Published on: December 6, 2021

ವಿಶ್ವ ಮಣ್ಣು ದಿನ-2021

ವಿಶ್ವ ಮಣ್ಣು ದಿನ-2021

ಸುದ್ಧಿಯಲ್ಲಿ ಏಕಿದೆ? ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಡಿಸೆಂಬರ್ 5 ರಂದು  ವಿಶ್ವ ಮಣ್ಣು ದಿನ ಆಚರಣೆಗೊಳ್ಳುತ್ತದೆ.

ಘೋಷವಾಕ್ಯ

  • ವಿಶ್ವ ಮಣ್ಣು ದಿನ-2021‌‌ ಅಂಗವಾಗಿ ‘ಮಣ್ಣಿನ ಸವುಳಾಗುವಿಕೆಯನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ’ ಎಂಬ ಘೋಷವಾಕ್ಯ ನೀಡಲಾಗಿದೆ.

ಮಹತ್ವ

  • ಮಣ್ಣು ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ. ಮನುಷ್ಯ, ಪ್ರಾಣಿ, ಜೀವಿಗಳು, ಸಸ್ಯಗಳಿಗೆ ಆಧಾರವೇ ಮಣ್ಣು. ಮಣ್ಣಿನಿಂದ ಜೀವ, ಮಣ್ಣಿನಿಂದ ಕಾಯ, ಮಣ್ಣು ಅಳಿದರೆ ಮಾನವ ಅಳಿದಂತೆ
  • ಜಗತ್ತಿನ ಶೇ.95ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು. ಈಗಾಗಲೇ ಶೇ.33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಡಿರುವುದು ಕಂಡುಬಂದಿರುವುದರಿಂದ ಉತ್ಪಾದಕತೆಯಲ್ಲಿ ಶೇ.17 ರಷ್ಟು ಕಡಿಮೆಯಾಗಿದೆ. ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ.

ಮಣ್ಣಿನ ಸಂರಕ್ಷಣೆ: ನಮ್ಮೆಲ್ಲರ ಹೊಣೆ

  • ಸಜೀವ ಮಣ್ಣು ಸಕಲ ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧ ಮಾಡುತ್ತದೆ. ಸಾವಯವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸುತ್ತದೆ. ಪ್ರವಾಹಗಳನ್ನು ಹಾಗೂ ಹವಾಮಾನ ಏರುಪೇರನ್ನು ತಡೆಯುತ್ತದೆ. ಭೂಮಿ ಮೇಲಿನ ಜೀವ ಜಂತುಗಳಿಗೆ ಆಶ್ರಯ ನೀಡುತ್ತದೆ. ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸು ಮಾಡಿದ್ದು, ನಂತರ 2014ರ ಡಿಸೆಂಬರ್ 5 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. ಮಣ್ಣಿನ ಸವಕಳಿ, ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಲಕ್ಷಣಗಳು ನಾಶವಾಗುತ್ತಿದೆ
  • ಮಣ್ಣಿನಲ್ಲಿ ಸವುಳು, ಜವುಳು, ಆಮ್ಲ ಮತ್ತು ಕ್ಷಾರಮಯವಾಗಿ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ. ಕರಗುವ ಲವಣಗಳನ್ನು ಭೂಮಿಯಲ್ಲಿ ಉಳಿಸಿಕೊಂಡಾಗ ಮಣ್ಣಿನ ಸವುಳು ಸಂಭವಿಸುತ್ತದೆ. ಇದು ನೈಸರ್ಗಿಕವಾಗಿ ಅಥವಾ ಅನುಚಿತ ಮಾನವ ಚಟುವಟಿಕೆಗಳಿಂದ, ವಿಶೇಷವಾಗಿ ಕೃಷಿ ಪದ್ಧತಿಗಳಿಂದ ಸಂಭವಿಸುತ್ತದೆ. ಇದಲ್ಲದೆ, ಕಡಿಮೆ ಉಪ್ಪು ಕರಗುವಿಕೆಯಿಂದಾಗಿ ಕೆಲವು ಭೂಮಿಗಳು ಆರಂಭದಲ್ಲಿ ಚೌಳಾಗುತ್ತದೆ ಆದ್ದರಿಂದ ಕೃಷಿಕರು ಮಣ್ಣು ಸವುಳಾಗುವುದನ್ನು ತಪ್ಪಿಸುವುದನ್ನು ಗಮನದಲ್ಲಿಟ್ಟುಕೊಂಡೇ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬೇಕು

ಇತಿಹಾಸ

  • ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನಗಳ ಒಕ್ಕೂಟವು ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲು ಶಿಫಾರಸು ಮಾಡಿದೆ. ಥೈಲ್ಯಾಂಡ್ ನಾಯಕತ್ವದಲ್ಲಿ, FAO ವಿಶ್ವ ಮಣ್ಣಿನ ದಿನದ ಔಪಚಾರಿಕ ಸ್ಥಾಪನೆಯನ್ನು ಬೆಂಬಲಿಸಿತು. ಜಾಗತಿಕ ಮಣ್ಣಿನ ಸಹಭಾಗಿತ್ವದ ಅಡಿಯಲ್ಲಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಮೊದಲ ವಿಶ್ವ ಮಣ್ಣಿನ ದಿನವನ್ನು 2014 ರಲ್ಲಿ ಆಚರಿಸಲಾಯಿತು.

ಡಿಸೆಂಬರ್ 5 ಅನ್ನು ಏಕೆ ಆರಿಸಲಾಯಿತು?

  • ಈ ದಿನವು ಥೈಲ್ಯಾಂಡ್‌ನ ದಿವಂಗತ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮದಿನಕ್ಕೆ ಅನುರೂಪವಾಗಿದೆ. ಅವರು ಉಪಕ್ರಮದ ಮುಖ್ಯ ಪ್ರತಿಪಾದಕರಾಗಿದ್ದರು.