Published on: October 4, 2021
‘ವಜ್ರಾ’ಯುಧ
‘ವಜ್ರಾ’ಯುಧ
ಸುದ್ಧಿಯಲ್ಲಿ ಏಕಿದೆ? ಭಾರತ-ಚೀನಾ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಶೆಲ್ ದಾಳಿ ನಡೆಸಿ ಶತ್ರುಪಡೆಯನ್ನು ಛಿದ್ರಗೊಳಿಸುವ ಸಾಮರ್ಥ್ಯದ ಸ್ವಯಂಚಾಲಿತ ಹೊವಿಟ್ಜರ್ ‘ಕೆ9- ವಜ್ರ’ವನ್ನು ಗಡಿ ಭದ್ರತಾ ಪಡೆ ನಿಯೋಜಿಸಿದೆ.
- ವಜ್ರದ ಜತೆಗೆ ಕಳೆದ ಆಗಸ್ಟ್‌ನಿಂದ ಟಿ-90 ಯುದ್ಧ ಟ್ಯಾಂಕರ್‌ಗಳನ್ನು ಕೂಡ ಲಡಾಕ್‌ನಲ್ಲಿ ಭೂಸೇನಾ ಪಡೆಯು ನಿಯೋಜಿಸಿರುವುದು ಗಮನಾರ್ಹ. ಅದರ ಬೆನ್ನಿಗೇ ಕೆ-9 ವಜ್ರ ನಿಯೋಜನೆಗೊಂಡಿವೆ.
ದೇಶೀಯ ಧ್ವಂಸಕ ‘ಕೆ9 ವಜ್ರ’
- ದಕ್ಷಿಣ ಕೊರಿಯಾ ತಯಾರಿಸುವ ‘ಕೆ9- ಥಂಡರ್’ ಎಂಬ ಶೆಲ್ ದಾಳಿಯ ಹೊವಿಟ್ಜರ್‌ನ ದೇಶೀಯ ಹಾಗೂ ಉನ್ನತೀಕರಿಸಲಾದ ಆವೃತ್ತಿಯೇ ‘ಕೆ9- ವಜ್ರ’. ಮುಂಬಯಿ ಮೂಲದ ಲಾರ್ಸನ್ ಆ್ಯಂಡ್ ಟರ್ಬೋ ಕಂಪನಿಯು ಇದನ್ನು ತಯಾರಿಸುತ್ತದೆ.
- 52 ಕಿ.ಮೀ. ದೂರದಲ್ಲಿನ ಶತ್ರುಪಡೆಯನ್ನು ಕ್ಷಣಮಾತ್ರದಲ್ಲಿ ಶೆಲ್ ಸ್ಫೋಟದ ಮೂಲಕ ಧ್ವಂಸ ಮಾಡುವ ಸಾಮರ್ಥ್ಯವು ಈ ಹೊವಿಟ್ಜರ್‌ಗಿದೆ. ಸುಮಾರು 100 ಹೊವಿಟ್ಜರ್‌ಗಳು ಈಗಾಗಲೇ ಸಮರಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಭೂಸೇನಾ ಪಡೆಯಲ್ಲಿವೆ.
- ಪ್ರತಿ ಗಂಟೆಗೆ 67 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇರುವ ‘ಕೆ9- ವಜ್ರ’ವನ್ನು ಐವರು ಯೋಧರು ಮುನ್ನಡೆಸುತ್ತಾರೆ. ಯಾವುದೇ ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಸ್ಥಿರವಾಗಿ ನಿಂತು ಸತತ ಶೆಲ್ ದಾಳಿ ನಡೆಸುವ ಪರಿಣಿತ ಶಸ್ತ್ರಾಸ್ತ್ರವಿದು.