Published on: October 12, 2022

ಸುದ್ಧಿ ಸಮಾಚಾರ – 12 ಅಕ್ಟೋಬರ್ 2022

ಸುದ್ಧಿ ಸಮಾಚಾರ – 12 ಅಕ್ಟೋಬರ್ 2022

  • http://debashishbanerji.com/sawiki/sciy/sciy.org/blog/cmd=search_keyword/k=RealClimate.html ವಿಶ್ವ ಮಾನಸಿಕ ಆರೋಗ್ಯ ದಿನ(ಅಕ್ಟೋಬರ್10) ದ ಅಂಗವಾಗಿ, ಕೇಂದ್ರ ಸರ್ಕಾರವು ಟಿ-ಮನಸ್‌ ಎಂಬ ಯೋಜನೆ ಜಾರಿ ಮಾಡಿದೆ. Coimbatore ಕರ್ನಾಟಕದ ಇ-ಮನಸ್‌ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.
  • ಭಾರತೀಯ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘12,000 ಇಯರ್ಸ್‌ ಆಫ್ ಇಂಡಿಯಾ–ರಿಪೋರ್ಟ್‌ ಆನ್‌ ದಿ ಸಿವಿಲೈಸೇಷನ್‌ ಆ್ಯಂಡ್‌ ಹಿಸ್ಟರೀಸ್‌ ಆಫ್‌ ಇಂಡಿಯಾ ಸಿನ್ಸ್ ಹೋಲೊಸಿನ್‌’ ವರದಿಯನ್ನು ಬಿಡುಗಡೆ ಮಾಡಲಾಯಿತು. ಭಾರತದ ನಾಗರಿಕತೆ ಮತ್ತು ಇತಿಹಾಸದ ಕುರಿತು ವರದಿಯನ್ನು ಹೊರತರಲು ಎಂಬತ್ತೆಂಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ವಾಂಸರು ಒಗ್ಗೂಡಿದ್ದಾರೆ.
  • ಹರ್‌‌ಸ್ಟಾರ್ಟ್‌: ಗುಜರಾತ್‌ ವಿಶ್ವವಿದ್ಯಾಲಯವು ಉದ್ಯಮದಲ್ಲಿ ಮಹಿಳೆಯರನ್ನು ಉತ್ತಜಿಸುವ ನಿಟ್ಟಿನಲ್ಲಿ ಆರಂಭಿಸಿರುವ ಹರ್‌‌ಸ್ಟಾರ್ಟ್‌ ಯೋಜನೆಗೆ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು. ಈ ವಿಶ್ವವಿದ್ಯಾಲಯವು ಸುಮಾರು 450 ಸ್ಟಾರ್ಟ್‌ಅಪ್‌ ಗಳನ್ನು ಆರಂಭಿಸಿದೆ. ಈ ಪೈಕಿ 125 ಸ್ಟಾರ್ಟ್‌ಅಪ್‌ಗಳಿಗೆ ಮಹಿಳೆಯರು ಮುಖ್ಯಸ್ಥರಾಗಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ಸಿಗುತ್ತಿರುವುದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ.
  • ದೇಶದ ಮೊದಲ ಸೌರಶಕ್ತಿ ಚಾಲಿತ ಹಳ್ಳಿ ಎಂಬ ಶ್ರೇಯ ಪಡೆದ ಮೋಧೆರಾದಲ್ಲಿ ದಿನದ 24 ತಾಸೂ ಸೌರ

ವಿದ್ಯುತ್‌ ದೊರೆಯಲಿದೆ. ಗ್ರಾಮದಲ್ಲಿ ಸೌರ ವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲಾಗಿದೆ. ವಸತಿ ಕಟ್ಟಡಗಳು, ಸರ್ಕಾರಿ ಕಟ್ಟಡಗಳ ಮೇಲ್ಚಾವಣಿಯಲ್ಲಿ 1,300ಕ್ಕೂ ಹೆಚ್ಚು ಸೌರಫಲಕಗಳನ್ನುಅಳವಡಿಸಲಾಗಿದೆ.

  • ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಗಾಜಿಯಾಬಾದ್ ಮೊದಲನೆಯ ಸ್ಥಾನದಲ್ಲಿದೆ, ಗುರುಗ್ರಾಮ

(ಎಕ್ಯೂಐ–238) ಎರಡನೆಯ ಸ್ಥಾನ. ನಂತರದ ಸ್ಥಾನದಲ್ಲಿ ಗ್ರೇಟರ್‌ ನೋಯಿಡಾ (ಎಕ್ಯೂಐ–234)

ಇದೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಶ್ರೇಣೀಕೃತ ಸ್ಪಂದನ ಕ್ರಿಯಾಯೋಜನೆ

(ಜಿಆರ್‌ಎಪಿ–ಗ್ರಾಪ್‌) ರೂಪಿಸಲಾಗಿದೆ. ಆದರೆ, ಅದರ ನಿಯಮಗಳು ಗಾಜಿಯಾಬಾದ್‌ನಲ್ಲಿ ಸೂಕ್ತ

ರೀತಿಯಲ್ಲಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಅತ್ಯಂತ ಕಲುಷಿತ ನಗರವೆಂದು ಗುರುತಿಸಲಾಗಿದೆ ಎಂದು

ವರದಿಗಳು ಪ್ರಕಟವಾಗಿವೆ.

  • ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಅಸ್ತಾನದಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ, ವೃತ್ತಿ ಜೀವನದ 90ನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.
  • ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌: ಬೆಂಗಳೂರಿನ ಪಂಕಜ್‌ ಅಡ್ವಾಣಿ ಅವರು ಕ್ವಾಲಾಲಂಪುರದಲ್ಲಿ

ನಡೆದ ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅವರ ವೃತ್ತಿಜೀವನದ

25ನೇ ವಿಶ್ವ ಕಿರೀಟ ಇದಾಗಿದೆ.