Published on: November 15, 2022
ಸುದ್ಧಿ ಸಮಾಚಾರ – 15 ನವೆಂಬರ್ 2022
ಸುದ್ಧಿ ಸಮಾಚಾರ – 15 ನವೆಂಬರ್ 2022
- ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ವೊಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಕೈಜೋಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆಯ ಕಾಮಧೇನುವನ್ನು ಗಿಫ್ಟ್ ನೀಡಿದ್ದಾರೆ.
- ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6.77ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು 19 ತಿಂಗಳ ಕನಿಷ್ಠ ಮಟ್ಟವಾದ ಶೇ 8.39ಕ್ಕೆ ತಗ್ಗಿದೆ.
- ಇಂಡೋನೇಷ್ಯಾದ ಬಾಲಿಯ ನುಸಾ ದುವಾದಲ್ಲಿ 2022 ರ 17ನೇ G20 ಬಾಲಿ ಶೃಂಗಸಭೆಯು ಈ ವರ್ಷ ನವೆಂಬರ್ 15 ಮತ್ತು 16 ರಂದು ನಡೆಯಲಿದೆ. ಡಿಸೆಂಬರ್ 1, 2021 ರಂದು ಇಂಡೋನೇಷ್ಯಾದ ಅಧ್ಯಕ್ಷೀಯ ಅವಧಿಯು ಪ್ರಾರಂಭವಾಯಿತು. ಇದು ಈ ಶೃಂಗಸಭೆಯಲ್ಲಿ ಕೊನೆಗೊಳ್ಳುತ್ತದೆ. ಥೀಮ್: ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’.
- ಎರಡನೇ ಮಹಾಯುದ್ಧದಲ್ಲಿ ಬ್ರಿಟನ್ ಪರ ಗೂಢಚಾರಿಕೆ ಮಾಡಿ, ಸೂಫಿ ಪ್ರಿಯೆ, ಜರ್ಮನಿಯಲ್ಲಿ ದಾರುಣವಾಗಿ ಹತ್ಯೆಯಾಗಿದ್ದ ಟಿಪ್ಪು ವಂಶಸ್ಥೆ, ನೂರ್ ಇನಾಯತ್ ಖಾನ್ ಅವರ ಜೀವನಗಾಥೆ(‘ನೂರ್’) ಲಂಡನ್ ಸೌತ್ ವರ್ಕ್ ರಂಗಮಂದಿರದಲ್ಲಿ ಪ್ರದರ್ಶನಗೊಂಡಿದೆ. ಗೂಢಚಾರಿಣಿಯಾಗಿ ಕಾರ್ಯನಿರ್ವಹಿಸಿದ ಇವರು 1944 ರಲ್ಲಿ ಜರ್ಮನಿಯ ‘ಯುದ್ಧ ಕೈದಿಗಳ ಶಿಬಿರದಲ್ಲಿ ಹತ್ಯೆಗೀಡಾಗಿದ್ದರು.
ಇಂಗ್ಲೆಂಡ್ ಮೂಲದ ಲೇಖಕ ಶ್ರಬಾನಿ ಬಸು ಅವರು ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್‘ ಪುಸ್ತಕದಲ್ಲಿ ನೂರ್ ಅವರು ಜೀವನದಲ್ಲಿ ಎದುರಿಸಿದ ಮಜಲುಗಳನ್ನು ವಿವರಿಸಿದ್ದಾರೆ.