Published on: October 17, 2023

ವಿಶ್ವದ ಎತ್ತರದ ರೈಲು ಸೇತುವೆ

ವಿಶ್ವದ ಎತ್ತರದ ರೈಲು ಸೇತುವೆ

ಸುದ್ದಿಯಲ್ಲಿ ಏಕಿದೆ? ಜಮ್ಮುವಿನ  ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿ ಮೇಲೆ ನಿರ್ಮಿಸುತ್ತಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಈವರೆಗೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಗಳಿಸಿದ್ದ ಚೀನಾದ ಬೇಪಾನ್‌ಜಿಯಾಂಗ್‌ ನದಿಯ ಮೇಲಿನ ಉಕ್ಕಿನ ಸೇತುವೆಯನ್ನು (275 ಮೀಟರ್‌ ಎತ್ತರ) ಇದು ಹಿಂದಿಕ್ಕಿ ನಂ.1 ಎತ್ತರದ ಸೇತುವೆ ಎಂಬ ಹಿರಿಮೆಗೆ ಪಾತ್ರವಾಗಿದೆ.
  • ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಭಾಗವಾಗಿ (USBRL) ಈ ಸೇತುವೆ ನಿರ್ಮಾಣವಾಗುತ್ತಿದೆ.
  • ವಾಸ್ತುಶಿಲ್ಪ ವಿಸ್ಮಯವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

ಉಕ್ಕಿನ ಕಮಾನು ರೈಲ್ವೆ ಸೇತುವೆ

  • 3 ಕಿ.ಮೀ ಉದ್ದದ ಸೇತುವೆಯು ನದಿಪಾತ್ರದಿಂದ 359 ಮೀಟರ್ ಎತ್ತರದಲ್ಲಿದೆ.
  • 111 ಕಿಮೀ ಕತ್ರಾದಿಂದ ಬನಿಹಾಲ್ ಸ್ಟ್ರೆಚ್‌ನಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.
  • ಈ ಸೇತುವೆಯನ್ನು 2800 ಕೋಟಿ ರೂ. ವೆಚ್ಚದಲ್ಲಿ ಉತ್ತರ ರೈಲ್ವೆ ನಿರ್ಮಿ ಸುತ್ತಿದೆ.
  • ಸೇತುವೆಯು ಎರಡು ಕಡೆಯಲ್ಲಿರುವ ಸಲಾಲ್‌ ಎ ಮತ್ತು ದುಗ್ಗಾ ರೈಲ್ವೆ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಲಿದೆ.

ಚೆನಾಬ್ ನದಿ

  • ಚೆನಾಬ್ ನದಿಯು ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಪ್ರಮುಖ ನದಿಯಾಗಿದೆ
  • ಇದು ಪಂಜಾಬ್ ಪ್ರದೇಶದ 5 ಪ್ರಮುಖ ನದಿಗಳಲ್ಲಿ ಒಂದಾಗಿದೆ.
  • ಇದನ್ನು ಚಂದ್ರಭಾಗ ನದಿಯೆಂದು ಕರೆಯಲಾಗುತ್ತದೆ
  • ಇದು ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಪ್ರದೇಶದಲ್ಲಿ ಮೇಲಿನ ಹಿಮಾಲಯದಲ್ಲಿ ಉದಯಿಸುವ ಚಂದ್ರ ಮತ್ತು ಭಾಗ ಎಂಬ ಎರಡು ಸಣ್ಣ ಹೊಳೆಗಳಿಂದ ರೂಪುಗೊಂಡಿದೆ.ಭಾಗಾ ನದಿಯು ಸೂರ್ಯ ತಾಲ್ ಸರೋವರದಿಂದ ಹುಟ್ಟುತ್ತದೆ, ಇದು ಹಿಮಾಚಲ ಪ್ರದೇಶದ ಬಾರಾ-ಲಾಚಾ ಲಾ ಪಾಸ್‌ನ ಪಶ್ಚಿಮಕ್ಕೆ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಚಂದ್ರ ನದಿಯು ಅದೇ ಪಾಸ್‌ನ ಪೂರ್ವಕ್ಕೆ ( ಚಂದ್ರ ತಾಲ್ ಬಳಿ ) ಹಿಮನದಿಗಳಿಂದ ಹುಟ್ಟುತ್ತದೆ.
  • ಇದು ಪಾಕಿಸ್ತಾನವನ್ನು ಪ್ರವೇಶಿಸಿ, ಪಂಜಾಬ್ ಪ್ರಾಂತ್ಯದ ಮೂಲಕ ಹರಿದು, ಸಟ್ಲೆಜ್‌ ನದಿಯನ್ನು ಸೇರಿಕೊಂಡು ಪಂಜನಾಡ್ ನದಿಯನ್ನು ರೂಪಿಸುತ್ತದೆ.

ಉಪನದಿಗಳು

  • ಎಡ ದಂಡೆ : ತಾವಿ ನದಿ , ರವಿ ನದಿ
  • ಬಲ ದಂಡೆ : ಮರುಸುದಾರ್ ನದಿ , ಝೇಲಂ ನದಿ, ನೀರು ನದಿ ಮತ್ತು ಕಲ್ನೈ ನದಿ