Published on: September 16, 2023
ಶಿಲಾಯುಗದ, ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು
ಶಿಲಾಯುಗದ, ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು
ಸುದ್ದಿಯಲ್ಲಿ ಏಕಿದೆ? ದಕ್ಷಿಣ ಕನ್ನಡ ಜಿಲ್ಲೆಮೂಡುಬಿದಿರೆ ಸಮೀಪದ ಮೂಡುಕೊಣಾಜೆಯ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಸುಟ್ಟ ಆವಿಗೆ ಮಣ್ಣಿನ, ಅಪರೂಪದ ಶಿಲ್ಪಗಳು ಪತ್ತೆಯಾಗಿವೆ.
ಮುಖ್ಯಾಂಶಗಳು
- ‘ಹರಪ್ಪ ನಾಗರಿಕತೆ ಅಥವಾ ತಾಮ್ರ ಶಿಲಾಯುಗ ಸಂಸ್ಕೃತಿಯ ನಂತರ ಬೃಹತ್ ಶಿಲಾಯುಗದ ಪದರೀಕೃತ ಸನ್ನಿವೇಶದಲ್ಲಿ ದೊರೆತ ಈ ಶಿಲ್ಪಗಳು, ಭಾರತೀಯ ಸಾಂಸ್ಕೃತಿಕ ಇತಿಹಾಸ ಅಧ್ಯಯನದ ಮಹತ್ವದ ಪ್ರಾಚ್ಯಾವಶೇಷಗಳಾಗಿವೆ.
- ತುಳುನಾಡಿನ ಮಾತೃಮೂಲದ ಸಾಮಾಜಿಕ ವ್ಯವಸ್ಥೆ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳಾಗಿವೆ’.
ದೊರೆತ ಅವಶೇಷಗಳ ವಿವರ
- ‘ರಾಜ್ಯದಲ್ಲಿಇದೇ ಮೊದಲ ಬಾರಿಗೆ ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆ ಶಿಲ್ಪಗಳು ಪತ್ತೆಯಾಗಿವೆ.
- ಈ ಶಿಲ್ಪಗಳು, ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳಿಗೆ ಸ್ತ್ರೀ ತತ್ವದ ಸಂಕೇತವಾಗಿ ಎರಡು ಮೊಲೆಗಳನ್ನು ಅಂಟಿಸಲಾಗಿದೆ. ಇಂತಹ ಒಂದು ಶಿಲ್ಪ ಕೇರಳದ ಮಲಪ್ಪುರದ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿರುವುದನ್ನು ಬಿಟ್ಟರೆ, ದೇಶದ ಎಲ್ಲೂ ಪತ್ತೆಯಾಗಿಲ್ಲ.
- ಈಜಿಪ್ಟ್ನಲ್ಲಿಇಂಥ ಶಿಲ್ಪಗಳು ವ್ಯಾಪಕವಾಗಿ ಕಂಡುಬಂದಿವೆ’. ‘ಈ ಶಿಲ್ಪಗಳು ಮಾತೃಮೂಲ ಸಂಸ್ಕೃತಿಯ ಪ್ರಬಲ ಸಾಕ್ಷ್ಯಗಳಾಗಿವೆ. ಈ ಶಿಲ್ಪ ಲಕ್ಷಣಗಳು ಇಲ್ಲಿನ ದೈವಾರಾಧನೆಯ ಶಿಲ್ಪಗಳ ಅತ್ಯಂತ ಪ್ರಾಚೀನ ಪುರಾವೆಗಳಾಗಿವೆ.
- ಇವುಗಳ ಕಾಲಮಾನವನ್ನು ಕನಿಷ್ಠ ಕ್ರಿ.ಪೂ 800 ಅಥವಾ 700 ಆಗಿರಬಹುದು ಎಂದು ಅಂದಾಜಿಸಲಾಗಿದೆ’.
ಹರಪ್ಪಾ ನಾಗರೀಕತೆ
- ಹರಪ್ಪಾ ನಾಗರೀಕತೆಯನ್ನು ಸಿಂಧೂ ಕಣಿವೆಯ ನಾಗರೀಕತೆ ಎಂದೂ ಕರೆಯುತ್ತಾರೆ
- ಕಾಲಮಾನ 3000 BC ಯಿಂದ 1300 BC
ಭಾರತದಲ್ಲಿ, ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ತಾಣಗಳು
- ಲೋಥಾಲ್ ಮತ್ತು ಧೋಲಾವಿರಾ ಗುಜರಾತ್
- ಕಾಲಿಬಂಗನ್ ಮತ್ತು ಬಲಾತಾಲ್ ರಾಜಸ್ಥಾನ
- ರಾಖಿಗರ್ಹಿ ಹರಿಯಾಣ
- ಸಿಂಧೂ ಕಣಿವೆ ನಾಗರಿಕತೆಯು ಪ್ರಸ್ತುತ ಪಂಜಾಬ್‌ನಲ್ಲಿರುವ ರೋಪರ್‌ನಲ್ಲಿದೆ.