Published on: July 5, 2024

ವಿಮಾನ ಮಾದರಿಯ ಬಸ್

ವಿಮಾನ ಮಾದರಿಯ ಬಸ್

ಸುದ್ದಿಯಲ್ಲಿ ಏಕಿದೆ? ಮಹಾರಾಷ್ಟ್ರದ ನಾಗ್ಪುರದಲ್ಲಿ ಬಸ್ ಸಖಿ(ಬಸ್ ಹೊಸ್ಟೆಸ್) ಯರನ್ನು  ಒಳಗೊಂಡ ವಿಮಾನದಂತಹ ಆಸನಗಳ್ಳುಳ್ಳ 132 ಆಸನಗಳ ಎಸಿ ಬಸ್‌ ಅನ್ನು ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಮುಖ್ಯಾಂಶಗಳು

  • ತಯಾರಕರು: ಸ್ಕೋಡಾ ಮತ್ತು ಟಾಟಾ ಮೊಟಾರ್ಸ್‌ ಸಹಭಾಗಿತ್ವ
  • ಇದಕ್ಕೆ ಸ್ಪೂರ್ತಿ ಜೆಕ್‌ ಗಣರಾಜ್ಯ ದೇಶವಾಗಿದೆ
  • ವಿಮಾನದಂತಹ ಅನುಭವವನ್ನು ನೀಡಲು ಹಣ್ಣುಗಳು, ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಂತಹ ಪ್ರೀಮಿಯಂ ಸೌಕರ್ಯಗಳನ್ನು ಬಸ್ ಹೊಸ್ಟೆಸ್‌ಗಳು ಒದಗಿಸುತ್ತಾರೆ.

ವಿಶೇಷತೆಗಳು

  • ಇದು ನಿಸರ್ಗ ಸ್ನೇಹಿ ಬಸ್‌ ಆಗಿದೆ ಏಕೆಂದರೆ ಶೇ. 60 ವಿದ್ಯುತ್‌, ಶೇ. 40 ಎಥೆನಾಲ್‌ ಇದರ ಇಂಧನ ಶಕ್ತಿಯಾಗಿದೆ.
  • ಇದರ ಪ್ರಯಾಣ ದರ ಡೀಸೆಲ್‌ ಬಸ್‌ಗಳಿಗಿಂತಲೂ ಶೇ. 30ರಷ್ಟು ಕಡಿಮೆ ಇರುತ್ತದೆ.
  • ಇದು ಮೂರು ಬಸ್‌ ಜೋಡಣೆಗೊಂಡಂತೆ ಕಾಣುತ್ತದೆ.

ಉದ್ದೇಶ

ಭಾರತ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಮಾಲಿನ್ಯ ಕೂಡ ಒಂದಾಗಿದೆ. ಭಾರತದ ಅನೇಕ ಮಹಾನಗರಗಳಲ್ಲಿ ಮಾಲಿನ್ಯ ಹೆಚ್ಚಾಗಿದೆ. ಮಾಲಿನ್ಯ ಮುಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನಿಟ್ಟುಕೊಂಡು ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಾಗುತ್ತಿದೆ.