Published on: May 11, 2024
ಶಕ್ಸ್ಗಾಮ್ ಕಣಿವೆ
ಶಕ್ಸ್ಗಾಮ್ ಕಣಿವೆ
ಸುದ್ದಿಯಲ್ಲಿ ಏಕಿದೆ? ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರಮುಖ ಆಯಕಟ್ಟಿನ ಭಾಗವಾಗಿರುವ ಶಕ್ಸ್‌ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ನಿರ್ಮಾಣ ಕಾಮಗಾರಿಯು ಕಾನೂನುಬಾಹಿರವಾದದ್ದಾಗಿದೆ ಎಂದು ಭಾರತವು ಚೀನಾ ಬಳಿ ಪ್ರಬಲವಾಗಿ ಪ್ರತಿಭಟನೆ ನಡೆಸಿದೆ.
ಮುಖ್ಯಾಂಶಗಳು
- ಅಘಿಲ್ ಪಾಸ್ ಬಳಿ ಚೀನಾದ ರಸ್ತೆ ನಿರ್ಮಾಣ ಪ್ರಗತಿಯು, ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ
- ಇತ್ತೀಚಿನ ಉಪಗ್ರಹ ಚಿತ್ರಗಳು ಚೀನಾದ ರಸ್ತೆಯು ಅಘಿಲ್ ಪಾಸ್ ಅನ್ನು ಸಮೀಪಿಸುತ್ತಿರುವುದನ್ನು ತೋರಿಸಿದೆ, ಸಿಯಾಚಿನ್ ಗ್ಲೇಸಿಯರ್‌ನ ಉತ್ತರ ಭಾಗದ ಕಡೆಗೆ ನಿರ್ಮಾಣ ಪುನರಾರಂಭವಾಗಿದೆ.
ಅಘಿಲ್ ಪಾಸ್:
- ಇದು ಕಾರಕೋರಂನಲ್ಲಿರುವ ಮೌಂಟ್ ಗಾಡ್ವಿನ್-ಆಸ್ಟೆನ್ ಪರ್ವತದ ಉತ್ತರಕ್ಕೆ ನೆಲೆಗೊಂಡಿದೆ.
- ಇದು ಲಡಾಖ್ ಅನ್ನು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದೊಂದಿಗೆ ಸಂಪರ್ಕಿಸುತ್ತದೆ.
- ಚೀನಾವು ಸೆಪ್ಟೆಂಬರ್ 2017 ಮತ್ತು ಫೆಬ್ರವರಿ 2018 ರ ನಡುವೆ ಸುಮಾರು 5,163 ಚದರ ಕಿಲೋಮೀಟರ್ ವಿಸ್ತೀರ್ಣದ ಶಕ್ಸ್‌ಗಾಮ್ ಕಣಿವೆಯಲ್ಲಿ ಸುಮಾರು 70 ಕಿಮೀ ಮೆಟಲ್ ರಸ್ತೆಯನ್ನು ನಿರ್ಮಿಸಿದೆ ಎಂದು ವರದಿಯಾಗಿದೆ.
ಶಕ್ಸ್‌ಗಾಮ್ ಕಣಿವೆಯ ಬಗ್ಗೆ
ಶಕ್ಸ್‌ಗಾಮ್ ಕಣಿವೆ, ಟ್ರಾನ್ಸ್-ಕಾರಕೋರಂ ಪ್ರದೇಶವಾಗಿದೆ, ಇದು ಪಾಕ್ ಆಕ್ರಮಿತ ಕಾಶ್ಮೀರದ (PoK) ಭಾಗವಾಗಿರುವ ಆಯಕಟ್ಟಿನ ಪ್ರಮುಖ ಪ್ರದೇಶವಾಗಿದೆ. ಇದನ್ನು ಭಾರತ-ಚೀನಾ ಯುದ್ಧದ ಒಂದು ವರ್ಷದ ನಂತರ 1963 ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಟ್ಟಿತು.
ಭಾರತದ ನಿಲುವು: ಕಣಿವೆಯು ಭಾರತದ ಭಾಗವಾಗಿದೆ. 1963ರ ಚೀನಾ–ಪಾಕಿಸ್ತಾನ ಗಡಿ ಒಪ್ಪಂದವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಈ ಒಪ್ಪಂದದ ಮೂಲಕ ಪಾಕಿಸ್ತಾನ ಈ ಪ್ರದೇಶವನ್ನು ಕಾನೂನುಬಾಹಿರವಾಗಿ ಚೀನಾ ದೇಶಕ್ಕೆ ಬಿಟ್ಟುಕೊಡಲು ಪ್ರಯತ್ನಿಸಿದೆ’ ಎಂದು ಹೇಳಿದೆ.