ಸುದ್ಧಿ ಸಮಾಚಾರ – 20 ಆಗಸ್ಟ್ 2022
ಸುದ್ಧಿ ಸಮಾಚಾರ – 20 ಆಗಸ್ಟ್ 2022
-
ಭಾರತದ 75ನೇ ಸ್ವಾತಂತ್ರ್ಯೋತ್ಸವದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕಾಗಿ ಹಾಗೂ ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.
- ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆ ರಾಜ್ಯದ ಜನತೆಗಾಗಿ 75 ಆಮ್ ಆದ್ಮಿ ಕ್ಲಿನಿಕ್ಗಳನ್ನು (ಜನತಾ ಆಸ್ಪತ್ರೆಗಳು) ತೆರೆಯಲು ನಿರ್ಧರಿಸಿದ್ದಾರೆ.
- ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಅಡಿಯಲ್ಲಿ ಅಕ್ಟೋಬರ್ನಲ್ಲಿ ಭಾರತ ಆಯೋಜಿಸಲಿರುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕಿಸ್ತಾನವು ಭಾಗಿಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
- 80 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ’ಯ (ಸಿಎಸ್ಐಆರ್) ಮಹಾನಿರ್ದೇಶಕ ಹುದ್ದೆಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಅವರೆ ವಿಜ್ಞಾನಿ ಡಾ.ನಲ್ಲತಂಬಿ ಕಲೈಸೆಲ್ವಿ.
- 2 ನೇ ತಲೆಮಾರಿನ ಎಥೆನಾಲ್ ಸ್ಥಾವರವನ್ನು ಆಗಸ್ಟ್ 10, 2022 ರಂದು ಹರಿಯಾಣದಲ್ಲಿ ವಿಶ್ವ ಜೈವಿಕ ಇಂಧನ ದಿನದ ಸಂದರ್ಭದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ. ಈ ಸ್ಥಾವರವು ಹರಿಯಾಣ ಮತ್ತು ಪಕ್ಕದ ಪ್ರದೇಶದಲ್ಲಿ ಭತ್ತದ ಹುಲ್ಲು ಸುಡುವ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ‘ತ್ಯಾಜ್ಯದಿಂದ ಸಂಪತ್ತು’ ಉಪಕ್ರಮದ ಹೊಸ ಅಧ್ಯಾಯ ಇದರಿಂದ ಆರಂಭವಾಗಲಿದೆ. ಇದನ್ನು ವರ್ಚುವಲ್ ಮೋಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
- ಭಾರತೀಯ ರೈಲ್ವೆ ಬೋಗಿ ತಯಾರಿಕೆ ಘಟಕ ಐಸಿಎಫ್ನಲ್ಲಿ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊ ರೈಲುಗಳ ಕೋಚ್ಗಳನ್ನು (ಬೋಗಿ) ನಿರ್ಮಿಸಲಾಗುತ್ತಿದೆ.
- ಉಪಗ್ರಹಗಳ ಜಾಡು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಚೀನಾದ ಅತ್ಯಾಧುನಿಕ ಕಣ್ಗಾವಲು ಮತ್ತು ಸಂಶೋಧನಾ ನೌಕೆ ಯುವಾನ್ ವಾಂಗ್ 5 ಶ್ರೀಲಂಕಾ ದಕ್ಷಿಣದ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಿದೆ.
-
ಭಾರತದ ದಿನ : ಅಮೆರಿಕದ ಮೆಸಾಚುಸೆಟ್ಸ್, ರೋಡ್ ಐಲ್ಯಾಂಡ್ ಮತ್ತು ನ್ಯೂ ಹ್ಯಾಂಪ್ಶೈರ್ ರಾಜ್ಯಗಳು ಆಗಸ್ಟ್ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿವೆ. ‘ಯುವ ದೇಶವು ತನ್ನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆಧುನಿಕ ಭಾರತವು ಸ್ವಾತಂತ್ರ್ಯದ ನಂತರ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತಂತ್ರಜ್ಞಾನದಲ್ಲಿ ಅಗಾಧ ಬೆಳವಣಿಗೆಯನ್ನು ತೋರಿಸಿದೆ’ ಎಂದು ಮೆಸಾಚುಸೆಟ್ಸ್ ಗವರ್ನರ್ ಸಿ. ಬೇಕರ್ ಹೇಳಿದ್ದಾರೆ. ರೋಡ್ ಐಲೆಂಡ್ ಗವರ್ನರ್ ಡೇನಿಯಲ್ ಮೆಕ್ಕಿ ಮತ್ತು ನ್ಯೂ ಹ್ಯಾಂಪ್ಶೈರ್ ಗವರ್ನರ್ ಕ್ರಿಸ್ಟೋಫರ್ ಟಿ. ಸುನುನು ಅವರು ಸಹ ಇಂತಹದೇ ಹೇಳಿಕೆಗಳೊಂದಿಗೆ ಭಾರತದ ಮಹತ್ವವನ್ನು ಕೊಂಡಾಡಿದ್ದಾರೆ.