Published on: August 13, 2021
ವಿಶ್ವ ಪ್ರಸಿದ್ಧ ಗೋಲ್ ಗುಂಬಜ್
ವಿಶ್ವ ಪ್ರಸಿದ್ಧ ಗೋಲ್ ಗುಂಬಜ್
ಸುದ್ಧಿಯಲ್ಲಿ ಏಕಿದೆ? ವಿಶ್ವವಿಖ್ಯಾತ ಗೋಲ್ ಗುಂಬಜ್ನ ಪೂರ್ವ ಭಾಗದಲ್ಲಿ ಚಜ್ಜಾದ ಒಂದು ಭಾಗದ ಹೊದಿಕೆ ಕುಸಿದಿದೆ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಸಂಭವಿಸಿದೆ.
- ಸುಮಾರು 450 ವರ್ಷಗಳ ಹಿಂದಿನ ಸ್ಮಾರಕ ಹಲವು ದಶಕಗಳ ನಂತರ ಮೊದಲ ಬಾರಿಗೆ ಹಾನಿಗೊಳಗಾಗಿದೆ, ಇಂಡೋ -ಇಸ್ಲಾಮಿಕ್ ಶೈಲಿಯಲ್ಲಿ ಆದಿಲ್ ಶಾ ನಿರ್ಮಿಸಿದ ಸ್ಮಾರಕ ಇದಾಗಿದೆ.
- ಹಿಂದಿನ ಕಾಲದ ಅದೇ ಪ್ರಕಾರದ ವಸ್ತುಗಳನ್ನು ಬಳಸಿ ಅದನ್ನು ಸ್ವಂತಿಕೆಗೆ ಮರುಸ್ಥಾಪಿಸಲಾಗುತ್ತದೆ. ಇದರ ಜೊತೆಗೆ ಹಿಂದೆ ಹಾನಿಯುಂಟಾಗಿದ್ದ ಸ್ಮಾರಕದ ಇತರ ಭಾಗಗಳನ್ನು ದುರಸ್ತಿ ಮಾಡಲಾಗುವುದು
ಗೋಲ್ ಗುಂಬಜ್ ಬಗ್ಗೆ
- ಈ ಹೆಸರಿನ ಅರ್ಥ ‘ವೃತ್ತಾಕಾರದ ಗುಮ್ಮಟ’, ಮತ್ತು ಸಮಾಧಿಯು ನಿಜವಾಗಿ 44 ಮೀಟರ್ ವ್ಯಾಸವನ್ನು ಹೊಂದಿರುವ ಭಾರತದ ಅತಿದೊಡ್ಡ ಗುಮ್ಮಟಗಳಲ್ಲಿ ಒಂದಾಗಿದೆ. ಇದು 1656 ರಲ್ಲಿ ಪೂರ್ಣಗೊಂಡಿತು ಮತ್ತು ಇದರ ವಾಸ್ತುಶಿಲ್ಪಿ ಡಾಬುಲ್ನ ಯಾಕುತ್. ಈ ಗುಮ್ಮಟದ ಅದ್ಭುತ ಲಕ್ಷಣವೆಂದರೆ ಇದು ಕಂಬಗಳಿಂದ ಬೆಂಬಲವಿಲ್ಲದೆ ನಿಂತಿದೆ. ಗುಮ್ಮಟದಲ್ಲಿ ಮಹಮ್ಮದ್ ಆದಿಲ್ ಶಾ, ಆತನ ಇಬ್ಬರು ಪತ್ನಿಯರು, ಆತನ ಪ್ರೇಯಸಿ, ಅವರ ಮಗಳು ಮತ್ತು ಮೊಮ್ಮಗನ ಸಮಾಧಿಗಳಿವೆ.