Published on: December 6, 2022

ಸಿಂಧುಜಾ- ಐ

ಸಿಂಧುಜಾ- ಐ

ಸುದ್ದಿಯಲ್ಲಿ ಏಕಿದೆ?

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್‌ (ಐಐಟಿ–ಎಂ)ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ ಅಭಿವೃದ್ಧಿಪಡಿಸಿದ್ದಾರೆ.

ಮುಖ್ಯಾಂಶಗಳು

  • ಸಾಗರದ ಅಲೆಗಳನ್ನು ವಿದ್ಯುತ್‌ ಆಗಿ ಪರಿವರ್ತಿಸುವ ಉಪಕರಣವಾಗಿದೆ.
  • ತಮಿಳುನಾಡಿನ ತೂತುಕುಡಿ ಕರಾವಳಿಯ ಸುಮಾರು 6 ಕೀ.ಮೀ. ದೂರದಲ್ಲಿ 20 ಮೀಟರ್ ಆಳ ಹೊಂದಿರುವ ಸಾಗರ ಸ್ಥಳದಲ್ಲಿ ‘ಸಿಂಧುಜಾ–ಐ’ ಉಪಕರಣವನ್ನು ಸಂಶೋಧಕರು ಪ್ರಾಯೋಗಿಕ ಪರೀಕ್ಷೆಗಾಗಿ ಅಳವಡಿಸಿದ್ದಾರೆ.
  • ಮುಂದಿನ ಮೂರು ವರ್ಷಗಳಲ್ಲಿ ಸಾಗರ ಅಲೆಗಳಿಂದ ಒಂದು ಮೆಗಾವಾಟ್ ವಿದ್ಯುತ್‌ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ.
  • ಯೋಜನೆಗೆ ಧನಸಹಾಯ: ಈ ಯೋಜನೆಗೆ ಐಐಟಿ–ಎಂನ ‘ಇನ್ನೋವೇಟಿವ್ ರಿಸರ್ಚ್ ಪ್ರಾಜೆಕ್ಟ್ ’ ಡಿಎಸ್‌ಟಿ ನಿಧಿ- ಪ್ರಯಾಸ್‌ ಯೋಜನೆಯ ಅಡಿಯಲ್ಲಿ ಟಿಬಿಐ-ಕೆಐಇಟಿ, ಆಸ್ಟ್ರೇಲಿಯಾ ಸರ್ಕಾರದ  ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ, ಆಸ್ಟ್ರೇಲಿಯಾ ಹಳೆಯ ವಿದ್ಯಾರ್ಥಿಗಳ ಅನುದಾನ ಯೋಜನೆ 2022 ಮೂಲಕ ಧನಸಹಾಯ ಲಭಿಸಿದೆ.
  • ಗುರಿ: ದೇಶವು 7,500 ಕಿ.ಮೀ ಉದ್ದದ ಕರಾವಳಿ ಹೊಂದಿದೆ. 54 ಗಿಗಾ ವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಶಕ್ತಿಯ ಅಗತ್ಯವನ್ನು ಗಣನೀಯ ಪ್ರಮಾಣದಲ್ಲಿ ಪೂರೈಸುತ್ತದೆ. ಇದು 2030ರ ವೇಳೆಗೆ ಹವಾಮಾನ ಬದಲಾವಣೆ ಸಂಬಂಧ ನವೀಕರಿಸಬಹುದಾದ ಇಂಧನ ಮೂಲದಿಂದ 500 ಗಿಗಾ ವಾಟ್‌ ವಿದ್ಯುತ್ ಉತ್ಪಾದಿಸುವ ಗುರಿಗಳನ್ನು ಸಾಧಿಸಲು ದೇಶಕ್ಕೆ ನೆರವಾಗಲಿದೆ’.