Published on: December 16, 2021

ಸುದ್ಧಿ ಸಮಾಚಾರ 16 ಡಿಸೆಂಬರ್ 2021

ಸುದ್ಧಿ ಸಮಾಚಾರ 16 ಡಿಸೆಂಬರ್ 2021

  • ಡಿವೆಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಮಂಗಳೂರು ವಿವಿಯ ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್ ಇನ್ ಎನ್ವಿರಾನ್‌ಮೆಂಟಲ್ ರೇಡಿಯೊ ಆ್ಯಕ್ಟಿವಿಟಿ ಸಂಸ್ಥೆಗಳು buy provigil singapore ನೀರಿನಲ್ಲಿ ಯುರೇನಿಯಂನ ಅಂಶ ಇರುವ ಬಗ್ಗೆ ಅಧ್ಯಯನ ನಡೆಸಿವೆ.
  • ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವೈಕೆಮೊಳೆ ಮತ್ತು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನೂರು ಜನ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್ ಹಾಗೂ ತೆಲಂಗಾಣದಲ್ಲಿರುವ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ದಪಡಿಸಿರುವ order stromectol over the counter RNR -15048 ಎನ್ನುವ ಭತ್ತದ ತಳಿಯನ್ನು ಪರಿಚಯಿಸಿಕೊಟ್ಟಿದೆ. ತನ್ನ ವಿಶೇಷ ಗುಣಲಕ್ಷಣಗಳಿಂದ ಈ ತಳಿ ಗಮನ ಸೆಳೆದಿದೆ.
  • ಹಿಂದೂಸ್ತಾನಿ ಗಾಯಕ ಡಾ . ಮಲ್ಲಿಕಾರ್ಜುನ ಮನಸೂರ ನೆನಪಿನ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಕೊಳಲು ವಾದಕ ಮುಂಬೈನ ಪಂಡಿತ್ ನಿತ್ಯಾನಂದ ಹಳದಿಪುರ ಅವರಿಗೆ ನೀಡಲು ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಸಾಮಾನ್ಯ ಸಭೆ ನಿರ್ಧರಿಸಿದೆ.
  • ಚುನಾವಣೆ ಆಯೋಗದ ಶಿಫಾರಸಿನಂತೆ ಚುನಾವಣಾ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರಕಾರ, 4 ಪ್ರಮುಖ ಸುಧಾರಣೆ ತರುವ ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಚುನಾವಣೆ ಪ್ರಕ್ರಿಯೆ ಸಮರ್ಪಕ ಅನುಷ್ಠಾನ, ಮತದಾನ ಹೆಚ್ಚಿಸಲು ಕ್ರಮ, ಚುನಾವಣೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಹಾಗೂ ನಕಲಿ ಮತದಾನ ತಡೆಯುವ ದಿಸೆಯಲ್ಲಿ ಕೇಂದ್ರ ಸರಕಾರ ವಿಧೇಯಕ ಮಂಡಿಸಲಿದೆ.
  • ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ಗಳ ವಿನ್ಯಾಸ ಮತ್ತು ಉತ್ಪಾದನೆ ಹೆಚ್ಚಿಸಲು 76 ಸಾವಿರ ಕೋಟಿ ರೂ.ಗಳ ನೂತನ ಸೆಮಿಕಂಡಕ್ಟರ್ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
  • ವಸೂಲಾಗದ ಸಾಲ (ಎನ್‌ಪಿಎ) ವಿಚಾರದಲ್ಲಿ ನಿರ್ದಿಷ್ಟ ಮಿತಿಯನ್ನು ಮೀರುವ ಅಥವಾ ಅವರ ಬಂಡವಾಳ ಅರ್ಹತಾ ಅನುಪಾತ ಕುಸಿತವಾದರೆ ಬ್ಯಾಂಕೇತರ ಸಾಲದಾರರನ್ನು ಕಠಿಣ ದಂಡನೆಗೆ ಒಳಪಡಿಸಲು ಬ್ಯಾಂಕೇತರ ಹಣಕಾಸು ಕಂಪೆನಿಗಳ (ಎನ್‌ಬಿಎಫ್‌ಸಿ) ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳ (ಪಿಸಿಎ) ಚೌಕಟ್ಟನ್ನು ಬಿಡುಗಡೆ ಮಾಡಿದೆ.
  • ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಮೇಲ್ಭಾಗದ ವಾತಾವರಣವಾದ ಕರೊನಾ ಮೂಲಕ ಹಾದು ಹೋಗಿದೆ. ಅಲ್ಲದೆ, ಅದರಿಂದ ಕಣಗಳು ಹಾಗೂ ಆಯಸ್ಕಾಂತೀಯ ಭಾಗಗಳ ಮಾದರಿಗಳನ್ನು ಸಂಗ್ರಹಿಸಿದೆ.
  • ಪಾಕಿಸ್ತಾನ ವಿರುದ್ಧ 1971ರ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನವು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಹಾಗಾಗಿಯೇ ಪ್ರತಿ ವರ್ಷದ ಡಿ.16ರಂದು ‘ವಿಜಯ ದಿವಸ್’ ಆಚರಿಸಲಾಗುತ್ತಿದೆ. ಅದರಲ್ಲೂ, ಭಾರತವೇ ಮುಂದೆ ನಿಂತು ಬಾಂಗ್ಲಾದೇಶವನ್ನು ಸೃಷ್ಟಿಸಿದ, ಪಾಕಿಸ್ತಾನವನ್ನು ಬಗ್ಗುಬಡಿದ ದಿನಕ್ಕೆ ಇಂದು ಸುವರ್ಣ ಮಹೋತ್ಸವ ಸಂಭ್ರಮ.