Published on: October 30, 2022

ಸಮಾನ ಪಂದ್ಯ ಶುಲ್ಕ: ಬಿಸಿಸಿಐ ಐತಿಹಾಸಿಕ ಘೋಷಣೆ

ಸಮಾನ ಪಂದ್ಯ ಶುಲ್ಕ: ಬಿಸಿಸಿಐ ಐತಿಹಾಸಿಕ ಘೋಷಣೆ

ಸುದ್ದಿಯಲ್ಲಿ  ಏಕಿದೆ?

ಪುರುಷ ಕ್ರಿಕೆಟಗರಿಗೆ ನೀಡುವಷ್ಟೇ ಸಂಭಾವನೆ ಯನ್ನು ಮಹಿಳಾ ಕ್ರಿಕೆಟಿಗರಿಗೂ ನೀಡುವ ಐತಿಹಾಸಿಕ ತೀರ್ಮಾನವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತೆಗೆದುಕೊಂಡಿದೆ. ಬಿಸಿಸಿಐ ಅಪೆಕ್ಸ್‌ ಸಮಿತಿ ತುರ್ತುಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.

ಮುಖ್ಯಾಂಶಗಳು

  • ಮಂಡಳಿಯ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರ್ತಿಯರಿಗೆ ಹೊಸ ಸಂಭಾವನೆ ಅನ್ವಯವಾಗಲಿದೆ. ಮಹಿಳಾ ಕ್ರಿಕೆಟಿಗರು ಇನ್ನು ಮುಂದೆ ಏಕದಿನ ಪಂದ್ಯಗಳಿಗೆ ಈಗ ಪಡೆಯುವ ಸಂಭಾವನೆಗಿಂತ ಆರು ಪಟ್ಟು ಅಧಿಕ ವೇತನ ಗಳಿಸಲಿದ್ದಾರೆ.
  • ಭಾರತವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ ನೀಡುವ ಎರಡನೇ ದೇಶ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಇಂತಹದೇ ನಿರ್ಧಾರ ತೆಗೆದುಕೊಂಡಿತ್ತು.

ಉದ್ದೇಶ

  • ‘ಲಿಂಗ ಅಸಮಾನತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಬಿಸಿಸಿಐ ಇಟ್ಟ ಮೊದಲ ಹೆಜ್ಜೆಯಿದು. ಇನ್ನು ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಸಮಾನ ಪಂದ್ಯ ಶುಲ್ಕ ಪಡೆಯಲಿದ್ದು, ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಕಾಲಿಡುತ್ತಿದ್ದೇವೆ’ , ಈ ತೀರ್ಮಾನದಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ದೊಡ್ಡ ಪ್ರೋತ್ಸಾಹ ಸಿಗುತ್ತದೆ. ಪುರುಷ ಹಾಗೂ ಮಹಿಳಾ ಕ್ರಿಕೆಟ್‌ ನಡುವಿನ ಅಂತರವನ್ನು ತೊಲಗಿಸಲು ಇದು ದಿಟ್ಟ ಹೆಜ್ಜೆಯಾಗಿದೆ’