Published on: November 1, 2022
ಸುಕನ್ಯಾ ಸಮೃದ್ಧಿ ಮಹೋತ್ಸವ
ಸುಕನ್ಯಾ ಸಮೃದ್ಧಿ ಮಹೋತ್ಸವ
ಸುದ್ದಿಯಲ್ಲಿ ಏಕಿದೆ?
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ದೇಶದ 75 ನಗರಗಳಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ ಹಮ್ಮಿಕೊಂಡಿತ್ತು. ರಾಜ್ಯದ ಐದು ನಗರಗಳ ಪೈಕಿ ಕೊಪ್ಪಳ ಅತಿ ಹೆಚ್ಚು ಖಾತೆ ತೆರೆಯುವುದರ ಮೂಲಕ ಮೊದಲನೆಯ ಸ್ಥಾನ ಪಡೆದಿದೆ.
ಮುಖ್ಯಾಂಶಗಳು
- ರಾಜ್ಯದಲ್ಲಿ ಕೊಪ್ಪಳ, ಧಾರವಾಡ, ಪೀಣ್ಯ ದಾಸರಹಳ್ಳಿ, ಉಡುಪಿ, ಚನ್ನರಾಯಣಪಟ್ಟಣವನ್ನು ಆಯ್ಕೆ ಮಾಡಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್11ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
- ಕೊಪ್ಪಳದಲ್ಲಿ ದಾನಿಗಳ ನೆರವಿನಿಂದ ಖಾತೆಗಳನ್ನು ಆರಂಭಿಸಿ ದಾಖಲೆ ನಿರ್ಮಿಸಿರುವುದು ವಿಶೇಷ
ಸುಕನ್ಯಾ ಸಮೃದ್ಧಿ ಯೋಜನೆ
ಜಾರಿ ಮಾಡುವವರು : ಕೇಂದ್ರ ಸರಕಾರ
ಪ್ರಾರಂಭ: 2015ರ ಜನವರಿ 22ರಂದು ಆರಂಭಿಸಲಾಯಿತು
ಯೋಜನೆಯ ವಿವರ
- ಕೇಂದ್ರ ಸರಕಾರದ ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಆರಂಭಿಸಲಾಗಿದೆ.
- ಇದು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಉಳಿತಾಯ ಯೋಜನೆ .
- ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಇದು ಅತ್ಯುತ್ತಮ ಹಣ ಉಳಿತಾಯದ ಮಾರ್ಗವಾಗಿದೆ.
- ಕೇಂದ್ರ ಸರಕಾರ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಅತಿ ಹೆಚ್ಚು ಬಡ್ಡಿ ನೀಡಲಾಗುತ್ತಿದೆ (ಪ್ರಸ್ತುತ ವಾರ್ಷಿಕ ಶೇ.7.6 ರಷ್ಟು)
- ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿಯೂ ಲಭ್ಯ
- ಹೆಣ್ಣು ಮಗು ಜನಿಸಿದ 10 ವರ್ಷದೊಳಗೆ ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ಖಾತೆ ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಗರಿಷ್ಠ 1.5 ಲಕ್ಷ ರೂ. ವರಗೆ(ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ) ಠೇವಣಿ ಮಾಡಲು ಅವಕಾಶವಿದೆ.
- ಹುಡುಗಿಗೆ 18 ವರ್ಷ ತುಂಬಿದಾಗ ಭಾಗಶಃ ಹಿಂತೆಗೆದುಕೊಳ್ಳಬಹುದು. ಸಂಪೂರ್ಣ ಹಣವನ್ನು 21ನೇ ವಯಸ್ಸಿನಲ್ಲಿ ತೆಗೆದುಕೊಳ್ಳಬಹುದು.
- ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಹಣ ಕಟ್ಟಬಹುದು. ಒಂದು ನಿರ್ದಿಷ್ಟ ವರ್ಷಕ್ಕೆ ಠೇವಣಿ ತಪ್ಪಿಸಿಕೊಂಡರೆ, ಪ್ರತಿ ವರ್ಷ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ಗರಿಷ್ಠ ಎಷ್ಟು ಮಕ್ಕಳಿಗೆ ಸೌಲಭ್ಯ?
- ಸುಂಕನ್ಯ ಸಮೃದ್ಧಿ ಯೋಜನೆಯಡಿ ಪಾಲಕರು ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು. ಅಂದರೆ, ಪ್ರತಿ ಒಬ್ಬ ಮಗಳಿಗೆ ಒಂದು ಖಾತೆಯಂತೆ ಗರಿಷ್ಠ ಇಬ್ಬರು ಪುತ್ರಿಯರಿಗೆ ಖಾತೆ ತೆರೆಯಬಹುದು.
- ಒಂದು ವೇಳೆ ಮೊದಲ ಅಥವಾ ಎರಡನೆಯ ಹೆರಿಗೆಯಿಂದ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಈ ಯೋಜನೆಯು ಪೋಷಕರಿಗೆ ಮೂರನೇ ಖಾತೆ ತೆರೆಯಲು ಅನುವು ಮಾಡಿಕೊಡುಲಾಗುತ್ತದೆ.
ಅರ್ಹತೆಗಳು
- ಹೆಣ್ಣು ಮಕ್ಕಳಿಗೆ ಮಾತ್ರವೇ ಸುಕನ್ಯಾ ಸಮೃದ್ಧಿ ಖಾತೆ ಹೊಂದಲು ಅರ್ಹರಾಗಿರುತ್ತಾರೆ.
- ಖಾತೆ ತೆರೆಯುವ ಸಮಯದಲ್ಲಿ, ಹೆಣ್ಣು ಮಗುವಿಗೆ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು.
- ಎಸ್‌ಎಸ್‌ವೈ ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ) ಕಡ್ಡಾಯವಾಗಿರಬೇಕು.