Published on: July 3, 2024

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರ

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರ

ಸುದ್ದಿಯಲ್ಲಿ ಏಕಿದೆ? ‘ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಲು ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆಯ (ಕರವೇ) ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಸರೋಜಿನಿ ಮಹಿಷಿ ವರದಿ

  • ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆ ಸ್ವರೂಪವನ್ನು ಅಧ್ಯಯನ ಮಾಡಿ ಕಾರ್ಯಸಾದುವಾದ ಪರಿಹಾರ ಮಾರ್ಗಗಳನ್ನು ಸೂಚಿಸಿ ವರದಿ ಸಲ್ಲಿಸಲು ಸಂಸದೆ ಡಾಕ್ಟರ್ ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ 1984ರಲ್ಲಿ ಕರ್ನಾಟಕ ಸರ್ಕಾರ ಸಮಿತಿಯನ್ನು ರಚಿಸಿತು. ಈ ಸಮಿತಿಯು 1986 ರಲ್ಲಿ ವರದಿಯನ್ನು ಸಲ್ಲಿಸಿತ್ತು.
  • ಈ ವರದಿಯ ಪ್ರಕಾರ ಸ್ಥಳೀಯರಿಗೆ ಉದ್ಯೋಗ ಎಂಬುದಕ್ಕೆ ತಾತ್ವಿಕ ನೆಲೆಯನ್ನು ಉದಗಿಸಿತು, ಹಾಗೆ ಸ್ಥಳೀಯರು ಎಂದರೆ ಯಾರು ಎಂಬುದಕ್ಕೆ ಖಚಿತ ಮಾಪನವನ್ನು ಅಳವಡಿಸಿ ರಾಷ್ಟ್ರದ ಗಮನ ಸೆಳೆಯಿತು ಸ್ಥಳೀಯರು (ಕನಿಷ್ಠ 15 ವರ್ಷಗಳಿಂದಲೂ) ನಿವಾಸಿ ಮಾನದಂಡವನ್ನು ಹಲವು ರಾಜ್ಯಗಳು ಅಳಿಸಿ ಅಳವಡಿಸಿಕೊಂಡಿವೆ.
  • ಈ ವರದಿಯು 58 ಅಂಶಗಳನ್ನು ಒಳಗೊಂಡಿದೆ.
  • ಈ ವರದಿಯು ರಾಷ್ಟ್ರೀಯ ಐಕ್ಯತಾ ಪರಿಷತ್ತಿನ ಉಪ ಸಮಿತಿಯು 1968ರಲ್ಲಿ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡಿದೆ. ಆ ವರದಿಯ ಪ್ರಕಾರ ಅರ್ಹತೆಯುಳ್ಳ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿರುವಾಗ ಉದ್ಯೋಗಾವಕಾಶದಲ್ಲಿ ಅವರಿಗೆ ಹೆಚ್ಚಿನ ಭಾಗ ದೊರಕಿಸುವಂತೆ ಮಾಡಿರುವುದು ಈ ಶಿಫಾರಸ್ಸನ್ನು ರಾಷ್ಟ್ರೀಯ ಐಕ್ಯತ್ತ ಪರಿಷತ್ತು 22 ಜೂನ್ 1968 ರಂದು ನಡೆದ ಸಭೆಯಲ್ಲಿ ಅಂಗೀಕರಿಸಿತ್ತು
  • ಡಾ. ಸರೋಜಿನಿ ಮಹಿಶಿ ಅವರು ವರದಿ ನೀಡಿದಾಗ ಐಟಿಬಿಟಿ ಬಹು ರಾಷ್ಟ್ರೀಯ ಸಂಸ್ಥೆಗಳು ಇತ್ಯಾದಿಗಳು ಇರಲಿಲ್ಲ ಹಾಗಾಗಿ ಅವು ಮಹಿಶಿ ವರದಿಯಲ್ಲಿ ಸೇರಿಲ್ಲ ಇದನ್ನು ಗಮನಿಸಿ ಕೈಗಾರಿಕಾ ನೀತಿ 2014-19ರಲ್ಲಿ ಕೆಳಗಿನಂತೆ ಸೇರಿಸಿದೆ.
  • ಹೊಸದಾಗಿ ಕೈಗಾರಿಕಾ ಬಂಡವಾಳ ಹೂಡಿಕೆಯಾಗುವ ಎಲ್ಲಾ ಉದ್ಯಮಗಳು ಅತ್ಯಧಿಕ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಷ್ಟಿಸಿ ಒಟ್ಟು ಉದ್ಯೋಗದ ಆಧಾರದ ಮೇಲೆ ಕನ್ನಡಿಗರಿಗೆ ಶೇಕಡ 70 ರಷ್ಟು ನೀಡಬೇಕು ಹಾಗೂ ಗ್ರೂಪ್ ಡಿ ಯಲ್ಲಿ ಶೇ 1೦೦ ರಷ್ಟು ನೀಡಬೇಕು