Published on: August 23, 2022
ವೋಸ್ಟಾಕ್-2022 ಸೇನಾ ಸಮರಾಭ್ಯಾಸ
ವೋಸ್ಟಾಕ್-2022 ಸೇನಾ ಸಮರಾಭ್ಯಾಸ
where to buy provigil in south africa ಸುದ್ದಿಯಲ್ಲಿ ಏಕಿದೆ?
how to buy generic accutane ತಿಂಗಳ ಕೊನೆಯಲ್ಲಿ ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್ -2022 ಮಿಲಿಟರಿ ತಾಲೀಮಿನಲ್ಲಿ ತಮ್ಮ ಸೈನಿಕರು ಭಾಗವಹಿಸಲಿದ್ದಾರೆ ಎಂದು ಚೀನಾ ತಿಳಿಸಿದೆ. ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಭಾಗವಹಿಸುವಿಕೆಯೂ ಇರಲಿದೆ ಎಂದು ಅದು ಹೇಳಿದೆ.
ಮುಖ್ಯಾಂಶಗಳು
- ಚೀನಾ ಮತ್ತು ರಷ್ಯಾ ಮಿಲಿಟರಿಗಳ ನಡುವಿನ ವಾರ್ಷಿಕ ಸಹಕಾರ ಯೋಜನೆ ಹಾಗೂ ಎರಡು ಕಡೆಯ ಒಮ್ಮತದ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಂದಿನ ದಿನಗಳಲ್ಲಿ ಮಿಲಿಟರಿ ತಾಲೀಮಿನಲ್ಲಿ ಭಾಗವಹಿಸಲು ಕೆಲವು ಸೈನಿಕರನ್ನು ರಷ್ಯಾಕ್ಕೆ ಕಳುಹಿಸಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
- ಇದರಲ್ಲಿ ಭಾರತ, ಬೆಲಾರಸ್, ತಜಕಿಸ್ತಾನ್, ಮಂಗೋಲಿಯಾ ಮತ್ತು ಇತರ ದೇಶಗಳು ಸಹ ಭಾಗವಹಿಸಲಿವೆ ಎಂದು ಅದು ಹೇಳಿದೆ.
- ಕಳೆದ ವರ್ಷ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 17 ದೇಶಗಳು ಭಾಗವಹಿಸಿದ್ದ ರಷ್ಯಾದಲ್ಲಿ ನಡೆದ ಜಪಾಡ್– 2021ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸಿತ್ತು.
- ವೋಸ್ಟಾಕ್-2022 ಸಮರಾಭ್ಯಾಸವು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ.
-
ವೋಸ್ಟಾಕ್ -2022 ಸಮರಾಭ್ಯಾಸವು ರಷ್ಯಾದ ಸೇನಾ ಮುಖ್ಯಸ್ಥ ವ್ಯಾಲೆರಿ ಗೆರಾಸಿಮೊವ್ ಅವರ ನೇತೃತ್ವದಲ್ಲಿ ಪೂರ್ವ ಮಿಲಿಟರಿ ಜಿಲ್ಲೆಯ 13 ತರಬೇತಿ ಮೈದಾನಗಳಲ್ಲಿ ನಡೆಯಲಿದೆ.