Published on: June 16, 2023
ಲೆವೆಲ್ 4+ ಟ್ರಾನ್ಸಿಶನ್ ಮತ್ತು ಹಸಿರು ವಿಮಾನ ನಿಲ್ದಾಣಗಳ ಮನ್ನಣೆ
ಲೆವೆಲ್ 4+ ಟ್ರಾನ್ಸಿಶನ್ ಮತ್ತು ಹಸಿರು ವಿಮಾನ ನಿಲ್ದಾಣಗಳ ಮನ್ನಣೆ
ಸುದ್ದಿಯಲ್ಲಿ ಏಕಿದೆ? ಸಮರ್ಥ ಇಂಗಾಲ ನಿರ್ವಹಣೆ ಮತ್ತು ಸುಸ್ಥಿರತೆಗಾಗಿ ಏರ್ಪೋರ್ಟ್ ಕಾರ್ಬನ್ ಮಾನ್ಯತೆ (ACA) ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಶನಲ್ (ACI)ನ ಅತ್ಯುನ್ನತ ಮಟ್ಟದ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆಯನ್ನು ಪಡೆದುಕೊಳ್ಳುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುಖ್ಯಾಂಶಗಳು
- ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತೆಗೆದುಕೊಂಡಿರುವ ನಿರ್ಣಯದಿಂದ ಎಸಿಐ ನೀಡುವ ಅತ್ಯುನ್ನತ ಮಟ್ಟದ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆಯನ್ನು ಪಡೆದುಕೊಳ್ಳಲಾಗಿದೆ.
- ಇದಲ್ಲದೆ, BLR ವಿಮಾನ ನಿಲ್ದಾಣದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆಗಳ ನಿರ್ಮಾಣ ಹಾಗೂ ಹಲವು ಪ್ಲಾಸ್ಟಿಕ್ ಸರ್ಕ್ಯುಲಾರಿಟಿ ಉಪಕ್ರಮಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ BIAL ವಿಶ್ವದ ವಾರ್ಷಿಕ 15-35 ದಶಲಕ್ಷ ಪ್ರಯಾಣಿಕರ ವಿಭಾಗದಲ್ಲಿ ACIಯ ಗ್ರೀನ್ ಏರ್ಪೋರ್ಟ್ಸ್ ರೆಕಗ್ನಿಷನ್ 2023 ಪ್ಲಾಟಿನಂ ಪ್ರಶಸ್ತಿಯನ್ನು ಪಡೆದುಕೊಂಡಿದೆ.
- ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆ ಏರ್ಪೋರ್ಟ್ ಕಾರ್ಬನ್ ಮಾನ್ಯತೆ ಕಾರ್ಯಕ್ರಮದ ಅಡಿಯಲ್ಲಿ ವಿಮಾನ ನಿಲ್ದಾಣವು ಪಡೆಯಬಹುದಾದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾಗಿದೆ. ಇದು 2030 ರ ವೇಳೆಗೆ ನಿವ್ವಳ ಇಂಗಾಲ ಶೂನ್ಯವಾಗಲು BIAL ನ ಆಕಾಂಕ್ಷೆಯನ್ನು ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವಲ್ಲಿ ಅದರ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ.
ನಿಮಗಿದು ತಿಳಿದಿರಲಿ
- ಹಸಿರು ಪ್ರಗತಿ ಮತ್ತುಸುಸ್ಥಿರತೆಯ ನೀತಿಗೆ ಅನುಗುಣವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ‘ಗ್ರೀನ್ ಏರ್ಪೋರ್ಟ್ ರೆಕಗ್ನಿಷನ್ (ಜಿಎಆರ್) 2023ರಲ್ಲಿಗುರುತಿಸಲ್ಪಟ್ಟಿದೆ. ವಾರ್ಷಿಕ 8 ದಶಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರಿರುವ ವಿಭಾಗದಲ್ಲಿ ಪ್ರತಿಷ್ಠಿತ ಪ್ಲಾಟಿನಂ ರೇಟಿಂಗ್ನ್ನು ಮಂಗಳೂರು ವಿಮಾನ ನಿಲ್ದಾಣ ಪಡೆದುಕೊಂಡಿದೆ. ಏಕ-ಬಳಕೆಯ ಪ್ಲಾಸ್ಟಿಕ್ (ಎಸ್ಯ್ಯುಪಿ) ಬಳಕೆಯನ್ನು ತೊಡೆದು ಹಾಕಿದ ವಿಮಾನ ನಿಲ್ದಾಣಗಳಲ್ಲಿಮಂಗಳೂರು ವಿಮಾನ ನಿಲ್ದಾಣವೂ ಒಂದಾಗಿದೆ. ತನ್ನ ಹಸಿರು ಉಪಕ್ರಮಗಳೊಂದಿಗೆ ಅತ್ಯುನ್ನತ ಗುಣಮಟ್ಟವನ್ನು ಮಂಗಳೂರು ವಿಮಾನ ನಿಲ್ದಾಣವ ಕಾಯ್ದುಕೊಂಡಿದೆ. ಜಪಾನನ ಕೊಬ್ ನಲ್ಲಿನಡೆದ 18ನೇ ಎಸಿಐ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮ್ಮೇಳನ ಮತ್ತು ಪ್ರದರ್ಶನದಲ್ಲಿಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.