Published on: August 3, 2021
ವಿಮಾ ಕಾನೂನು ತಿದ್ದುಪಡಿ ಮಸೂದೆ
ವಿಮಾ ಕಾನೂನು ತಿದ್ದುಪಡಿ ಮಸೂದೆ
ಸುದ್ಧಿಯಲ್ಲಿ ಏಕಿದೆ ? ಸರ್ಕಾರಿ ಸ್ವಾಮ್ಯದ ವಿಮೆದಾರರಲ್ಲಿ ಸರ್ಕಾರವು ತನ್ನ ಪಾಲನ್ನು ಹೊಂದುವ ನಿಟ್ಟಿನಲ್ಲಿ ಸಾಮಾನ್ಯ ವಿಮಾ ಕಾನೂನಿಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯು ಅಂಗೀಕಾರ ನೀಡಿದೆ.
ಮಸೂದೆಯಲ್ಲಿ ಏನಿದೆ ?
- ಜನರಲ್ ಇನ್ಶೂರೆನ್ಸ್ ಬಿಸಿನೆಸ್ (general insurance business)(ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ- 2021 ಭಾರತೀಯ ಮಾರುಕಟ್ಟೆಗಳಿಂದ ಅಗತ್ಯ ಸಂಪನ್ಮೂಲ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ ಸಾರ್ವಜನಿಕ ವಲಯದ ಸಾಮಾನ್ಯ ವಿಮಾದಾರರು ಹೊಸ ವಿಮಾ ಪ್ರಾಡಕ್ಟ್‌ಗಳನ್ನು ವಿನ್ಯಾಸಗೊಳಿಸಬಹುದು.
- ಜನರಲ್ ಇನ್ಶೂರೆನ್ಸ್ ಬಿಸಿನೆಸ್ (ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ- 2021ರ ಆಬ್ಜೆಕ್ಟ್ಸ್ ಮತ್ತು ರೀಸನ್ಸ್ ಹೇಳಿಕೆಯ ಪ್ರಕಾರ ಕೇಂದ್ರ ಸರ್ಕಾರವು ನಿಗದಿತ ವಿಮಾದಾರರಲ್ಲಿ ಈಕ್ವಿಟಿ ಬಂಡವಾಳದ ಶೇ.51 ಕ್ಕಿಂತ ಕಡಿಮೆಯಿಲ್ಲದಿರುವ ಅಗತ್ಯವನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ.
ತಿದ್ದುಪಡಿಯ ಅಗತ್ಯ
- ಸಾರ್ವಜನಿಕ ವಲಯದ ವಿಮಾ ಕಂಪನಿಗಳಲ್ಲಿ ಹೆಚ್ಚಿನ ಖಾಸಗಿ ಪಾಲುದಾರಿಕೆ ಒದಗಿಸುವುದು, ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವುದು, ಪಾಲಿಸಿದಾರರ ಹಿತಾಸಕ್ತಿಗಳನ್ನು ಉತ್ತಮಗೊಳಿಸುವುದು ಮತ್ತು ಆರ್ಥಿಕತೆಯ ತ್ವರಿತ ಬೆಳವಣಿಗೆಗೆ ಕೊಡುಗೆ ನೀಡುವುದು, ಕಾಯಿದೆಯ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವುದು ಅಗತ್ಯವಾಗಿದೆ.
ಹಿನ್ನಲೆ
- 2021-22ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಒಳಗೊಂಡಂತೆ ಖಾಸಗೀಕರಣ ಕಾರ್ಯಸೂಚಿಯನ್ನು ಘೋಷಿಸಿದ್ದರು.
- ದೇಶದಲ್ಲಿ ಸಾರ್ವಜನಿಕ ವಲಯದಲ್ಲಿ ನಾಲ್ಕು ಸಾಮಾನ್ಯ ವಿಮಾ ಕಂಪನಿಗಳಿವೆ – ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್, ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. ಈಗ, ಇವುಗಳಲ್ಲಿ ಒಂದನ್ನು ಖಾಸಗೀಕರಣಗೊಳಿಸಲಾಗುವುದು, ಇದಕ್ಕಾಗಿ ಸರ್ಕಾರವು ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ.