Published on: February 3, 2023

ಶ್ರೀ ಅನ್ನ ಸಿರಿದಾನ್ಯ

ಶ್ರೀ ಅನ್ನ ಸಿರಿದಾನ್ಯ


ಸುದ್ದಿಯಲ್ಲಿ ಏಕಿದೆ? ಶ್ರೀ ಅನ್ನ ಹೆಸರಿನಲ್ಲಿ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸಣ್ಣ ರೈತರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತದೆ  ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.


ಮುಖ್ಯಾಂಶಗಳು 

  • ‘ಭಾರತವು ಇಡೀ ವಿಶ್ವಕ್ಕೆ ಸಿರಿಧಾನ್ಯಗಳನ್ನು ಮಹತ್ವದ ಕೊಡುಗೆಯನ್ನಾಗಿ ನೀಡಿದೆ. ಭಾರತವು ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವ ಜಗತ್ತಿನ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ.
  • ಭಾರತದ ಪ್ರಯತ್ನದಿಂದ 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ವಿಶ್ವಸಂಸ್ಥೆ ಘೋಷಿಸಿದೆ.
  • ಸಂಶೋಧನಾ ಕೇಂದ್ರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿದಾನ್ಯಕ್ಕೆ ಸಂಬಂದಿಸಿದ ಉತ್ತಮ ಅಭ್ಯಾಸಗಳು, ಸಂಶೋಧನೆ ಮತ್ತು ತಂತ್ರಜ್ಞಾನ ಹಂಚಿಕೊಳ್ಳುವ ನಿಟ್ಟಿನಲ್ಲಿ ಹೈದರಾಬಾದ್ ನಲ್ಲಿ ಸಿರಿಧಾನ್ಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಸಲಾಗುವುದು.

ನಿಮಗಿದು ತಿಳಿದಿರಲಿ

  • ಭಾರತ, ಜೋಳ, ರಾಗಿ, ಬಾಜ್ರ, ಕುತ್ತು, ರಾಮದಾನ ಮತ್ತು ಸಾಮೆಯಂತಹ ಧಾನ್ಯಗಳ ಅತಿದೊಡ್ಡ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರ.
  • ಭಾರತವು ರಾಗಿಗೆ ಜಾಗತಿಕ ಕೇಂದ್ರವಾಗಿದೆ.

ಸಿರಿಧಾನ್ಯ ಮತ್ತು ಆರೋಗ್ಯ

ಸಿರಿಧಾನ್ಯಗಳು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಹೀಗಾಗಿಯೇ ಇವುಗಳನ್ನು ಪೋಷಕಾಂಶಗಳ ಪವರ್‌ಹೌಸ್ ಎಂದು ಕರೆಯಲಾಗುತ್ತದೆ. ತೂಕ ಇಳಿಕೆ, ಮಧುಮೇಹದ ಉತ್ತಮ ನಿರ್ವಹಣೆ, ಜೀರ್ಣಕ್ರಿಯೆ, ಉರಿಯೂತ, ಉತ್ತಮ ರೋಗನಿರೋಧಕ ಶಕ್ತಿಗೆ ಸಿರಿಧಾನ್ಯಗಳು ತುಂಬಾ ಒಳ್ಳೆಯದು.