Published on: October 7, 2021

ಸುದ್ಧಿ ಸಮಾಚಾರ 07 ಅಕ್ಟೋಬರ್ 2021

ಸುದ್ಧಿ ಸಮಾಚಾರ 07 ಅಕ್ಟೋಬರ್ 2021

  • ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ (ಗೋಡೆ)ಯನ್ನು ಬೆಲ್ಜಿಯಂ ನಿಂದ ಆಮದು ಮಾಡಿಕೊಳ್ಳಲಾಗಿದ್ದು ರೈಲ್ವೆ ಭದ್ರತಾ ಪಡೆ (ಆರ್ ಪಿಎಫ್) ನ್ ಸೈಬರ್ ಸೆಲ್ ನ ಆವರಣದಲ್ಲಿ ಅಳವಡಿಸಲಾಗಿದೆ
  • ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯು ವೃದ್ಧಾಪ್ಯ ಕ್ಷೇತ್ರದಲ್ಲಿ ಸಂಶೋಧನೆಗಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ ‘ವಯೋಷ್ಟ್ರೇಷ್ಟ ಸಮ್ಮಾನ’ ಪ್ರಶಸ್ತಿ ಪಡೆದುಕೊಂಡಿದೆ.
  • ಶಾಸ್ತ್ರೀಯ ಗಾಯಕಿ ದೀಪ್ತಿ ವಿಶ್ವ ಸರ್ವ ಧರ್ಮ ಸಂಸತ್ (ಪಾರ್ಲಿಮೆಂಟ್ ಆಫ್ ವರ್ಲ್ಡ್ ರಿಲಿಜನ್ಸ್)ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಅವರು ಗಾಯನ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಭಾರತೀಯ ಮಹಿಳೆ ಅವರು ಎನ್ನುವುದು ಕರ್ನಾಟಕ ರಾಜ್ಯದವರಿಗೆ ಸಂದ ಗೌರವ. ದೀಪ್ತಿ ನವರತ್ನ ಅವರು ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
  • ಗ್ರಾಮೀಣ ಭಾಗದ ಜನರಿಗೆ ಆಸ್ತಿ ಹಕ್ಕು ಕಾರ್ಡ್ ವಿತರಿಸುವ ಮಹತ್ವಾಕಾಂಕ್ಷಿ ‘ಸ್ವಾಮಿತ್ವ ಯೋಜನೆ’ಯನ್ನು ಶೀಘ್ರವೇ ರಾಷ್ಟ್ರದಾದ್ಯಂತ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
  • ಸ್ವದೇಶಿ ನಿರ್ಮಿತ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್’ ಮತ್ತು ಸಬ್ ಸಾನಿಕ್ ಕ್ಷಿಪಣಿ ‘ನಿರ್ಭಯ್’ ಬಗ್ಗೆ ವಿಶ್ವದ ಹಲವು ದೇಶಗಳ ಆಸಕ್ತಿ ಹೆಚ್ಚುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ಕ್ಷಿಪಣಿಗಳ ಬಿಡಿ ಭಾಗ ತಯಾರಿಕೆಯ ಉದ್ಯಮಗಳ ಕನಸುಗಳು ಗರಿಗೆದರಿವೆ.
  • ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅನುಮೋದನೆ ದೊರೆತಿದೆ. ‘ಇದೊಂದು ಐತಿಹಾಸಿಕ ಘಟನೆ’ ಎಂದು ಬಣ್ಣಿಸಲಾಗಿದೆ. ಮಸ್ಕಿರಿಕ್ಸ್ (Mosquirix)’ ಹೆಸರಿನ ಲಸಿಕೆಯು ಮೊದಲ ಮಲೇರಿಯಾ ಲಸಿಕೆ ಮಾತ್ರವೇ ಅಲ್ಲದೆ; ಯಾವುದೇ ಪರಾವಲಂಬಿ ಜೀವಿಯಿಂದ ಉಂಟಾಗುವ ರೋಗಗಳನ್ನೂ ತಡೆಯುತ್ತದೆ.
  • ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಎಸ್ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಡೇವಿಡ್ ಡಬ್ಲ್ಯೂಸಿ ಮ್ಯಾಕ್ಮಿಲನ್ ಅವರಿಗೆ ಅಸಿಮ್ಮೆಟ್ರಿಕ್ ಆರ್ಗನೊಕಟಾಲಿಸಿಸ್ ಅಭಿವೃದ್ಧಿಗಾಗಿ ನೀಡಲಾಗಿದೆ.
  • ಅಮೆರಿಕದ ಹ್ಯೂಸ್ಟನ್ ನಗರದ ಪೋಸ್ಟಾಫೀಸ್ ಒಂದಕ್ಕೆ ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ದಲಿವಾಲ್ ಅವರ ಹೆಸರನ್ನಿಟ್ಟು ಅವರಿಗೆ ಗೌರವ ಸೂಚಿಸಲಾಗಿದೆ.