Published on: June 6, 2023

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವವೂ ಹೌದು. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ

  • ವಿಶ್ವ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972 ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, ಮೊದಲ ಬಾರಿಗೆ 1974 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.
  • 2023ರ ಥೀಮ್: ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು’ ಆಗಿದೆ. ಇದು ಹ್ಯಾಶ್ಟ್ಯಾಗ್ #BeatPlasticPollution ಮತ್ತು ಘೋಷವಾಕ್ಯವನ್ನು ಬಳಸಿಕೊಂಡು “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಎಂಬ ಥೀಮ್ ಮೇಲೆ ಕೇಂದ್ರೀಕೃತವಾಗಿದೆ.

ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ವರದಿ

  • ಮನುಷ್ಕರು ಪ್ರತಿ ವರ್ಷ 43 ಕೋಟಿ ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದಾರೆ. 46% ಪ್ಲಾಸ್ಟಿಕ್ ತ್ಯಾಜ್ಯವನ್ನು ಭೂಮಿಯಲ್ಲಿ ಹೂತು ಹಾಕಲಾಗುತ್ತದೆ 22%, ಅನ್ನು ಸರಿಯಾಗಿ ನಿರ್ವಹಿಸದೆ ಬಿಡಲಾಗುತ್ತಿರುವ, ಕಾರಣ ಈ ವರ್ಷ ಪ್ಲಾಸ್ಟಿಕ್‌ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜನ  ಜಾಗತಿ ಮೂಡಿಸುವ ಥೀಮ್ ಅನ್ನು ಅಳವಡಿಸಲಾಗಿದೆ:
  • ಮೈಕ್ರೋಪ್ಲಾಸ್ಟಿಕ್ಗಳು 5 ಮಿಮೀ ವ್ಯಾಸದವರೆಗಿನ ಸಣ್ಣ ಪ್ಲಾಸ್ಟಿಕ್ ಕಣಗಳು ಆಹಾರ, ನೀರು ಮತ್ತು ಗಾಳಿಯಲ್ಲಿ ವಿಲೀನಗೊಳ್ಳುತ್ತದೆ.
  • ಗ್ರಹದ ಪ್ರತಿಯೊಬ್ಬ ವ್ಯಕ್ತಿಯು ವರ್ಷಕ್ಕೆ 50,000 ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು ಅಂದಾಜಿಸಲಾಗಿದೆ.
  • ಬಿಸಾಡಿದ ಅಥವಾ ಸುಡಲಾದ ಏಕ ಬಳಕೆಯ ಪ್ಲಾಸ್ಟಿಕ್ ಮಾನವನ ಆರೋಗ್ಯ ಮತ್ತು ಜೀವವೈವಿಧ್ಯತೆಗೆ ಹಾನಿ ಮಾಡುತ್ತದೆ ಮತ್ತು ಪರ್ವತದ ತುದಿಯಿಂದ ಸಾಗರ ತಳದವರೆಗೆ ಪ್ರತಿಯೊಂದು ಪರಿಸರ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತದೆ.

ಪ್ಲಾಸ್ಟಿಕ್‌ ನಿಂದಾಗುವ  ಸಮಸ್ಯೆ 

  • ಅದು ಭೂಮಿಯಲ್ಲಿ ಮಣ್ಣಿನ ಜತೆಗೆ ಕರಗುವುದಿಲ್ಲ ಅದರ ಪರಿಣಾಮವಾಗಿ ಸಮುದ್ರದಲ್ಲಿನಜೀವಿಗಳಿಗೆ ಬದುಕಲು ಕಷ್ಟವಾಗುತ್ತದೆ. ಮಣ್ಣಿನ ರಚನೆಗಳಿಗೆ ಹಾನಿಯಾಗುತ್ತದೆ. ಅಂತರ್ಜಲ ಕಲುಷಿತವಾಗುತ್ತದೆ. ಹಾಗೂಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಆಚರಣೆ:

  • ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್‌ 5 ರಂದು ಆಚರಿಸಲಾಗುತ್ತದೆ. ಜೂನ್‌ ತಿಂಗಳ 5ನೇ ತಾರೀಖಿನಿಂದ ಜೂನ್‌ 16ರ ವರೆಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಎಲ್ಲಡೆ ಮರಗಳನ್ನು ನೆಡಲಾಗುತ್ತದೆ. ಮತ್ತು ಪರಿಸರಕ್ಕೆ ಸಂಬಂಧಿಸಿದ ಅನೇಕ ಜಾಗೃತಿ ಕೆಲಸಗಳನ್ನು ಮಾಡಲಾಗುತ್ತದೆ.

ಆಚರಿಸುವ ಉದ್ದೇಶ

  • ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
    ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು.
  • ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು.
  • ಪರಿಸರವನ್ನು ನಾಶ ಮಾಡದಂತ ಜಾಗೃತಿ ಮೂಡಿಸುವುದು.
  • ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು.