Published on: September 23, 2021
ಸುದ್ಧಿ ಸಮಾಚಾರ 23 ಸೆಪ್ಟೆಂಬರ್ 2021
ಸುದ್ಧಿ ಸಮಾಚಾರ 23 ಸೆಪ್ಟೆಂಬರ್ 2021
- ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ನದಿ ಶುದ್ಧೀಕರಣಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 20.50 ಕೋಟಿ ರೂ.ಗಳ ಸಮಗ್ರ ಯೋಜನೆ ಸಿದ್ಧಪಡಿಸಿದೆ.
- ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ ‘ಗ್ರಾಮ ಸೇವಾ ಯೋಜನೆ’ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು.
- ಕೊರೊನಾ ವೇಳೆಯಲ್ಲಿ ಸ್ಥಾಪಿಸಲಾದ ಪರಿಹಾರ ನಿಧಿ, ಪಿ.ಎಂ ಕೇರ್ಸ್ ಫಂಡ್, ಸರ್ಕಾರದ ನಿಧಿ ಅಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯ ದೆಹಲಿ ಹೈ ಕೋರ್ಟ್ಗೆ ತಿಳಿಸಿದೆ.
- 900 ಎಂಎಂ ಮಳೆಯ ಮೂಲಕ ಮೇಘಾಲಯದಲ್ಲಿರುವ ಚಿರಾಪುಂಜಿ ವಿಶ್ವದ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶ. ಬೆಂಗಳೂರಿನ ವಾರ್ಷಿಕ ಮಳೆಯ ಪ್ರಮಾಣ ಇದಾಗಿದ್ದು, ಇಂತಹ ತೀವ್ರ ಮಳೆಯಾಗುವ ಪ್ರದೇಶವೂ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಇಲ್ಲದ ಶುಷ್ಕ ವಾತಾವರಣ ಉಂಟಾಗುತ್ತಿದೆ.
- ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಜಾರ್ಖಂಡ್ ರಾಜ್ಯ ಸರ್ಕಾರ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದೆ.
- ಚೆನ್ನೈ ನ ಫ್ರೆಶ್ ವರ್ಕ್ ಎಂಬ ಸಾಫ್ಟ್ ವೇರ್ ಸೇವೆಗಳ ಸಂಸ್ಥೆ ನಾಸ್ಡಾಕ್ ಪಟ್ಟಿಗೆ ಸೇರಿದ ಭಾರತೀಯ ಮೂಲದ ಸ್ಟಾರ್ಟ್ ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಂದಾಜು 10.13 ಬಿಲಿಯನ್ ಡಾಲರ್ ಮೌಲ್ಯವನ್ನು ಈ ಸಂಸ್ಥೆ ಹೊಂದಿದ್ದು, ಸಾಂಕ್ರಾಮಿಕದ ನಂತರ ಪುಟಿದೆದ್ದ ಸಾಫ್ಟ್ ವೇರ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ.
- ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎ ನಿರ್ದೇಶಕ ಬಿಲ್ ಬರ್ನ್ಸ್ ಅವರ ನಿಯೋಗವು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ನಿಗೂಢವಾದ ಮಾನಸಿಕ ಹಾಗೂ ನರರೋಗ ಸಮಸ್ಯೆ ಎನ್ನಲಾದ ‘ಹವಾನಾ ಸಿಂಡ್ರೋಮ್’ ತಮ್ಮ ತಂಡದ ಸದಸ್ಯರಿಗೆ ತಗುಲಿದೆ ಎಂದು ಅಮೆರಿಕ ಆರೋಪ ಮಾಡಿದೆ.