Published on: August 27, 2022

ವಿಂಡ್ ಫಾಲ್ ಆದಾಯ ತೆರಿಗೆ ಹೆಚ್ಚಳ;

ವಿಂಡ್ ಫಾಲ್ ಆದಾಯ ತೆರಿಗೆ ಹೆಚ್ಚಳ;

ಸುದ್ದಿಯಲ್ಲಿ ಏಕಿದೆ?

ಕೇಂದ್ರ ಸರ್ಕಾರ ವಿಂಡ್ ಫಾಲ್ ಆದಾಯ ತೆರಿಗೆಯ ಪಾಕ್ಷಿಕ ಪರಿಷ್ಕರಣೆಯಲ್ಲಿ ಆಗಸ್ಟ್ 18 ರಂದು ಕಚ್ಚಾ ತೈಲದ ಮೇಲಿನ ಸೆಸ್ ನ್ನು ಪ್ರತಿ ಟನ್ ಗೆ 17,750 ರೂಗಳಿಂದ 13,000 ರೂಪಾಯಿಗಳಿಗೆ ಇಳಿಕೆ ಮಾಡಿದೆ.

ಮುಖ್ಯಾಂಶಗಳು

  • ಕೇಂದ್ರ ಸರ್ಕಾರದಿಂದ ಹೊರಡಿಸಲಾಗಿರುವ ಸುತ್ತೋಲೆಯನ್ನು ಉಲ್ಲೇಖಿಸಿರುವ ಮನಿ ಕಂಟ್ರೋಲ್, ಏವಿಯೇಷನ್ ಟರ್ಬೈನ್ ಫ್ಯುಯಲ್ (ಎಟಿಎಫ್) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ ಗೆ 5 ರೂಪಾಯಿಗಳಿಂದ 7 ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ.
  • ಈ ಬದಲಾವಣೆಗಳು ಆಗಸ್ಟ್ 19 ರಿಂದ ಜಾರಿಗೆ ಬಂದಿದೆ . ಈ ಹಿಂದಿನ ಪರಿಷ್ಕರಣೆ ಸಭೆಗಳಲ್ಲಿ ಎಟಿಎಫ್ ಹಾಗೂ ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸರ್ಕಾರ ತೆಗೆದುಹಾಕಿತ್ತು.

ಏನಿದು ವಿಂಡ್ ಫಾಲ್ ತೆರಿಗೆ?

  • ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಗಳು ಅನಿರೀಕ್ಷಿತ ಮಟ್ಟದ ಲಾಭಗಳಿಸಿದಾಗ ಅವುಗಳಿಗೆ ಸರ್ಕಾರ ವಿಧಿಸುವ ಒಂದು ವಿಧದ ತೆರಿಗೆಯನ್ನು ವಿಂಡ್ ಫಾಲ್ ಟ್ಯಾಕ್ಸ್ ಎನ್ನಲಾಗುತ್ತದೆ.