Published on: November 19, 2021
ಸರಕಾರದ ಡಿಜಿಟಲ್ ಕರೆನ್ಸಿ
ಸರಕಾರದ ಡಿಜಿಟಲ್ ಕರೆನ್ಸಿ
ಸುದ್ಧಿಯಲ್ಲಿ ಏಕಿದೆ ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮುಂದಿನ ವರ್ಷ ತನ್ನ ಮೊದಲ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.
- ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಕರೆನ್ಸಿಯ ವರ್ಚುವಲ್ ರೂಪವಾಗಿದ್ದು, ಇದರ ಬಿಡುಗಡೆ ಬಗ್ಗೆ ಅಧಿಕೃತ ವೇಳಾಪಟ್ಟಿ ನಿಗದಿಯಾಗಿಲ್ಲ.
ಏನಿದು ಆರ್ನಿಐ ಡಿಜಿಟಲ್ ಕರೆನ್ಸಿ?
- ಈಗ ಚಲಾವಣೆಯಲ್ಲಿರುವ ಕರೆನ್ಸಿ ರೂಪಾಯಿಗೆ ಪರ್ಯಾಯವಾಗಿ ಬಳಸಬಹುದಾದ ವರ್ಚುವಲ್ ಕರೆನ್ಸಿಯೇ ಡಿಜಿಟಲ್ ಕರೆನ್ಸಿ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಚಲಾವಣೆಗೆ ತರಲು ಆರ್ಬಿಐ ಸಜ್ಜಾಗುತ್ತಿದೆ.
ವ್ಯತ್ಯಾಸವೇನು?
- ಇದು ಬಿಟ್ ಕಾಯಿನ್ ಮಾದರಿಯ ಕ್ರಿಪ್ಟೊ ಕರೆನ್ಸಿ ಅಲ್ಲ. ಬಿಟ್ ಕಾಯಿನ್ ಡಿಜಿಟಲ್ ದತ್ತಾಂಶಗಳೊಂದಿಗೆ ಸ್ಟೋರ್ ಆಗಿರುತ್ತದೆ. ಹಾಗೂ ವಿಕೇಂದ್ರೀಕರಣವಾಗಿರುತ್ತದೆ. ಹಾಗೂ ಯಾವುದೇ ಸರಕಾರಿ ನಿಯಂತ್ರಕ ವ್ಯವಸ್ಥೆಗೆ ಸಂಬಂಧಿಸಿರುವುದಿಲ್ಲ. ಮತ್ತೊಂದು ಕಡೆ ಆರ್ಬಿಐ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಸರಕಾರದ ಮಾನ್ಯತೆ ಗಳಿಸಿರುತ್ತದೆ.
ಪ್ರಯೋಜನವೇನು?
- ಕಾಗದದ ನೋಟುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಹಣಕಾಸು ವರ್ಗಾವಣೆ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಸುಗಮವಾಗಲಿದೆ. ಜತೆಗೆ ಖಾಸಗಿ ಕ್ರಿಪ್ಟೊ ಕರೆನ್ಸಿಗಳಿಗೆ ಪರ್ಯಾಯವಾಗಿ ಡಿಜಿಟಲ್ಕರೆನ್ಸಿಯನ್ನು ಚಲಾವಣೆಗೊಳಿಸಬಹುದು.