Published on: January 6, 2022

ಸಿಗ್ ಸೌರ್-ಅಸಾಲ್ಟ್ ರೈಫಲ್ ಹಾಗೂ ಪಿಸ್ತೂಲು

ಸಿಗ್ ಸೌರ್-ಅಸಾಲ್ಟ್ ರೈಫಲ್ ಹಾಗೂ ಪಿಸ್ತೂಲು

http://vantagehsi.com/tag/fruit-lover/home-health-care-send-your-referrals/ ಸುದ್ಧಿಯಲ್ಲಿ ಏಕಿದೆ ? ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಗೆ ಶೀಘ್ರದಲ್ಲೇ ಅಮೆರಿಕದ ಸಿಗ್‌ ಸೌರ್‌ ಅಸಾಲ್ಟ್‌ ರೈಫಲ್‌ ಹಾಗೂ ಪಿಸ್ತೂಲುಗಳು ಲಭ್ಯವಾಗಲಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಭಾರಿ ಬಲ ಸಿಗಲಿದೆ.

Bāruipur ಮುಖ್ಯಾಂಶಗಳು

  • ಅಮೆರಿಕದಿಂದ ಅತ್ಯಾಧುನಿಕ 500 ಸಿಗ್‌ ಸೌರ್‌-716 ರೈಫಲ್‌ ಹಾಗೂ 100 ಸಿಗ್‌ ಸೌರ್‌ ಎಂಪಿಎಕ್ಸ್‌ 9 ಎಂಎಂ ಪಿಸ್ತೂಲುಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಇವು ಪೊಲೀಸರಿಗೆ ಲಭ್ಯವಾಗಲಿವೆ. ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಅತ್ಯಾಧುನಿಕ ರೈಫಲ್‌ ಹಾಗೂ ಪಿಸ್ತೂಲುಗಳು ಸಿಕ್ಕಂತಾಗಲಿದೆ.
  • ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಹಾಗೂ ಗಣ್ಯರ ರಕ್ಷಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಆಧುನಿಕ ಶಸ್ತ್ರಾಸ್ತ್ರ ನೀಡಲಾಗುತ್ತದೆ.
  • ಭಾರತೀಯ ಸೇನೆ ಸಹ ಅಮೆರಿಕದಿಂದ ಖರೀದಿ ಅಸಾಲ್ಟ್‌ ರೈಫಲ್‌ ಹಾಗೂ ಬಂದೂಕುಗಳ ಖರೀದಿಗೆ ಮುಂದಾಗಿದೆ. 2019ರಲ್ಲಿ ಸಿಗ್‌ ಸೌರ್‌ ಮಾದರಿಯ 72,400 ರೈಫಲ್‌ಗಳ ಖರೀದಿಗೆ 700 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ರೈಫಲ್‌ಗಳ ವಿಶೇಷವೇನು?

  • ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಸಿಗ್‌ ಸೌರ್‌-716 ರೈಫಲ್‌ಗಳು 7.62/51 ಎಂಎಂ (ಐಎನ್‌ಎಸ್‌ಎಎಸ್‌ ರೈಫಲ್‌ಗಳು 5.56/45 ಎಂಎಂ ಹಾಗೂ 4.01 ಕೆಜಿ ತೂಕ) ಕಾಟ್ರಿಜ್‌ಗಳನ್ನು ಹೊಂದಿವೆ. ನಿಮಿಷಕ್ಕೆ 650-850 ಸುತ್ತಿನ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದ್ದು, 500 ಮೀಟರ್‌ ವ್ಯಾಪ್ತಿಯ ಗುರಿಗಳನ್ನು ಹೊಡೆದುರುಳಿಸಲಿವೆ. ಮ್ಯಾಗಜಿನ್‌ ಇಲ್ಲದೆ 3.82 ಕೆಜಿ ತೂಕ ಹೊಂದಿವೆ. ಹಾಗೆಯೇ, ಸಿಗ್‌ ಎಂಪಿಎಕ್ಸ್‌ 9 ಎಂಎಂ ಬಂದೂಕುಗಳು ನಿಮಿಷಕ್ಕೆ 850 ಸುತ್ತು ಗುಂಡು ಹಾರಿಸ ಬಹುದಾಗಿದ್ದು, 2.94 ಕೆಜಿ ತೂಕ ಹೊಂದಿವೆ.
  • ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿವಾರಿಸುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತೀಯ ಸೇನೆಯ ವಿವಿಧ ಪಡೆಗಳ ಜತೆಗೆ ಪೊಲೀಸರು ಜಂಟಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ.