Published on: November 15, 2023
ಸುದ್ದಿಯಲ್ಲಿರುವ ಸ್ಥಳ
ಸುದ್ದಿಯಲ್ಲಿರುವ ಸ್ಥಳ
- ಐಸ್ ಲೈಂಡ್ನಲ್ಲಿ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದೆ. ರಿಕ್ಟರ ಮಾಪನದಲ್ಲಿ 5.2 ರಷ್ಟು ತೀವ್ರತೆಯಿದ್ದು, ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಪೋಟಿಸುವ ಸಾಧ್ಯತೆ ಇದೆ‘ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಇದರಿಂದಾಗಿ ತುರ್ತುಪರಿಸ್ಥಿತಿಯನ್ನು ದೇಶದಲ್ಲಿ ಹೇರಲಾಗಿದೆ. ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಭೂಮಿ ಕಂಪಿಸಿದೆ. ಉತ್ತರದ ಗ್ರಿಂಡ್ ವಿಕ್ ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಐಸ್ ಲೈಂಡ್ನಲ್ಲಿ ಒಟ್ಟು 33 ಸಕ್ರಿಯ ಭೂಕಂಪ ಮಾಪನ ಕೇಂದ್ರಗಳಿದ್ದು, ಯುರೋಪ್ನಲ್ಲಿ ಅತಿ ಹೆಚ್ಚು ಕೇಂದ್ರಗಳಿವೆ ಎನ್ನಲಾಗಿದೆ.
ಐಸ್ ಲೈಂಡ್
- ಐಸ್ಲ್ಯಾಂಡ್ ಉತ್ತರ ಅಟ್ಲಾಂಟಿಕ್ ಮಹಾಸಾಗರದ ಒಂದು ಪ್ರತ್ಯೇಕ ದ್ವೀಪವಾಗಿದ್ದು ಇದನ್ನು ಸಾಮಾನ್ಯವಾಗಿ ಐಸ್ (ಹಿಮ) ಮತ್ತು ಬೆಂಕಿಯ ಭೂಮಿ ಎಂದು ಕರೆಯಲಾಗುತ್ತದೆ.
- ರಾಜಧಾನಿ : ರೇಕ್ಯಾವಿಕ್
- ಅಧಿಕೃತ ಭಾಷೆ: ಐಸ್ಲ್ಯಾಂಡಿಕ್
- ಅಧ್ಯಕ್ಷ :ಗುಡ್ನಿ ಥೋರ್ಲೇಸಿಯಸ್ ಜೊಹಾನ್ನೆಸನ್