Published on: April 7, 2022

ಸುಖೊಯ್-30

ಸುಖೊಯ್-30

ಸುದ್ಧಿಯಲ್ಲಿ ಏಕಿದೆ? ಭಾರತವು  ರಷ್ಯಾ-ವಿನ್ಯಾಸಗೊಳಿಸಿದ 12 ಸುಖೊಯ್-30 ಎಮ್ ಕೆ ಐ ಗಳ ಖರೀದಿಯ ವ್ಯವಹಾರಕ್ಕೆ ಸಹಿ ಹಾಕಲಿದೆ ಎಂದು ವರದಿಯಾಗಿದ್ದು, ಈ ವ್ಯವಹಾರ ರೂ 10,000 ಕೋಟಿ ಮೊತ್ತದ್ದಾಗಿದೆ.

ಸುಖೊಯ್ ಖರೀದಿಸುವ ಅವಶ್ಯಕತೆ

  • ಐಎಎಫ್ ಪ್ರಕಾರ ಅದರ ಬಳಿ 40 ವಿಮಾನಗಳಿರಬೇಕಿತ್ತು, ಆದರೆ ವಿಮಾನಗಳ ಸಂಖ್ಯೆ 30 ಅಥವಾ 32 ಕ್ಕೆ ಇಳಿಕೆಯಾಗಿರುವುದರಿಂದ ಹೆಚ್ಚುವರಿ ಸುಖೊಯ್ ತಕ್ಷಣ ಖರೀದಿಸುವ ಅವಶ್ಯಕತೆಯಿದೆ.
  • ಐಎಎಫ್ ಬಳಿ 4.5-ಜನರೇಶನ್ ರಫೇಲ್ ನ ಕೇವಲ ಎರಡು ಸ್ಕ್ವಾಡ್ರನ್ ಗಳು, ಟ್ವಿನ್-ಎಂಜಿನ್ ಕಾಂಬ್ಯಾಟ್ ಜೆಟ್ ಇವೆ, ಮತ್ತು 2024 ರ ಹೊತ್ತಿಗೆ ಬಾಳಿಕೆ ಅವಧಿ ಮುಕ್ತಾಯವಾಗುವ ನಿರೀಕ್ಷೆ ಇರುವ ಹಳೆಯ ಏರ್ ಕ್ರಾಫ್ಟ್ ಆದ ನವೀಕೃತ ಮಿಗ್-21 ಬೈಸನ್ ಉಪಯೋಗಿಸುತ್ತಿದೆ.

ಸುಖೊಯ್-30 ಎಮ್ ಕೆ ಐ

  • ಸುಖೊಯ್ ಸು-30 ಎಮ್ ಕೆ ಐ ಅತ್ಯಂತ ಮುಂದುವರಿದ ಫೈಟರ್ ಜೆಟ್ ಆಗಿದ್ದು ಏರ್-ಟು-ಏರ್ ಮತ್ತು ಏರ್-ಟು-ಗ್ರೌಂಡ್ ದಾಳಿ ಮಾಡುವ ಯಂತ್ರವಾಗಿ ಕೆಲಸ ಮಾಡುತ್ತದೆ. ಇದನ್ನು ರಷ್ಯಾದ ಸುಖೊಯ್ ನೊಂದಿಗೆ ಪರವಾನಗಿ ಒಪ್ಪಂದದಡಿ ಭಾರತದಲ್ಲಿ ಎಚ್ ಎ ಎಲ್ ನಿರ್ಮಿಸಿದೆ.
  • ಐಎಎಫ್ ಬಳಿ ಫ್ಲ್ಯಾಂಕರ್ ಎಂದೂ ಕರೆಯಲಾಗುವ ಸುಖೊಯ್ 30ಎಮ್ ಕೆ ಐ ನ 290 ಕಾರ್ಯಾಚರಣೆ ಘಟಕಗಳನ್ನು ಹೊಂದಿದೆ. ಮೊದಲ ಘಟಕವನ್ನು 2002 ರಲ್ಲಿ ಪರಿಚಯಿಸಲಾಯಿತು. ಅದರ ವೇಗ 2120 ಕಿ.ಮೀ. ಪ್ರ.ಗಂ. ಇದ್ದು, ಅದರ ಟೇಕ್ ಆಫ್ ತೂಕ 38,800 ಕೆಜಿ ಇರುತ್ತದೆ.
  • ಅದು ರಡಾರ್ ಗಳಿಂದ ಹಿಡಿದು ಕ್ಷಿಪಣಿಗಳು, ಬಾಂಬ್ ಗಳಿಂದ ಹಿಡಿದು ರಾಕೆಟ್ ಗಳವರೆಗೆ ಏನನ್ನು ಬೇಕಾದರೂ ಸಾಗಿಸುವ ಸಾಮರ್ಥ್ಯ ಹೊಂದಿದೆ.
  • ಹಣಕಾಸಿನ ಕೊರತೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಯುಕ್ತ ಬೆಲೆ ನಿಗದಿಪಡಿಸುವ ತಂತ್ರದ ಕೊರತೆ, ಮತ್ತು ಬಿಡಿಭಾಗಗಳು ಲಭ್ಯವಿಲ್ಲದಿರುವುದು ಇವೆಲ್ಲ ಕಳೆದ ಎರಡು ದಶಕಗಳಲ್ಲಿ ಐಎಎಫ್ ಸಮಸ್ಯೆಗಳನ್ನು ಇಮ್ಮಡಿಯಾಗಿಸಿವೆ.