Published on: March 4, 2024

ವಿಶ್ವ ಶ್ರವಣ ದಿನ

ವಿಶ್ವ ಶ್ರವಣ ದಿನ

ಸುದ್ದಿಯಲ್ಲಿ ಏಕಿದೆ?  ಪ್ರತಿ ವರ್ಷ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.

ಮುಖ್ಯಾಂಶಗಳು

  • 2024ನೇ ಶ್ರವಣ ದಿನದ ವಿಷಯ: ಮನಃ ಸ್ಥಿತಿಯ ಬದಲಾವಣೆ
  • ಶ್ರವಣ ಸಮಸ್ಯೆಗೆ ಸಂಬಂಧಿಸಿದಂತೆ ಆ ಸಮಸ್ಯೆಯಿಂದ ಬಳಲುತ್ತಿರುವವರು, ಅವರ ಜತೆಗೆ ಇರುವವರು ಮತ್ತು ಸಮಾಜದಲ್ಲಿನ ಎಲ್ಲರ ಮನಸ್ಥಿತಿಯನ್ನು ಬದಲಿಸಬೇಕು ಎಂಬುದು ಈ ಬಾರಿಯ ಗುರಿ.
  • ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ 43 ಕೋಟಿಯಷ್ಟು ಜನರಿಗೆ ಈಗ ಚಿಕಿತ್ಸೆ ನೀಡಬೇಕಿದೆ.

ಉದ್ದೇಶ

 ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ದೊರೆತು, ಅವರೂ ಎಲ್ಲರಂತೆ ಕೇಳಿಸಿಕೊಳ್ಳುವಂತಾಗಬೇಕು ಎಂಬುದು ದಿನದ ಆಚರಣೆಯ ಪ್ರಧಾನ ಉದ್ದೇಶ. ಶ್ರವಣ ದೋಷವನ್ನು ತಡೆಗಟ್ಟುವುದು ಮತ್ತು ಜಾಗೃತಿಮೂಡಿಸುವುದು. ಜನರಿಗೆ ಕಿವಿ ಸಮಸ್ಯೆ ಬಗ್ಗೆ ಶಿಕ್ಷಣ ನೀಡುವುದು ಮತ್ತು ಅವರ ಹಕ್ಕುಗಳ ಬಗ್ಗೆ ಅವರಿಗೆ ಕಲಿಸುವುದು.

ವಿಶ್ವ ಶ್ರವಣ ದಿನದ ಇತಿಹಾಸ: ಮಾರ್ಚ್ 3, 2007 ರಂದು ಮೊದಲ ಬಾರಿಗೆ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಆದರೆ ಮೊದಲು ಇದನ್ನು ಅಂತರಾಷ್ಟ್ರೀಯ ಕಿವಿ ಆರೈಕೆ ದಿನ (Ear Care Day) ವೆಂದು ಕರೆಯಲಾಗಿತ್ತು. 2016 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಶ್ರವಣ ದಿನ ಎಂದು ಘೋಷಿಸಲು ನಿರ್ಧರಿಸಿತು.