Published on: January 24, 2022
ಸುದ್ಧಿ ಸಮಾಚಾರ 24 ಜನವರಿ 2022
ಸುದ್ಧಿ ಸಮಾಚಾರ 24 ಜನವರಿ 2022
- ತಮಿಳು ನಾಡು ರಾಜ್ಯ ಸರ್ಕಾರ 4,600 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿ ಮಾಡಲಿರುವ ಹೊಗೆನಕಲ್ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಕರ್ನಾಟಕ ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ
- ಕನ್ನಡಕ್ಕೊಂದು ಹೊಸ ಫಾಂಟ್ ಅನ್ನು ಕನ್ನಡಿಗ ಟೈಪ್ ಡಿಸೈನರ್ ಮಂಜುನಾಥ ಪ್ರಸ್ತುತಪಡಿಸಿದ್ದಾರೆ. ಬಂಡೀಪುರ ಎನ್ನುವ ಹೆಸರಿನ ಈ ಹೊಸ ಫಾಂಟ್ ಆನೆಯನ್ನು ಹೋಲುತ್ತದೆ ಎನ್ನುವುದು ವಿಶೇಷ.
- ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ದಚಿತ್ರ ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾಗಿದೆ.
- ಬೆಂಗಳೂರು ನಗರ 2020 ರ ಲಾಕ್ ಡೌನ್ ಅವಧಿಯಲ್ಲಿ ಸುಧಾರಣೆ ಕಂಡಿದ್ದ ವಾಯುಗುಣಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
- ರಾಜ್ಯದಲ್ಲಿ ಭೂದಾಖಲೆಗಳ ಸುಗಮ ನಿರ್ವಹಣೆ, ಅಕ್ರಮಗಳನ್ನು ಕೊನೆಗಾಣಿಸಲು ಏಕೀಕೃತ ಭೂ-ನಿರ್ವಹಣಾ ವ್ಯವಸ್ಥೆ (ಯುಎಲ್ಎಂಎಸ್) ಜಾರಿಗೆ ತರಲು ಕಂದಾಯ ಇಲಾಖೆ ತಯಾರಿ ನಡೆಸಿದೆ. ಭೂಸಂಬಂಧಿತ ಪ್ರಕರಣಗಳಲ್ಲಿ ಸಾರ್ವಜನಿಕರು ಮೋಸಕ್ಕೆ ಒಳಗಾಗುವುದನ್ನು ತಡೆಯುವ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಲಿದೆ.
- ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ತೆರೆಎಳೆಯುವ ನಿಮಿತ್ತ ಜ.29ರಂದು ವಿಜಯ್ಚೌಕ್ನಲ್ಲಿ ನಡೆಸುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ
- ಭಾರತದ ಸ್ಟಾರ್ ಷಟ್ಲರ್ ಮತ್ತು ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಪಿವಿ ಸಿಂಧು ಸೈಯದ್ ಮೋದಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
- ನೇತಾಜಿ ರಿಸರ್ಚ್ ಬ್ಯೂರೊ 2022ನೇ ಸಾಲಿನ ನೇತಾಜಿ ಪ್ರಶಸ್ತಿಯನ್ನು ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ನೀಡಿ ಗೌರವಿಸಿದೆ.
- ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ.