Published on: September 19, 2022

ವಿಶ್ವಸಂಸ್ಥೆ ಮಾನವ ಅಭಿವೃದ್ಧಿ ಸೂಚ್ಯಂಕ

ವಿಶ್ವಸಂಸ್ಥೆ ಮಾನವ ಅಭಿವೃದ್ಧಿ ಸೂಚ್ಯಂಕ

Portsmouth ಸುದ್ದಿಯಲ್ಲಿ ಏಕಿದೆ?

isotretinoin order overnight ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ರಾಷ್ಟ್ರಗಳ ಪೈಕಿ ಭಾರತ 132 ನೇ ಸ್ಥಾನ ಪಡೆದುಕೊಂಡಿದೆ. 2020ರಲ್ಲಿ ಭಾರತ 189 ರಾಷ್ಟ್ರಗಳ ಪೈಕಿ 131ನೇ ಸ್ಥಾನ ಪಡೆದಿತ್ತು.

ಮುಖ್ಯಾಂಶಗಳು

  • 2020 ರ ವರದಿಯಲ್ಲಿ ಭಾರತದ ಮೌಲ್ಯ 0.645ರಷ್ಟಿತ್ತು. ಜಾಗತಿಕ ಪ್ರವೃತ್ತಿಗಳಂತೆಯೇ, ಭಾರತದ ವಿಷಯದಲ್ಲಿ 2019 ರಲ್ಲಿ 0.645 ಇದ್ದ ಎಚ್‌ಡಿಐ ಮೌಲ್ಯ 2021 ರಲ್ಲಿ 0.633 ರಷ್ಟಿದ್ದು, ಜೀವಿತಾವಧಿ ನಿರೀಕ್ಷೆ 69.7 ರಿಂದ 67.2 ಕ್ಕೆ ಕುಸಿಯಲು ಕಾರಣವಾಗಿದೆ.
  • ವಿಶ್ವ ಒಂದರ ಹಿಂದೊಂದರಂತೆ ಬಿಕ್ಕಟ್ಟುಗಳಿಗೆ ಈಡಾಗುತ್ತಿದ್ದು, ಜೀವನ ವೆಚ್ಚ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಆದರೆ 2019 ಕ್ಕೆ ಹೋಲಿಸಿದರೆ, ಮಾನವ ಅಭಿವೃದ್ಧಿಯ ಮೇಲಿನ ಅಸಮಾನತೆಯ ಪ್ರಭಾವ ಕಡಿಮೆಯಾಗಿದೆ.
  • ಬಾಂಗ್ಲಾದೇಶ 129ನೇ ಸ್ಥಾನ, ಭೂತಾನ್ 127, ಶ್ರೀಲಂಕಾ 73 ಮತ್ತು ಚೀನಾ 79ನೇ ಸ್ಥಾನವನ್ನು ಪಡೆದುಕೊಂಡಿವೆ. ಹಾಗೆಯೇ ಸ್ವಿಟ್ಜರ್ಲೆಂಡ್ 0.962ರ ಎಚ್‌ಡಿಐ (HDI) ಮೌಲ್ಯದೊಂದಿಗೆ ಜಾಗತಿಕ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

32 ವರ್ಷಗಳಲ್ಲಿ ಮೊದಲ ಬಾರಿಗೆ ಎಚ್‌ಡಿಐ ಕುಂಠಿತ

  • ಮಾನವ ಅಭಿವೃದ್ಧಿ – ಒಂದು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಅಳತೆಯು ಕೊರೋನಾದಿಂದಾಗಿ ಐದು ವರ್ಷಗಳಷ್ಟು ಪ್ರಗತಿಯು ಕುಂಠಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದಾದ್ಯಂತ ಮಾನವ ಅಭಿವೃದ್ಧಿಯು 32 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ತೋರಿಸಲಾಗಿದೆ.
  • 2021 ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 67.2 ವರ್ಷಗಳಿದ್ದು, 2020 ರಲ್ಲಿ 70.1 ವರ್ಷಗಳು ಎಂದು ವರದಿ ಹೇಳಿದೆ.2019 ರಲ್ಲಿ 72.8 ವರ್ಷಗಳಿದ್ದ ಜೀವಿತಾವಧಿ 2021 ರಲ್ಲಿ 71.4 ವರ್ಷಗಳಿಗೆ ಕಡಿತಗೊಂಡಿದೆ.

ಮಾನದಂಡಗಳು:

  • ಮಾನವ ಅಭಿವೃದ್ಧಿಯನ್ನು ಒಂದು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಮೇಲೆ ಅಳೆಯಲಾಗುತ್ತದೆ.
  • ಮಾನವ ಅಭಿವೃದ್ಧಿಯನ್ನು 3 ಪ್ರಮುಖ ಆಯಾಮಗಳಲ್ಲಿ ಅಳೆಯಲಾಗುತ್ತದೆ. ದೀರ್ಘ ಮತ್ತು ಆರೋಗ್ಯಕರ ಜೀವನ, ಶಿಕ್ಷಣದ ಪ್ರವೇಶ ಮತ್ತು ಯೋಗ್ಯ ಜೀವನ ಮಟ್ಟ ಆಧರಿಸಿ ಈ ಸೂಚ್ಯಂಕ ತಯಾರಿಸಲಾಗುತ್ತದೆ. ಜೀವಿತಾವಧಿ, ಸರಾಸರಿ ಶಾಲಾ ವರ್ಷಗಳು,
  • ಶಾಲಾ ಶಿಕ್ಷಣದ ನಿರೀಕ್ಷಿತ ವರ್ಷಗಳು ಮತ್ತು ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (GNI) ಹೀಗೆ ನಾಲ್ಕು ಸೂಚಕಗಳನ್ನು ಬಳಸಿಕೊಂಡು ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ.

ಮಾನವ ಅಭಿವೃದ್ಧಿ ಸೂಚ್ಯಂಕ ಪರಿಕಲ್ಪನೆಯ ಪರಿಚಯ

  • ಎಚ್‌ಡಿಐನ ವಿಧಾನ ಮತ್ತು ಪರಿಕಲ್ಪನಾ ಅಡಿಪಾಯವನ್ನು ಮೊದಲಿಗೆ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಮತ್ತು ಮಹಬೂಬ್ ಉಲ್ ಹಕ್ ಅವರು ಅಭಿವೃದ್ಧಿಪಡಿಸಿದ್ದಾರೆ. “ಮಾನವ ಸಾಮರ್ಥ್ಯಗಳ ವಿಧಾನ” ಆಧಾರದ ಮೇಲೆ 1990 ರಲ್ಲಿ ಮೊದಲ ಎಚ್‌ಡಿಐ ವರದಿಯನ್ನು ಇವರುಗಳು ಹೊರತಂದರು.