Published on: November 17, 2023

ಸುದ್ದಿಯಲ್ಲಿರುವ ಸ್ಥಳ

ಸುದ್ದಿಯಲ್ಲಿರುವ ಸ್ಥಳ

  • ಸುದ್ದಿಯಲ್ಲಿ ಏಕಿದೆ? ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ-ಬರ್ಕೋಟ್ ಬಳಿ ಸುರಂಗ ಕುಸಿದು 40 ಮಂದಿ ಕಾರ್ಮಿಕರು ಸಿಲುಕಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಸಾಗುತ್ತಿರುವ ನಡುವಲ್ಲೇ ಮತ್ತೆ ಅದೇ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ. ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರನ್ನು ಸ್ಥಳಾಂತರಿಸಲು ಉತ್ತರಾಖಂಡ ಸರ್ಕಾರವು ನಾರ್ವೆ ಮತ್ತು ಥಾಯ್ಲೆಂಡ್‌ನ ವಿಶೇಷ ರಕ್ಷಣಾ ತಂಡಗಳ ಸಹಾಯವನ್ನು ಪಡೆಯಲು ಯೋಜಿಸುತ್ತಿದೆ.
  • ಉತ್ತರ ಕಾಶಿ ಜಿಲ್ಲೆಯ ಸಿಲ್ಕಿಯಾರ್ ದಂಡಲ್ಗಾವ್ ನಡುವಿನ ದಾರಿಯನ್ನು 26 ಕಿಲೋಮೀಟರ್ ನಿಂದ 4.5 ಕಿಲೋಮೀಟರ್ ಗೆ ಕುಗ್ಗಿಸಲಿರುವ ಈ ಸುರಂಗ ಮಾರ್ಗವು ಚಾರ್ಧಾಮ್ ಯಾತ್ರೆಯ ಧಾಮಗಳಲ್ಲಿ ಒಂದಾದ ಯಮುನೋತ್ರಿಗೆ ಸರ್ವ ಋತುಗಳ ದ್ವಿಪತ ರಸ್ತೆಯಾಗಿದೆ.  ಚಾರ್ಧಾಮ್  ಪ್ರದೇಶದ  ಅತಿ ಉದ್ದನೆಯ ಸುರಂಗ ಮಾರ್ಗ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸುರಂಗದ ನಿರ್ಮಾಣವು ಪ್ರಾದೇಶಿಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ವ್ಯಾಪಾರ ಮತ್ತು ದೇಶದೊಳಗೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
  • ಈ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH), ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಮೂಲಕ ಜಾರಿಗೊಳಿಸಲಾಗುವುದು, ಇದು ಸಂಪೂರ್ಣ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಅಂತರರಾಷ್ಟ್ರೀಯ ಗಡಿಯಲ್ಲಿರುವ ರಾಜ್ಯಗಳಲ್ಲಿನ ಹೆದ್ದಾರಿಗಳ ಅಭಿವೃದ್ಧಿಗಾಗಿ 2014 ರಲ್ಲಿ ರಚಿಸಲಾಗಿದೆ.