Published on: January 3, 2022
ಸುದ್ಧಿ ಸಮಾಚಾರ 03 ಜನವರಿ 2022
ಸುದ್ಧಿ ಸಮಾಚಾರ 03 ಜನವರಿ 2022
- ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, 70 ಸಾವಿರಕ್ಕೂ ಹೆಚ್ಚು ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಟೆಲಿ ಲಾ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರು, ನಿರ್ಗತಿಕರು ಅತ್ಯಂತ ಅಗ್ಗದಲ್ಲಿ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
- ಬ್ಯಾಂಕ್ಗಳ ಸುಸ್ತಿ ವಸೂಲಾತಿಗೆ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿದ್ದ ‘ಬ್ಯಾಡ್ ಬ್ಯಾಂಕ್’ ಗೆ ಇದೀಗ ಕಾನೂನು ತೊಡರು ಎದುರಾಗಿದೆ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ಇನ್ನಷ್ಟು ವಿಳಂಬ ಆಗಲಿದೆ. 2021-22ರ ಬಜೆಟ್ನಲ್ಲಿ, ಬ್ಯಾಂಕ್ಗಳ ಸುಸ್ತಿ ಸಾಲ ವಸೂಲಾತಿಗೆ ಬ್ಯಾಡ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.
- ಭಾರತ, ಪಾಕಿಸ್ತಾನ ತಮ್ಮ ದೇಶಗಳಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳು, ಪರಮಾಣು ಇಂಧನಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳ ಮಾಹಿತಿಯನ್ನು ಸತತ 31 ವರ್ಷವೂ ವಿನಿಮಯ ಮಾಡಿಕೊಂಡಿವೆ.
- ಕೋವಿಡ್ 19 ಮತ್ತು ಇನ್ಫ್ಲೂಯೆಂಜಾದ ದುಪ್ಪಟ್ಟು ಸೋಂಕಿನ ಮೊದಲ ‘ಫ್ಲೊರೊನಾ’ ಪ್ರಕರಣ ಇಸ್ರೇಲ್ನಲ್ಲಿ ಪತ್ತೆಯಾಗಿದೆ.
- ದೇಶದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ದಾರಿದೀಪ ತೋರಿಸಿದ ‘ಭಾರತದ ಮೊದಲ ಶಿಕ್ಷಕಿ’ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವಾದ ಜನವರಿ 3, ಆತ್ಮೀಯವಾಗಿ ನೆನಪಿಸಿಕೊಳ್ಳ ಬೇಕಾದ ದಿನ.