Published on: November 18, 2022

ಸುದ್ಧಿ ಸಮಾಚಾರ – 18 ನವೆಂಬರ್ 2022

ಸುದ್ಧಿ ಸಮಾಚಾರ – 18 ನವೆಂಬರ್ 2022

  • ಸಂಸದರು, ಶಾಸಕರು ಶಾಸನಸಭೆಗಳಲ್ಲಿ ಮಾತನಾಡಲು, ಮತ ಚಲಾಯಿಸಲು ಲಂಚ ಪಡೆದ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆಯಿಂದ ವಿನಾಯಿತಿ ಪಡೆಯಬಹುದೇ ಎಂಬ ವಿಷಯ ಕುರಿತ ವಿಚಾರಣೆಯಲ್ಲಿ ಜನಪ್ರತಿನಿಧಿಗಳಿಗೆ ನೆರವಾಗಲು ಸುಪ್ರೀಂ ಕೋರ್ಟ್ ‘ಅಮಿಕಸ್ ಕ್ಯೂರಿ’ ನೇಮಿಸಿದೆ.
  • ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದ ಯವತ್ಮಾಲ್ ಜಿಲ್ಲೆಯ ಪುಸಾದ್ ತಹಸಿಲ್ ವ್ಯಾಪ್ತಿಯ ಬನ್ಸಿ ಗ್ರಾಮ ಸಭೆಯಲ್ಲಿ18 ವರ್ಷ ವಯಸ್ಸಿನ ಒಳಗಿನವರು ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ. ಮಕ್ಕಳು ಗೇಮ್ಸ್ ಆಡವುದು ಮತ್ತು ಅವರ ವೀಕ್ಷಣೆಗೆ ಯೋಗ್ಯವಲ್ಲದ ವೆಬ್ಸೈಟ್ಗಳನ್ನು ಸರ್ಫಿಂಗ್ ಮಾಡುವ ವ್ಯಸನಿಗಳಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
  • ಪಿಲಿಭಿತ್ ಹುಲಿ ರಕ್ಷಿತಾರಣ್ಯ: ಕಾಡಿನ ಪಕ್ಕದಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷದ ಘಟನೆಗಳನ್ನು ಪರೀಕ್ಷಿಸಲು ಉತ್ತರ ಪ್ರದೇಶ ಸರ್ಕಾರವು ತನ್ನ ಪಿಲಿಭಿತ್ ರಕ್ಷಿತಾರಣ್ಯಕ್ಕೆ (ಪಿಟಿಆರ್) ಬಿಡಲು ಕರ್ನಾಟಕದಿಂದ ನಾಲ್ಕು ಆನೆಗಳನ್ನು ಪಡೆದುಕೊಂಡಿದೆ. ಉದ್ದೇಶ: ಮೀಸಲು ಪ್ರದೇಶದಿಂದ ಹೊರಬರುವ ಹುಲಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಪುನಾ ಕಾಡಿಗೆ ಸೇರಿಸಲು ಈ ಆನೆಗಳು ವಿಶೇಷ ರೀತಿಯಲ್ಲಿ ನೆರವಾಗಲಿವೆ. ಈ ಆನೆಗಳು ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿವೆ.
  • ಅಮೆಜಾನ್ ತನ್ನ ಕೆಲವು ಭಾರತೀಯ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಪ್ರತ್ಯೇಕತೆಯ ಆಫರ್ ನೀಡಿದೆ. ಸ್ವಯಂಪ್ರೇರಿತ ಬೇರ್ಪಡಿಕೆಯ(ವಿಎಸ್ಪಿ) ಯೋಜನೆಯಲ್ಲಿ ಭಾರತೀಯ ಉದ್ಯೋಗಿಗಳಿಗೆ 22 ವಾರಗಳ ಮೂಲ ವೇತನಕ್ಕೆ ಸಮನಾದ ಹಣ, ಪ್ರತಿ 6 ತಿಂಗಳ ಸರ್ವಿಸ್ಗೆ ಒಂದು ವಾರದ ಮೂಲ ಸಂಬಳದಂತೆ ಹಣ (ಗರಿಷ್ಠ 20 ವಾರಗಳು), ಆರು ತಿಂಗಳವರೆಗೆ ವೈದ್ಯಕೀಯ ವಿಮಾ ರಕ್ಷಣೆ ಮತ್ತು ಉದ್ಯೋಗ ಒಪ್ಪಂದದ ನಿಯಮಗಳ ಪ್ರಕಾರ ನೋಟಿಸ್ ಅವಧಿ ಅಥವಾ ಹಣ ಪಾವತಿಸಬೇಕು. ಬೋನಸ್ ಅಥವಾ ಸ್ಥಳಾಂತರ ಕುರಿತಾದ ವೆಚ್ಚಗಳ ಬಾಕಿ ಉಳಿದಿರುವ ಬಾಧ್ಯತೆಗಳ ವಿನಾಯಿತಿ ಸಹ ಇದರಲ್ಲಿ ಒಳಗೊಂಡಿರುತ್ತದೆ.
  • 2022 ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಿಡುಗಡೆ ಮಾಡಿದೆ. ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಾಗಿ ಭಾರತ ಸರ್ಕಾರ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.
  • ಭಾರತ ಬ್ಯಾಸ್ಕೆಟ್ಬಾಲ್ ತಂಡದ ಮಾಜಿ ನಾಯಕ ಗುಲಾಮ್ ಅಬ್ಬಾಸ್ ಮುಂತಾಸಿರ್ (80) ದೀರ್ಘ ಕಾಲದ ಅನಾರೋಗ್ಯದಿಂದಾಗಿ ಮುಂಬೈನಲ್ಲಿ ನಿಧನರಾದರು. 1969 ಹಾಗೂ 1975ರಲ್ಲಿ ಏಷ್ಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಅಬ್ಬಾಸ್ ಅವರು ಭಾರತ ತಂಡವನ್ನು ಮುನ್ನಡೆಸಿದ್ದರು. 1970ರಲ್ಲಿ ಅವರು ಏಷ್ಯನ್ ಆಲ್ ಸ್ಟಾರ್ ತಂಡದಲ್ಲಿಯೂ ಸ್ಥಾನ ಪಡೆದಿದ್ದರು. ಅದೇ ವರ್ಷ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
  • ನಾಸಾವು ಚಂದ್ರಯಾನದ ಅಂಗವಾಗಿ, ಆರ್ಟೆಮಿಸ್– 1 ಒರಿಯನ್‌’ ನೌಕೆಯನ್ನು ಸ್ಪೇಸ್‌ ಲಾಂಚ್ ಸಿಸ್ಟಂನ (ಎಸ್‌ಎಲ್‌ಎಸ್‌) ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದೆ.