Published on: November 11, 2021
ಸುದ್ಧಿ ಸಮಾಚಾರ 11 ನವೆಂಬರ್ 2021
ಸುದ್ಧಿ ಸಮಾಚಾರ 11 ನವೆಂಬರ್ 2021
- ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿರುವ ಬೆನ್ನಲ್ಲೇ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆಗೆ ರಾಜ್ಯ ಸರಕಾರ ಆದೇಶ ಮಾಡಿದೆ.
- ಜನವರಿಯಿಂದ ಹೈಕೋರ್ಟ್ಗಳಲ್ಲಿ ಪ್ರಕರಣಗಳ ಇ-ಫೈಲಿಂಗ್ ಕಡ್ಡಾಯಗೊಳಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯ, ಇ-ಕೋರ್ಟ್ಗಳ ಸ್ಥಾಪನೆಯತ್ತ ದಿಟ್ಟ ಹೆಜ್ಜೆಯಿಟ್ಟಿದೆ.
- ಗ್ರಾಮೀಣ ಜನರಿಗೆ ಶಾಸನಬದ್ಧ ಮನೆ ಹಕ್ಕು ಪತ್ರ ನೀಡಿ, ಪರೋಕ್ಷವಾಗಿ ಆರ್ಥಿಕ ಮೂಲ ಸೃಷ್ಟಿಸಿಕೊಡುವ ಮಹತ್ವಾಕಾಂಕ್ಷೆಯ ಯೋಜನೆ ‘ಸ್ವಾಮಿತ್ವ’ಕ್ಕೆ ಹತ್ತಾರು ವಿಘ್ನಗಳು ಎದುರಾಗಿವೆ.
- ಉತ್ತರಾಖಂಡದ ರಾಂಚಿಯಲ್ಲಿ ಮಕ್ಕಳಿಗಾಗಿಯೇ ಇರುವ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಅದರ ಹೆಸರು ಬಾಲ್ ವಿಕಾಸ್ ಖಜಾನ.
- ಹಳದಿ ಬಣ್ಣದ ಚಿರತೆಗಳಲ್ಲದೆ ಕಪ್ಪು ಮತ್ತು ಬಿಳಿ ಬಣ್ಣದ ಚಿರತೆಗಳ ಬಗ್ಗೆ ಕೇಳಿದ್ದೀರಿ. ಆದರೆ ಗುಲಾಬಿ ವರ್ಣದ ಚಿರತೆಯೂ ಇದೆ. ಇಂತಹ ಅಪರೂಪದ ಚಿರತೆ ರಾಜಸ್ಥಾನದ ರಾಣಕ್ಪುರ ಪ್ರದೇಶದ ಬೆಟ್ಟ ಭಾಗವೊಂದರಲ್ಲಿ ಪತ್ತೆಯಾಗಿದೆ.
- ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣದ ‘ಕುಂಕುಮ್ ಭಿಂಡಿ’ ಎಂಬ ತಳಿಯ ಬೆಂಡೆಕಾಯಿಯನ್ನು ರೈತರು ಬೆಳೆಯುತ್ತಿದ್ದು, ಇದು ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ.
- ಭಾರತದ ನೇತೃತ್ವದ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟಕ್ಕೆ ಅಮೆರಿಕ ನ.10 ರಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ.
- ಅಫ್ಘಾನಿಸ್ತಾನ ಜಾಗತಿಕ ಭಯೋತ್ಪಾದನೆಗೆ ಸ್ವರ್ಗದಂತಾಗಲು ಅವಕಾಶ ನೀಡದಂತೆ ಕೆಲಸ ಮಾಡುವುದಕ್ಕೆ ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯಪ್ರಾಚ್ಯದ ಐದು ರಾಷ್ಟ್ರಗಳು ದೆಹಲಿಯಲ್ಲಿ ನಡೆದ ಸಂವಾದದಲ್ಲಿ ನಿರ್ಧರಿಸಿವೆ.
- ಪ್ರತಿ ವರ್ಷ ನವೆಂಬರ್ 11 ರಂದು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶೈಕ್ಷಣಿಕ ದಾರ್ಶನಿಕರಾದ ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರನ್ನು ಭಾರತೀಯರೆಲ್ಲರೂ ನೆನೆಯುವ ದಿನ. ಅವರ ಜನ್ಮದಿನ ಸಹ ಹೌದು.