Published on: September 24, 2023
ಶಂಕರಾಚಾರ್ಯರ ಭವ್ಯ ಪ್ರತಿಮೆ
ಶಂಕರಾಚಾರ್ಯರ ಭವ್ಯ ಪ್ರತಿಮೆ
ಸುದ್ದಿಯಲ್ಲಿ ಏಕಿದೆ? 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ನರ್ಮದಾ ನದಿಯ ದಡದಲ್ಲಿರುವ ಓಂಕಾರೇಶ್ವರದಲ್ಲಿ ಅನಾವರಣಗೊಳಿಸಿದರು.
ಮುಖ್ಯಾಂಶಗಳು
- ಅಷ್ಟಧಾತುವಿನಿಂದ ನಿರ್ಮಾಣವಾದ ಈ ಪ್ರತಿಮೆಯೊಂದಿಗೆ ‘ಅದ್ವೈತ ಲೋಕ’ ಹೆಸರಿನ ಮ್ಯೂಸಿಯಂ ಮತ್ತು ಆಚಾರ್ಯ ಶಂಕರ್ ಇಂಟರ್‌ನ್ಯಾಶನಲ್ ಅದ್ವೈತ ವೇದಾಂತ ಸಂಸ್ಥೆಯನ್ನು ಕೂಡ ನಿರ್ಮಿಸಲಾಗಿದೆ.
- ವೆಚ್ಚ: ಸುಮಾರು 2100 ಕೋಟಿ ರೂಪಾಯಿ
- ಓಂಕಾರೇಶ್ವರ ಆದಿ ಶಂಕರಾಚಾರ್ಯರ ಜ್ಞಾನದ ಸ್ಥಳವಾಗಿತ್ತು. ಆದ್ದರಿಂದ ಅವರ ಭವ್ಯವಾದ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.
- ಶಿವನಿಗೆ ಸಮರ್ಪಿತವಾಗಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಓಂಕಾರೇಶ್ವರದಲ್ಲಿರುವುದಕ್ಕೆ ಈ ಸ್ಥಳ ಇನ್ನಷ್ಟು ವಿಶೇಷತೆಯನ್ನು ಪಡೆದುಕೊಂಡಿದೆ. ಎಂಟನೇ ಶತಮಾನದ ತತ್ವಜ್ಞಾನಿ ಮತ್ತು ಹಿಂದೂ ಧರ್ಮದಲ್ಲಿ ಪೂಜಿಸಲ್ಪಟ್ಟ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಏಕತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ.
ಶಂಕರಾಚಾರ್ಯರು
- ಜನನ: 8 ನೇ(ಕ್ರಿ.ಶ.788) ಶತಮಾನ ಕೇರಳದಲ್ಲಿ
- ತಮ್ಮ ಬಾಲ್ಯದಲ್ಲಿ ಸನ್ಯಾಸ ಸ್ವೀಕರಿಸಿದ ನಂತರ ಓಂಕಾರೇಶ್ವರವನ್ನು ತಲುಪಿದರು.
- ಗುರು : ಗೋವಿಂದ ಭಗವತ್ಪಾದ
- ಧಾರ್ಮಿಕ ನಂಬಿಕೆಗಳ ಪ್ರಕಾರ, ಶಂಕರಾಚಾರ್ಯರು ಅದ್ವೈತ ವೇದಾಂತ ತತ್ತ್ವವನ್ನು ಜನರಿಗೆ ಹರಡಲು 12 ನೇ ವಯಸ್ಸಿನಲ್ಲಿ ಓಂಕಾರೇಶ್ವರದೊಂದಿಗೆ ದೇಶದ ಇತರ ಭಾಗಗಳಿಗೂ ಅವರು ತೆರಳಿದರು.
- ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಮ್ನಾಯ ಪೀಠ (ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ ಹಾಗೂ ಪಶ್ಚಿಮದಲ್ಲಿ ದ್ವಾರಕೆ ಪಶ್ಚಿಮಾಮ್ನಾಯ ಪೀಠ)ಗಳನ್ನು ಸ್ಥಾಪಿಸಿದರು.
- ತಮ್ಮ 32 ನೇ ವಯಸ್ಸಿನಲ್ಲಿ ಶ್ರೀ ಬದರೀ ಕ್ಷೇತ್ರದಲ್ಲಿ ಮಹಾಸಮಾಧಿಯನ್ನು ಹೊಂದಿದರು.