Published on: July 19, 2023

‘ಸಂಚಾರ ಆರೋಗ್ಯ ಸೇವೆ’

‘ಸಂಚಾರ ಆರೋಗ್ಯ ಸೇವೆ’

ಸುದ್ದಿಯಲ್ಲಿ ಏಕಿದೆ? ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಗಣಿ ಬಾಧಿತ ಗ್ರಾಮಗಳ ಜನರ ಆರೋಗ್ಯ ತಪಾಸಣೆಗಾಗಿ ನೂತನವಾಗಿ ಸಂಚಾರ ಆರೋಗ್ಯ ಘಟಕ ಸೇವೆ ಜಾರಿಗೆ ತರಲಾಗಿದೆ.

ಮುಖ್ಯಾಂಶಗಳು

  • ಇದಕ್ಕಾಗಿ ಜಿಲ್ಲೆಯಲ್ಲಿನ ಮರಳು, ಕಲ್ಲು, ಕಬ್ಬಿಣ ಗಣಿಗಾರಿಕೆಯಿಂದ ಬಾಧಿತವಾಗಿರುವ ಗ್ರಾಮಗಳನ್ನು ಗುರುತಿಸಲಾಗಿದೆ.
  • ಚಿತ್ರದುರ್ಗ ಆರೋಗ್ಯ ಸೇವೆ ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ಈ ಸೇವೆಯನ್ನು ರಾಜ್ಯ ಸರ್ಕಾರ ಜಾರಿ ಮಾಡುತ್ತಿದೆ.
  • ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಂಯುಕ್ತವಾಗಿ ಮೇಲುಸ್ತುವಾರಿ ವಹಿಸಲಿವೆ.
  • ಜಿಲ್ಲೆಯಲ್ಲಿ 163 ಗ್ರಾಮಗಳನ್ನು ಗುರುತಿಸಲಾಗಿದೆ’.
  • ಸಾಮಾನ್ಯ ತಪಾಸಣೆ ಜತೆಗೆ ಲಸಿಕೆ ಕಾರ್ಯಕ್ರಮಗಳು, ಕ್ಷಯರೋಗ, ಕುಷ್ಠರೋಗಕ್ಕೂ ಇದರಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ.

ಉದ್ದೇಶ:  ‘ತಾಲ್ಲೂಕಿನಲ್ಲಿ ಗುರುತಿಸಿರುವ ಬಹುತೇಕ ಗ್ರಾಮಗಳು ಸಾರಿಗೆ ಅವ್ಯವಸ್ಥೆಯಿಂದ ಕೂಡಿದ್ದು ಆರೋಗ್ಯ ಸೇವೆ ಕೊರತೆ ಎದುರಿಸುತ್ತಿದ್ದವು. ಈ ಯೋಜನೆ ಈ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಿದೆ.