Published on: April 3, 2023

ವಿಶ್ವ ಆಟಿಸಂ ಜಾಗೃತಿ ದಿನ

ವಿಶ್ವ ಆಟಿಸಂ ಜಾಗೃತಿ ದಿನ

ಸುದ್ದಿಯಲ್ಲಿ ಏಕಿದೆ? ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಪ್ರಿಲ್ 2 ರಂದು ಆಚರಿಸಲಾಗುತ್ತದೆ.

  • 2023 ರ ಥೀಮ್: “ನಿರೂಪಣೆಯನ್ನು ಪರಿವರ್ತಿಸುವುದು: ಮನೆಯಲ್ಲಿ, ಕೆಲಸದಲ್ಲಿ, ಕಲೆಗಳಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಕೊಡುಗೆಗಳು” ಸ್ವಲೀನತೆಯ ಬಗ್ಗೆ ಜಾಗೃತಿ ಮೂಡಿಸುವ ಕರೆ, ಹೀಗೆ ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ಸ್ವಲೀನತೆಯ ಜನರನ್ನು ಸ್ವೀಕರಿಸುವುದು ಮತ್ತು ಬೆಂಬಲಿಸುವುದು.

ಆಟಿಸಂ ಎಂದರೇನು?

  • ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD)
  • ಆಟಿಸಂ (ಸ್ವಲೀನತೆ)ಎಂಬುದು ಚಿಕ್ಕ ಮಕ್ಕಳಲ್ಲಿ ಕಂಡುಬರುವ ಅಸ್ವಸ್ಥತೆ. ಅಂತಹ ಮಕ್ಕಳಲ್ಲಿ ಬುದ್ಧಿ ಮಟ್ಟ ಅತೀ ಕಡಿಮೆ ಇರಲಿದ್ದು, ಸಾಮಾನ್ಯವಾಗಿ ಎಲ್ಲ ಮಕ್ಕಳಿರುವಂತೆ ಇರುವುದಿಲ್ಲ.
  • ಆರು ತಿಂಗಳ ಅನಂತರ ರೋಗ ಪರಿಣಾಮಕಾರಿಯಾಗಿ ಕಾಣಿಸಿಕೊಳಲಿದ್ದು, ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ರೋಗದ ಲಕ್ಷಣಗಳು ಹೆಚ್ಚಾಗುತ್ತವೆ.
  • ರೋಗದ ಲಕ್ಷಣಗಳು ಮೆದುಳು ಮತ್ತು ನರವ್ಯೂಹದ ಮೇಲೆ ಬೀರುವ ಪರಿಣಾಮದಿಂದಾಗಿ ಆಟಿಸ್‌ಂ ಪೀಡಿತ ಮಕ್ಕಳು ಭಾವನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಸ್ಪಂದಿಸುವುದಿಲ್ಲ. ಇವರಲ್ಲಿ ದೃಷ್ಟಿ ಸಂಪರ್ಕ ಕಳಪೆ ಮಟ್ಟದಲ್ಲಿರುತ್ತದೆ.
  • ಪುನರಾವರ್ತಿತ ನಡವಳಿಕೆಗಳು ಇವರಲ್ಲಿ ಹೆಚ್ಚುಕಾಣಬಹುದು. ಆಟಿಸ್‌ಂ ಪೀಡಿತ ಮಕ್ಕಳಲ್ಲಿ ಗ್ರಹಿಸುವ ಶಕ್ತಿ ಕೂಡ ತುಂಬಾ ಕಡಿಮೆ ಇರಲಿದ್ದು, ಇದು 2-5 ಮತ್ತು 6-8 ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿರುತ್ತವೆ. ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶದ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಉದ್ದೇಶ

  • ವಿಶ್ವ ಸ್ವಲೀನತೆ ಜಾಗೃತಿ ದಿನವನ್ನು ಸ್ವಲೀನತೆ ಹೊಂದಿರುವವರು ಮತ್ತು ಅವರ ಜತೆ ವಾಸಿಸುವವರಿಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಕಾರಣಗಳು:

  • ಸ್ವಲೀನತೆ ಅಥವಾ ಆಟಿಸಂಗೆ ಹಲವು ಕಾರಣಗಳಿದ್ದು ಸಂಶೋಧನೆಗಳ ಪ್ರಕಾರ ಹುಟ್ಟಿ ನಿಂದ ಬರುವದರಲ್ಲಿ ಆನುವಂಶಿಕ ಅಂಶಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಜೀನ್ಗಳು ಇದಕ್ಕೆ ಮುಖ್ಯಪಾತ್ರ ವಹಿಸುತ್ತವೆ. ವೈದ್ಯರ ಪ್ರಕಾರ ಮಕ್ಕಳು ತಾಯಿಯ ಗರ್ಭದಲ್ಲಿರುವಾಗ ಅನುಭವಿಸಿದ ಕಷ್ಟ ಅಥವಾ ಆಕೆಯ ಮೇಲೆ ಬೀರಿದ ಪ್ರಭಾವಗಳಿಂದ ಈ ರೋಗ ಬರುವ ಸಂಭವವಿರುತ್ತದೆ. ಅದಲ್ಲದೆ ರುಬೇಲಾ ಸೋಂಕಿ ನಿಂದ ಶೇ. 1 ಬರುವ ಸಾಧ್ಯತೆಗಳಿವೆ.

ಇತಿಹಾಸ

  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007 ರಲ್ಲಿ ಅಂಗೀಕರಿಸಿ, ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನಾಗಿ ಅಳವಡಿಸಿಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಯಿತು. ಮೊದಲ ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಪ್ರಿಲ್ 2, 2008 ರಂದು ಆಚರಿಸಲಾಯಿತು.

ನಿಮಗಿದು ತಿಳಿದಿರಲಿ

  • ಪಝಲ್ ರಿಬ್ಬನ್ ಅರ್ಥ ಆಟಿಸಂ ಪೀಡಿತರ ಜಾಗೃತಿಗಾಗಿ ಸಾಂಕೇತಿಕವಾಗಿ ಪಝಲ್ ರಿಬ್ಬನ್ನ್ನು ಬಳಸಲಾಗುತ್ತದೆ. ಜೀವನದಲ್ಲಿ ನಾನು ಒಬ್ಬಂಟಿ ಅಲ್ಲ. ನನ್ನ ಅಸ್ವಸ್ಥತೆ ಇನ್ನೊಬ್ಬರಿಗೆ ಕಷ್ಟ ಕೊಡಲಾರದು. ಎಲ್ಲ ಬಣ್ಣ ಗಳು ಒಟ್ಟಾಗಿ ಇರುವಂತೆ ಎಲ್ಲ ರೊಂದಿಗೆ ನಾನು ಬೇರೆಯುತ್ತೇನೆ. ಅವರಂತೆಯೇ ನಾನು ಬದುಕುತ್ತೇನೆ ಎನ್ನುವುದು ರಿಬ್ಬನ್ನಿನ ಸಂಕೇತ. ಅದಲ್ಲದೆ ವಿವಿಧ ಬಣ್ಣ ಗಳು ಮತ್ತು ಆಕಾರಗಳು ಜನ ಮತ್ತು ಕುಟುಂಬಗಳ ವೈವಿಧ್ಯವನ್ನು ಪ್ರತಿನಿಧಿಸುತ್ತವೆ.