ತು ಸವಾಲುಗಳು

  • ಹುಟ್ಟು: ಇದನ್ನು ಮೊದಲು 1853 ರಲ್ಲಿ ಪರಿಚಯಿಸಲಾಯಿತು, ಬಾಂಬೆಯಿಂದ ಥಾಣೆಗೆ (34 ಕಿಮೀ).
  • ಉದ್ದೇಶ: ಒಳನಾಡುಗಳನ್ನು ಮುಖ್ಯ ನಗರ ಕೇಂದ್ರಗಳಿಗೆ ಸಂಪರ್ಕಿಸುವುದು, ಇದನ್ನು ಬ್ರಿಟಿಷರು ಪರಿಚಯಿಸಿದರು. ಭಾರತದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುದಾಗಿತ್ತು ಅಂದರೆ ಕಚ್ಚಾ ವಸ್ತುಗಳ ರಫ್ತು ಮತ್ತು ಬ್ರಿಟಿಷ್ ಸರಕುಗಳ ಆಮದು.
  • ರೈಲ್ವೆ ವ್ಯವಸ್ಥೆಯನ್ನು 16 ವಲಯಗಳಾಗಿ ವಿಂಗಡಿಸಲಾಗಿದೆ.
  • ಮಹಾತ್ಮಾ ಗಾಂಧಿಯವರು ಭಾರತೀಯ ರೈಲ್ವೇ”ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಲು ವೈವಿಧ್ಯಮಯ ಸಂಸ್ಕೃತಿಗಳ ಜನರನ್ನು ಒಟ್ಟುಗೂಡಿಸಿದೆ” ಎಂದು ಹೇಳಿದರು.
  • ಭಾರತೀಯ ರೈಲ್ವೇ ನೆಟ್‌ವರ್ಕ್ ವಿಶ್ವದಲ್ಲೇ ಅತಿ ಉದ್ದವಾಗಿದೆ ಮತ್ತು ದೇಶದ ಅತಿದೊಡ್ಡ ಸರ್ಕಾರಿ ಉದ್ಯಮವಾಗಿದೆ.

ಕೊಂಕಣ ರೈಲ್ವೆ

  • ನಿರ್ಮಾಣ: 1998 ರಲ್ಲಿ
  • ಸಂಪರ್ಕ: ಇದು ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ಮಂಗಳೂರಿಗೆ ಸಂಪರ್ಕಿಸುವ 760 ಕಿಮೀ ಉದ್ದದ ರೈಲು ಮಾರ್ಗವಾಗಿದೆ.
  • ಇದು 146 ನದಿಗಳು, ಹೊಳೆಗಳು, ಸುಮಾರು 2000 ಸೇತುವೆಗಳು ಮತ್ತು 91 ಸುರಂಗ ಮಾರ್ಗಗಳನ್ನು ಹೊಂದಿದೆ.
  • ಸುಮಾರು 6.5 ಕಿಮೀ ಉದ್ದದ ಏಷ್ಯಾದ ಅತಿದೊಡ್ಡ ಸುರಂಗ ಕೂಡ ಈ ಮಾರ್ಗದಲ್ಲಿದೆ.
  • ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಪಾಲುದಾರ ರಾಜ್ಯಗಳಿವೆ

ಭಾರತೀಯ ರೈಲ್ವೆಯ ಹಳಿಗಳ ಅಗಲದ ಆಧಾರದ ಮೇಲೆ, ಮೂರು ವಿಭಾಗಗಳನ್ನು ಮಾಡಲಾಗಿದೆ:

  1. ಬ್ರಾಡ್ ಗೇಜ್: ಬ್ರಾಡ್ ಗೇಜ್‌ನಲ್ಲಿ ಹಳಿಗಳ ನಡುವಿನ ಅಂತರ 1.676 ಮೀಟರ್. ಬ್ರಾಡ್ ಗೇಜ್ ಲೈನ್‌ಗಳ ಒಟ್ಟು ಉದ್ದ 63950 ಕಿಮೀ (2019-20).
  2. ಮೀಟರ್ ಗೇಜ್: ಹಳಿಗಳ ನಡುವಿನ ಅಂತರವು ಒಂದು ಮೀಟರ್. ಇದರ ಒಟ್ಟು ಉದ್ದ 2402 ಕಿಮೀ (2019-20).
  3. ನ್ಯಾರೋ ಗೇಜ್: ಈ ಸಂದರ್ಭದಲ್ಲಿ ಹಳಿಗಳ ನಡುವಿನ ಅಂತರವು 0.762 ಮೀಟರ್ ಅಥವಾ 0.610 ಮೀಟರ್. ಒಟ್ಟು ಉದ್ದ 1604 ಕಿಮೀ (2019-20).

ನಿಮಗಿದು ತಿಳಿದಿರಲಿ

ಕರ್ನಾಟಕದಲ್ಲಿ ಮೊದಲ ರೈಲು ಮಾರ್ಗವನ್ನು 1864 ರಲ್ಲಿ ಸಂಚಾರಕ್ಕಾಗಿ ತೆರೆಯಲಾಯಿತು. ಇದು ಬೆಂಗಳೂರಿನಿಂದ ಮದ್ರಾಸ್‌(ಜೋಲಾರಪೇಟ) ಗೆ ಪ್ರಾರಂಭವಾಯಿತು.

ರಾಜ್ಯದಲ್ಲಿ ಸ್ಥಾಪಿಸಲಾದ ಮೊದಲ ರೈಲು ಮಾರ್ಗವೆಂದರೆ ಬೆಂಗಳೂರು-ಮೈಸೂರು ಜಂಕ್ಷನ್ ಮೀಟರ್ ಗೇಜ್ ಮಾರ್ಗವಾಗಿದೆ.