Published on: July 13, 2022

ಸುದ್ಧಿ ಸಮಾಚಾರ – 13 ಜುಲೈ 2022

ಸುದ್ಧಿ ಸಮಾಚಾರ – 13 ಜುಲೈ 2022

 • http://ayurvedic-treatment.com/wp/wp-content/themes/sketch/404.php ಮೈತ್ರಿ ಯೋಜನೆ:ಹದಿಹರೆಯದ ಹೆಣ್ಣು ಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರದ ವಿನೂತನ ಯೋಜನೆ. ೧೬ – ೧೮ ವರ್ಸಗದೊಳಗಿನ ಹೆಣ್ಣು ಮಕ್ಕಳಿಗಾಗಿ ಚಾಲ್ತಿಯಲ್ಲಿರುವ ಶುಚಿ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪಕಿನ ಪ್ಯಾಡಗಳ ಜೊತೆಗೆ ಮತ್ತು ಅದರ ಪರ್ಯಾಯ ಹಾಗೂ ಪ್ರಾಯೋಗಿಕವಾಗಿ ಮೈತ್ರಿ ಮುಟ್ಟಿನ ಕಪ್ ಗಳನ್ನುಪೂರೈಸಲಾಗುತ್ತದೆ.

 • Nampa ಕವಿ ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಅವರ ತಂದೆ ತಾಯಿಯ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಿದೆ.
 • 2020ರ ವಾಣಿಜ್ಯ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯ ಅನುಷ್ಠಾನದ ಆಧಾರದಲ್ಲಿ ಸಿದ್ಧಪಡಿಸಿರುವ, ‘ಟಾಪ್ ಸಾಧಕ’ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.
 • ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿಕರ್ನಾಟಕ: ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಅಧ್ಯಕ್ಷ ಡಾ.ಐ.ಎಸ್‌.ಪ್ರಸಾದ್‌ ಹೇಳಿದರು.
 • BBMP ಪುರಸ್ಕಾರ! ನಗರದಲ್ಲಿರುವ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ ನಾಗರಿಕರ ಸಹಕಾರ ದೊಂದಿಗೆ ಕ್ರಮ ಕೈಗೊಂಡು ಕಸರಹಿತ ತಾಣಗಳನ್ನಾಗಿಸಲು ಯೋಜಿಸಲಾಗಿದೆ. ಈ ವ್ಯವಸ್ಥೆ ಇಲ್ಲದಿದ್ದರೂ ದಾಖಲೆಯೊಂದಿಗೆ ನಾಗರಿಕರು ಕಸ ಎಸೆಯುವವರ ಬಗ್ಗೆ ವಾರ್ಡ್‌ ಅಥವಾ ವಿಭಾಗೀಯ ಅಧಿಕಾರಿಗೆ ದೂರು ನೀಡಬಹುದು. ಅಂತಹವರ ಮಾಹಿತಿ ಯನ್ನೂ ಗೋಪ್ಯವಾಗಿರಿಸಲಾಗುತ್ತದೆ. ಹೀಗೆ ಕಸದ ತಾಣವನ್ನು ಕಸರಹಿತ ತಾಣವನ್ನಾಗಿಸಲು ನೆರವಾದವರಿಗೆ ‘ಪರಿಸರ ಹಿತೈಷಿ’ ಎಂಬ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ’.  ಕಸದ ತಾಣಗಳ ನಿರ್ಮೂಲನೆಗಾಗಿ ಸ್ಥಳೀಯ ನಿವಾಸಿಗಳ ಕಲ್ಯಾಣ/ಕ್ಷೇಮಾಭಿ ವೃದ್ಧಿ ಸಂಘಗಳನ್ನೂ ಸೇರಿಸಿಕೊಂಡು ವಲಯ ಅಧಿಕಾರಿಗಳು ಅರಿವು ಕಾರ್ಯಕ್ರಮ ನಡೆಸಲಿದ್ದಾರೆ.
 • ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ನಗದು ರಹಿತ ‘ಆರೋಗ್ಯ ಸಂಜೀವಿನಿ’ ಯೋಜನೆ ಯನ್ನು 4.30 ಲಕ್ಷ ನಿವೃತ್ತರು, 1 ಲಕ್ಷ ಪಿಂಚಣಿದಾರರಿಗೂ ಅನ್ವಯಿಸಲು ಕ್ರಮಕೈಗೊಳ್ಳಲಾಗುವುದು‘.ಉಚಿತ ಆರೋಗ್ಯ ಯೋಜನೆ ಅಡಿ ನೌಕರರು 1,250 ಕಾಯಿಲೆಗಳಿಗೆ ನಗದು ರಹಿತವಾಗಿ ಸೇವೆ ಪಡೆಯಬಹುದಾಗಿದೆ.
 • ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ.
 • ಭಾರತದ ನಾಗರಿಕ ವಾಯುಯಾನ ಉದ್ಯಮ ತನ್ನ ಶೈಶವಾವಸ್ಥೆಯಿಂದ ಬೆಳವಣಿಗೆಯತ್ತ ಮುನ್ನುಗ್ಗುತ್ತಿದೆ. ಭಾರತ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 138 ರಿಂದ 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ. ಬೋಯಿಂಗ್ ಹಾಗೂ ಟಾಟಾ ಸಂಸ್ಥೆಗಳ ಜಂಟಿ ಉದ್ಯಮವಾದ ಟಾಟಾ ಬೋಯಿಂಗ್ ಸ್ಪೇಸ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಅಪಾಚೆ ಫ್ಯೂಸ್ಲೇಜನ್ನು ನಿರ್ಮಾಣಗೊಳಿಸುತ್ತಿದೆ.
 • ಟೆಕ್ ದೈತ್ಯ ಗೂಗಲ್ ಇಂಡಿಯಾ ತನ್ನ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್‌ವರ್ಕ್ ಗೆ ಐದು ಹೊಸ ಭಾಷೆಗಳನ್ನು ಸೇರಿಸಿದೆ, ಪಂಜಾಬಿ, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಮಲಯಾಳಂ ಗೂಗಲ್ ಗೆ ಹೊಸದಾಗಿ ಸೇರ್ಪಡೆಯಾದ ಭಾಷೆಗಳು.
 • ಹರಿಯಾಲಿ (ಹಸಿರು) ಮಹೋತ್ಸವವನ್ನು ಜುಲೈ 8, 2022 ರಂದು ಆಯೋಜಿಸಲಾಗಿದೆ. ಹೊಸ ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ “ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ” ಈವೆಂಟ್ ಅನ್ನು ಆಯೋಜಿಸಿದೆ.
 • ಆಕಾಶ ಏರ್ ವಾಯುಯಾನ ಸೇವೆ: ಭಾರತೀಯ ವಾಯುಯಾನ ಸೇವೆಗೆ ಮತ್ತೊಂದು ಖಾಸಗಿ ಸಂಸ್ಥೆ ಪ್ರವೇಶ ಪಡೆದಿದ್ದು, ಜುಲೈ2022 ರಲ್ಲಿ ಸೇವೆಗಳನ್ನು ಪ್ರಾರಂಭಿಸಲು ಆಕಾಶ ಏರ್ ಸಂಸ್ಥೆಗೆ ಡಿಜಿಸಿಎಯಿಂದ ವಿಮಾನಯಾನ ಪರವಾನಗಿ ಲಭಿಸಿದೆ. ಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಆಕಾಶ ಏರ್ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (ಡಿಜಿಸಿಎ) ಏರ್ ಆಪರೇಟರ್ ಪ್ರಮಾಣಪತ್ರವನ್ನು (ಎಒಸಿ ಅಥವಾ ಪರವಾನಗಿ) ಪಡೆದುಕೊಂಡಿದ್ದು, ಹಾರಾಟ ಆರಂಭಿಸಲಿದೆ.
 • ಆಂಥ್ರಾಕ್ಸ್ ಗಂಭೀರವಾದ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಬೀಜಕ-ರೂಪಿಸುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಭಾರತದ ದಕ್ಷಿಣ ರಾಜ್ಯಗಳಲ್ಲಿ ಕಂಡುಬರುತ್ತದೆ. ಉತ್ತರದ ರಾಜ್ಯಗಳಲ್ಲಿ ಇದು ಕಡಿಮೆ ಬಾರಿ ಕಂಡುಬರುತ್ತದೆ. ಆಂಧ್ರಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಒರಿಸ್ಸಾ ಮತ್ತು ಕರ್ನಾಟಕದಲ್ಲಿ ಈ ರೋಗ ವರದಿಯಾಗಿದೆ.·
 • ಓಮಿಕ್ರಾನ್ ನ ಮತ್ತೊಂದು ಉಪತಳಿ : ಕೊರೋನಾದ ಓಮಿಕ್ರಾನ್ ನ ಉಪತಳಿ ಬಿಎ.2.75 ಭಾರತದಂತಹ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ನಿಗಾ ವಹಿಸಿದೆ ಎಂದು ಪ್ರಧಾನ ನಿರ್ದೇಶಕ ಟೆಡ್ರೋಸ್ ಅದನಂ ಘೆಬ್ರೆಯೆಸಸ್ ಹೇಳಿದ್ದಾರೆ. ಯುರೋಪ್ ಹಾಗೂ ಅಮೇರಿಕಗಳಲ್ಲಿ ಬಿಎ.4 ಹಾಗೂ ಬಿಎ.5 ತಳಿಗಳ ಸೋಂಕಿನ ಅಲೆಗಳಿದ್ದು, ಭಾರತದಂತಹ ದೇಶಗಳಲ್ಲಿ ಓಮಿಕ್ರಾನ್ ನ ಹೊಸ ಉಪತಳಿ ಬಿಎ.2.75 ಪತ್ತೆಯಾಗಿದೆ.·
 • ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್ಗಳು ಬಳಕೆ ಮಾಡಲಿರುವ 10 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಮೊದಲ ಹಂತದ ಉತ್ಪನ್ನಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಾವರಣಗೊಳಿಸಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅಂತಹ 75 ಎಐ ತಂತ್ರಜ್ಞಾನಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಭಾರತೀಯ ಸಶಸ್ತ್ರ ಪಡೆಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಲು ಸಜ್ಜಾಗಿವೆ.
 • 2025ರ ವೇಳೆಗೆ ಕ್ಷಯರೋಗವನ್ನು ಮುಕ್ತಗೊಳಿಸುವ ಗುರಿಯ ಸಾಧನೆಗೆ ಪೂರಕವಾಗಿ ಭಾರತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್ಟಿಇಪಿ) ಜಾರಿಗೊಳಿಸುತ್ತಿದೆ. ಕ್ಷಯರೋಗ ಚಿಕಿತ್ಸೆ ಯಶಸ್ವಿಯಾಗಿ ಗುಣಮುಖರಾದ ನಂತರವೂ ರೋಗಿಗಳು ದೀರ್ಘಾವಧಿ ಬದುಕುವ ಸಾಧ್ಯತೆಗಳು ಕಡಿಮೆ’ ಎಂದು ಐಸಿಎಂಆರ್ನ ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆಯ ನೂತನ ಅಧ್ಯಯನ ವರದಿ ತಿಳಿಸಿದೆ.·
 • “ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಅತಿದೊಡ್ಡ ಸ್ಥಳೀಯ ಯುದ್ಧನೌಕೆಯನ್ನು ತಲುಪಿಸುವ ನಿಟ್ಟಿನಲ್ಲಿ ದೇಶೀಯ ವಿಮಾನವಾಹಕ ನೌಕೆ ವಿಕ್ರಾಂತ್ ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ವರ್ಧನೆಯೊಂದಿಗೆ ಕೈಗೊಂಡ ಪ್ರಮುಖ ಉಪಕರಣಗಳು ಮತ್ತು ವ್ಯವಸ್ಥೆಗಳ ಸಮಗ್ರ ಪ್ರಯೋಗಗಳ 4 ನೇ ಹಂತದ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ” .·
 • ರಷ್ಯಾದಿಂದ ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಪ್ರತಿಕೂಲವಾಗಿರುವ ಕಾಟ್ಸಾ ಕಾಯ್ದೆಗೆ ಅಮೆರಿಕದ ಸಂಸತ್ನಲ್ಲಿ ಶಾಸನಾತ್ಮಕ ತಿದ್ದುಪಡಿ ಮಸೂದೆಯನ್ನು ಭಾರತ – ಅಮೆರಿಕದ ಕಾಂಗ್ರೆಸ್ಸಿಗ ರೋ ಖನ್ನಾ ಮಂಡಿಸಿದ್ದಾರೆ. ·
 • ಆರ್ಚರಿ ವಿಶ್ವ ಗೇಮ್ಸ್: ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಂ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಗೇಮ್ಸ್ ಆರ್ಚರಿಯ ಕಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.ಕಂಚಿನ ಪದಕದ ಸುತ್ತಿನಲ್ಲಿ ಭಾರತದ ಜೋಡಿಯು ಮೆಕ್ಸಿಕೊದ ಆ್ಯಂಡ್ರಿಯಾ ಬೆಸೆರ್ರಾ ಮತ್ತು ಮಿಗೆಲ್ ಬೆಸೆರ್ರಾ ಅವರನ್ನು ಮಣಿಸಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಷೇಕ್ ವರ್ಮಾ ಅವರಿಗೆ 50ನೇ ‘ಪೋಡಿಯಂ ಫಿನಿಶ್‘ ಆಗಿದೆ. ವಿಶ್ವ ಗೇಮ್ಸ್, ವಿಶ್ವ ಚಾಂಪಿಯನ್ಷಿಪ್, ವಿಶ್ವಕಪ್ ಫೈನಲ್, ವಿಶ್ವಕಪ್, ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್ಷಿಪ್ ಈ ಎಲ್ಲ ಟೂರ್ನಿಗಳ ಕಂಪೌಂಡ್ ವಿಭಾಗದಲ್ಲಿ ಅಭಿಷೇಕ್ ಪದಕ ಜಯಿಸಿದಂತಾಗಿದೆ. ·
 • ವಿಂಬಲ್ಡನ್ ಟೆನಿಸ್ ಕಜಕಸ್ತಾನದ ಎಲೆನಾ ರಿಬಾಕಿನಾ: ಕಜಕಸ್ತಾನದ ಎಲೆನಾ ರಿಬಾಕಿನಾ ವಿಂಬಲ್ಡನ್ ಟೆನಿಸ್ ಟೂರ್ನಿಯ ‘ರಾಣಿ’ಯಾಗಿ ಮೆರೆದರು. ಆಲ್ ಇಂಗ್ಲೆಂಡ್ನ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ರಿಬಾಕಿನಾ, ಟ್ಯುನಿಷಿಯಾದ ಜಬೇರ್ ವಿರುದ್ಧ ಗೆದ್ದರು. ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಕಜಕಸ್ತಾನದ ಮೊದಲ ಮಹಿಳೆ ಎಂಬ ಗೌರವ ಅವರಿಗೆ ಒಲಿಯಿತು. ಮಾಸ್ಕೊ ಮೂಲದ ರಿಬಾಕಿನಾ 2018 ರವರೆಗೂ ರಷ್ಯಾವನ್ನು ಪ್ರತಿನಿಧಿಸುತ್ತಿದ್ದರು. ಆ ಬಳಿಕ ಕಜಕಸ್ತಾನ ಪರ ಆಡತೊಡಗಿದ್ದರು.  ಚಾಂಪಿಯನ್ ರಿಬಾಕಿನಾ ಅವರು ಟ್ರೋಫಿಯ ಜತೆ ರೂ.19 ಕೋಟಿ ನಗದು ಬಹುಮಾನ ಗೆದ್ದರು. ‘ರನ್ನರ್ಸ್ ಅಪ್’ ಜಬೇರ್ ರೂ.10 ಕೋಟಿ ನಗದು ಬಹುಮಾನ ಗಳಿಸಿದರು.
 • ವಿಂಬಲ್ಡನ್: ನೊವಾಕ್ ಜೊಕೊವಿಚ್ಗೆ ಏಳನೇ ಕಿರೀಟ: ಸರ್ಬಿಯಾದ ನೊವಾಕ್ ಜೊಕೊವಿಚ್ ತಮ್ಮ ಎದುರಾಳಿ ಆಸ್ಟ್ರೇ ಲಿಯಾದ ನಿಕ್ ಕಿರ್ಗಿಯೊಸ್ ವಿರುದ್ಧ ಜಯಿಸಿದರು. ಸತತ ನಾಲ್ಕನೇ ವರ್ಷ ಹಾಗೂ ಒಟ್ಟಾರೆ ಏಳನೇ ಬಾರಿ ವಿಂಬಲ್ಡನ್ ಟ್ರೋ ಫಿಗೆ ಮುತ್ತಿಕ್ಕಿದರು. ಅದರೊಂದಿಗೆ 21ನೇ ಗ್ರ್ಯಾ ನ್ಸ್ಲಾಂ ಕಿರೀಟ ಧರಿಸಿದರು. ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಿದರು. ರಫೆಲ್ ನಡಾಲ 22 ಪ್ರಶಸ್ತಿ ಜಯಿಸಿದ ದಾಖಲೆ ಹೊಂದಿದ್ದಾರೆ.·
 • ಅಥ್ಲೀಟ್ ಎಂ.ಆರ್. ಪೂವಮ್ಮ ಅವರು ಈಚೆಗೆ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಮೂರು ತಿಂಗಳುಗಳ ನಿಷೇಧ ಶಿಕ್ಷೆ ವಿಧಿಸಿದೆ.ಕರ್ನಾಟಕದ 32 ವರ್ಷದ ಪೂವಮ್ಮ ಅವರು ಕಳೆದ ಫೆಬ್ರುವರಿಯಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ಪ್ರಿ ಕೂಟದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಪರೀಕ್ಷೆ ನೀಡಿದ್ದ ಮಾದರಿಯಲ್ಲಿ ನಿಷೇಧಿತ ಮೆಥೈಲ್ಹೆಕ್ಸಾನೀಮೈನ್ ಮದ್ದಿನ ಅಂಶ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಅಧ್ಯಕ್ಷ ಆದಿಲೆ ಸುಮರಿವಾಲಾ ದೃಢಪಡಿಸಿದ್ದಾರೆ.