Published on: August 25, 2022
ವಿಶ್ವ ಜಾನಪದ ದಿನ (FOLKLORE)
ವಿಶ್ವ ಜಾನಪದ ದಿನ (FOLKLORE)
ಸುದ್ದಿಯಲ್ಲಿ ಏಕಿದೆ?
ಆಗಸ್ಟ್ 22, ರಂದು ವಿಶ್ವ ಜಾನಪದ ದಿನ ಆಚರಿಸಲಾಗುತ್ತದೆ, ಬ್ರೆಜಿಲ್ ಸರ್ಕಾರವು ಆಗಸ್ಟ್ 22 ಅನ್ನು ‘ಫೋಕ್‌ಲೋರ್ ಡೇ’ ಎಂದು 1965ರ ಆಗಸ್ಟ್ 17ರಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದುಜಗತ್ತಿನ ಜನಪದ ಸಮುದಾಯಗಳಿಗೂ ವಿದ್ವಾಂಸರಿಗೂ ಒಂದು ಅವಿಸ್ಮರಣೀಯ ದಿನ.
ಮುಖ್ಯಾಂಶಗಳು
- ಭಾರತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ ಒಳಗೊಂಡಂತೆ ಕೆಲವು ರಾಜ್ಯಗಳು 2015ರ ನಂತರ ವಿಶ್ವ ಜಾನಪದ ದಿನವನ್ನು ಆಚರಿಸುತ್ತಿವೆ.
- ಆದರೆ ಈತನಕ ವಿಶ್ವಸಂಸ್ಥೆಯಾಗಲೀ, ಅದರ ಅಂಗಸಂಸ್ಥೆ ಯುನೆಸ್ಕೊ ಆಗಲೀ ವಿಶ್ವ ಜಾನಪದ ದಿನಕ್ಕೆ ಮಾನ್ಯತೆ ನೀಡಿಲ್ಲ.
- ಇದೀಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಇಂತಹದ್ದೊಂದು ಸುವರ್ಣಾವಕಾಶ ಇದೆ. ವಿಶ್ವ ಜಾನಪದ ದಿನದ ಅಧಿಕೃತ ಆಚರಣೆಗಾಗಿ ವಿಶ್ವ ವಿದ್ಯಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೂಲಕ ಯುನೆಸ್ಕೊ ಮತ್ತು ವಿಶ್ವಸಂಸ್ಥೆಗೆ ‘ವಿಶ್ವ ಜಾನಪದ ದಿನ’ವನ್ನು ಅಧಿಕೃತವಾಗಿ ಘೋಷಿಸಲು ವಿಶ್ವಜನರ ಪರವಾಗಿ ಹಕ್ಕೊತ್ತಾಯ ಮಂಡಿಸಬಹುದಾಗಿದೆ
ಆಚರಿಸುವ ಕಾರಣ
- ವಿಲಿಯಂ ಜಾನ್ ಥಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬ್ರೋಸ್ ಮೆರ್ತಾನ್ ಎನ್ನುವ ಗುಪ್ತ ನಾಮದಲ್ಲಿ 1846ರ ಆಗಸ್ಟ್ 12ರಂದು `ದಿ ಅಥೇ ನಿಯಂ’ ಎನ್ನುವ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾನೆ. ಈ ಪತ್ರ ಅದೇ ತಿಂಗಳ 22ರಂದು ಪ್ರಕಟವಾಗುತ್ತದೆ. ಪತ್ರದಲ್ಲಿ ‘ದಾಸ್ ವೋಕ್’ ಮತ್ತು ‘ಜನಪ್ರಿಯ ಪಳೆಯುಳಿಕೆ’ ಎಂದು ಕರೆಯುತ್ತಿದ್ದ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ ‘ಫೋಕ್‌ಲೋರ್’ ಎಂದು ಕರೆಯಬಹುದೆಂದು ಸೂಚಿಸಿದ.
- ‘ಫೋಕ್’ ಎಂದರೆ ಜನ, ‘ಲೋರ್’ ಎಂದರೆ ಆ ಜನರ ಜ್ಞಾನ ಅಥವಾ ತಿಳಿವಳಿಕೆ ಎಂದು ವಿವರಿಸುತ್ತಾನೆ.
-
ಆಗ ಮೊದಲ ಬಾರಿಗೆ ‘FOLKLORE’ ಎನ್ನುವ ಪದವು ಮುದ್ರಿತ ರೂಪದಲ್ಲಿ ಅಕಡೆಮಿಕ್ ವಲಯದ ಬಳಕೆಗೆ ಬರುತ್ತದೆ. ಈ ಚಾರಿತ್ರಿಕ ದಿನದ ನೆನಪಿಗಾಗಿ ಆ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಇಂದಿಗೆ ‘ಫೋಕ್‌ಲೋರ್’ ಪದವು ಬಳಕೆಗೆ ಬಂದು 176 ವರ್ಷಗಳಾದವು.