Published on: August 9, 2022

ಸುದ್ಧಿ ಸಮಾಚಾರ – 09 ಆಗಸ್ಟ್ 2022

ಸುದ್ಧಿ ಸಮಾಚಾರ – 09 ಆಗಸ್ಟ್ 2022

 • ಕರ್ನಾಟಕದ ಪ್ರಸಿದ್ಧ buy Gabapentin for dogs online ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಭಾರತದ ಒಟ್ಟು 10 ತಾಣಗಳು http://thelittersitter.com/blog/letshangoutongoogle/ ರಾಮ್ಸರ್ ಪಟ್ಟಿಗೆ ಸೇರ್ಪಡೆಗೊಂಡಿದೆ.

 • ದೇಶ ಸ್ವಾತಂತ್ರ್ಯ ಸಿಕ್ಕಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಕಲ್ಪದಿಂದ ಸಿದ್ಧಿ ಯೋಜನೆಯನ್ನು ಆರಂಭಿಸಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು 2017ರ ಆಗಸ್ಟ್ 21ರಂದು ಚಾಲನೆ ನೀಡಿದ್ದರು. ಅಂದಿನಿಂದ 5 ವರ್ಷಗಳವರೆಗೆ ಇದೇ ವರ್ಷ ಆಗಸ್ಟ್ 21ರವರೆಗೆ 5 ವರ್ಷಗಳ ಯೋಜನೆಯಿದು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಇಡೀ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತದೆ.
 • ಪಟಾಕಿಗಳನ್ನು ಬೆಂಗಳೂರು ನಗರ ಪ್ರದೇಶದ ಹೊರವಲಯದಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಹೊರಡಿಸಿದ್ದ ಪೊಲೀಸ್ ಇಲಾಖೆಯ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ‘ನಗರ ಪ್ರದೇಶಗಳ ಒಳಗೆ ಪಟಾಕಿ ಮಾರಾಟ ನಡೆಸುವುದು ಜೀವಸಂಕುಲಕ್ಕೆ ಅತ್ಯಂತ ಅಪಾಯ ಕಾರಿಯಾದುದು’ ಎಂದು ಅಭಿಪ್ರಾಯಪಟ್ಟಿದೆ. ದೇಶದಲ್ಲೇ ಮೊದಲು ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದವರ ಎರಡು ಕ್ಲಿನಿಕಲ್ ಛಾಯಾಚಿತ್ರಗಳನ್ನು ತೀರ್ಪಿನ ಒಂಬತ್ತನೇ ಪುಟದಲ್ಲಿ ಮುದ್ರಿಸಲು ಅವಕಾಶ ಕಲ್ಪಿಸಲಾಗಿದೆ. ದೇಶದ ಹೈಕೋರ್ಟ್ ತೀರ್ಪುಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನವನ್ನು ಮಾಡಲಾಗಿದೆ.
 • ಮಕ್ಕಳ ಓದನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಜಾರಿಗೆ ತಂದಿರುವ ‘ಓದುವ ಬೆಳಕು’ ಯೋಜನೆಯಡಿ ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು 87314 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.
 • ರಾಜ್ಯದಲ್ಲಿ 28 ಸಾವಿರ ಗ್ರಾಮಗಳಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.‘ಸ್ತ್ರೀ ಸಾಮರ್ಥ್ಯ’ ಯೋಜನೆಯಡಿ, ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡಲಾಗುವುದು.
 • ಕನ್ನಡ ಚಿತ್ರರಂಗದ ಮೇರುನಟ ದಿವಂಗತ ಪುನೀತ್ ರಾಜ್‍ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ‌.
 • ಕರ್ನಾಟಕ ರತ್ನರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನೀಡಲು ನಿರ್ದೇಶಿಸಲಾಗಿದೆ.
ಕ್ರ.ಸಂ. ಹೆಸರು ಗೌರವಿಸಿದ್ದು ಕ್ಷೇತ್ರ
1 ಕುವೆಂಪು 1992 ಸಾಹಿತ್ಯ
2 ಡಾ.ರಾಜ್ ಕುಮಾರ್ 1992 ಸಿನೆಮಾ
3 ಎಸ್‌.ನಿಜಲಿಂಗಪ್ಪ 1999 ರಾಜಕೀಯ
4 ಸಿ.ಎನ್.ಆರ್.ರಾವ್ 2000 ವಿಜ್ಞಾನ
5 ದೇವಿ ಪ್ರಸಾದ್‌ ಶೆಟ್ಟಿ 2001 ವೈದ್ಯಕೀಯ
6 ಭೀಮಸೇನ್‌ ಜೋಷಿ 2005 ಸಂಗೀತ
7 ಶ್ರೀ ಶಿವಕುಮಾರ ಸ್ವಾಮಿಗಳು 2007 ಸಾಮಾಜಿಕ ಸೇವೆ
8 ಡಾ.ಡಿ.ಜವರೇಗೌಡ 2008 ಶಿಕ್ಷಣ ಮತ್ತು ಸಾಹಿತ್ಯ
9 ಡಾ.ವೀರೇಂದ್ರ ಹೆಗ್ಗಡೆ 2009 ಸಾಮಾಜಿಕ ಸೇವೆ
10 ಪುನೀತ್‌ ರಾಜ್‌ಕುಮಾರ್ 2021 ಸಿನೆಮಾ,ಸಾಮಾಜಿಕ ಸೇವೆ

 • 2022 ಅಕ್ಟೋಬರ್ 14 ರಿಂದ 31ರವರೆಗೆ ಭಾರತ ಹಾಗೂ ಅಮೆರಿಕದ ಮಿಲಿಟರಿ ವಿಭಾಗದಿಂದ ಉತ್ತರಾಖಂಡದ ಹೌಲಿಯಲ್ಲಿ ಸಮರಾಭ್ಯಾಸ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಖಚಿತಪಡಿಸಿದೆ. ಇದು ಭಾರತ–ಅಮೆರಿಕದ 18ನೇ ಆವೃತ್ತಿಯ ಸಮರಾಭ್ಯಾಸ ಆಗಿದೆ.
 • ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್‌ ಅವರು ಆಗಮಿಸಲಿದ್ದಾರೆ.
 • ಸ್ವತಂತ್ರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗೂಗಲ್‌ ಸಂಸ್ಥೆಯು ‘ಇಂಡಿಯಾ ಕಿ ಉಡಾನ್‌’ ಎಂಬ ಆನ್‌ಲೈನ್‌ ಕಾರ್ಯಕ್ರಮ ಅನಾವರಣಗೊಳಿಸಿದೆ. ಗೂಗಲ್‌ನ ಕಲಾ ಮತ್ತು ಸಾಂಸ್ಕೃತಿಕ ವಿಭಾಗ ಈ ಯೋಜನೆ ಕೈಗೊಂಡಿದೆ.
 • ಭಾರತದ ನೂತನ14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಆಯ್ಕೆಯಾಗಿದ್ದಾರೆ.  ಅವರು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
 • ಶೇ 0.50ರಷ್ಟು ರೆಪೊ ದರ ಹೆಚ್ಚ:ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರಿಂದ ಗೃಹ, ವಾಹನ ಮತ್ತು ಇತರ ಸಾಲಗಳ ಮೇಲಿನ ಇಎಂಐ ಮೊತ್ತ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ರೆಪೊ ದರ ಹೆಚ್ಚಳ ಮಾಡುತ್ತಿದೆ. ಮೇ ತಿಂಗಳಿನಿಂದ ಈವರೆಗೆ ಬಡ್ಡಿದರವನ್ನು ಒಟ್ಟು ಶೇ 1.40ರಷ್ಟು ಏರಿಕೆ ಮಾಡಿದೆ.
 • ಕೋವಿಡ್‌ ಪೂರ್ವ ಮಟ್ಟ ಮೀರಿದ ರೆಪೊ ಹೆಚ್ಚಳದ ಪರಿಣಾಮವಾಗಿ ರೆಪೊ ದರವು ಶೇ 5.40ಕ್ಕೆ ತಲುಪಿದೆ.