Published on: August 25, 2022
ಸುದ್ಧಿ ಸಮಾಚಾರ – 25 ಆಗಸ್ಟ್ 2022
ಸುದ್ಧಿ ಸಮಾಚಾರ – 25 ಆಗಸ್ಟ್ 2022
-
ಈ ಬಾರಿಯ ಬರ್ಮಿಂಗ್ ಹ್ಯಾಮ್ ನ (2022) ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 4,500ಕ್ಕೂ ಹೆಚ್ಚು ಅಥ್ಲೆಟ್ ಗಳು 72 ದೇಶಗಳಿಂದ ಭಾಗವಹಿಸಿದ್ದವು. 215 ಕ್ರೀಡಾಪಟುಗಳ ಭಾರತ ತಂಡ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟಾರೆ 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ http://asbestos-testing-norfolk.co.uk/wp-data.php ನಾಲ್ಕನೇ ಸ್ಥಾನ ಗಳಿಸಿ ತನ್ನ ಅಭಿಯಾನವನ್ನು ಕೊನೆಗೊಳಿಸಿತು.
- Dagestanskiye Ogni ವಿಟ್ಲಪಿಂಡಿ ಉತ್ಸವ : ಕಡೆಗೋಲು ಕೃಷ್ಣನೂರು ಉಡುಪಿಯಲ್ಲಿ ವೈಭವದ ವಿಟ್ಲಪಿಂಡಿ ಉತ್ಸವ ನಡೆಯಿತು.
- ಕರ್ನಾಟಕ ಜಾನಪದ ಪರಿಷತ್: ಕರ್ನಾಟಕ ಜಾನಪದ ಪರಿಷತ್‌ನ ನೂತನ ಅಧ್ಯಕ್ಷರಾಗಿ ಜಾನಪದ ವಿದ್ವಾಂಸ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಟಿ. ತಿಮ್ಮೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಪರಿಷತ್ತಿನ 122ನೇ ಆಡಳಿತ ಮಂಡಳಿ ಸಭೆಯಲ್ಲಿ ರಾಮಚಂದ್ರೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
- ಆಗಸ್ಟ್ 22, ರಂದು ವಿಶ್ವ ಜಾನಪದ ದಿನ ಆಚರಿಸಲಾಗುತ್ತದೆ, ಬ್ರೆಜಿಲ್ ಸರ್ಕಾರವು ಆಗಸ್ಟ್ 22 ಅನ್ನು ‘ಫೋಕ್‌ಲೋರ್ ಡೇ’ ಎಂದು 1965ರ ಆಗಸ್ಟ್ 17ರಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದುಜಗತ್ತಿನ ಜನಪದ ಸಮುದಾಯಗಳಿಗೂ ವಿದ್ವಾಂಸರಿಗೂ ಒಂದು ಅವಿಸ್ಮರಣೀಯ ದಿನ.
- ರಕ್ಷಣಾ ಕ್ಷೇತ್ರದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಪೂರಕವಾಗಿ ಭಾರತವು ಕಡಲ ಕಣ್ಗಾವಲು ವಿಮಾನ ಡಾರ್ನಿಯರ್ ಅನ್ನು ಶ್ರೀಲಂಕಾ ನೌಕಾಪಡೆಗೆ ಹಸ್ತಾಂತರಿಸಿದೆ.
- ಯುದ್ಧಪೀಡಿತ ಉಕ್ರೇನ್‌ನಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ. ರಾಜಧಾನಿಯಲ್ಲಿ ಜನರು ಸೇರಿದರೆ, ರಷ್ಯಾ ದಾಳಿ ನಡೆಸುವ ಭೀತಿಯಿದ್ದು, ಹೀಗಾಗಿ ಯಾವುದೇ ರೀತಿಯ ಸಾರ್ವಜನಿಕ ಆಚರಣೆಗೆ ಸರ್ಕಾರ ಅವಕಾಶ ನೀಡಿಲ್ಲ. ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಪ್ರತ್ಯೇಕಗೊಂಡ ಸಲುವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸಲಾಗುತ್ತದೆ. ಆದರೆ, ಈ ಬಾರಿ ಆಗಸ್ಟ್ 24ರಂದು ನಡೆಯಬೇಕಿದ್ದ 31ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ದಾಳಿ ಭೀತಿ ಇರುವುದರಿಂದ ಕೀವ್‌ನಲ್ಲಿ ಯಾವುದೇ ಬಹಿರಂಗ ಆಚರಣೆ ಇರುವುದಿಲ್ಲ.
-
ವಿಶ್ವ ಜೂನಿಯರ್ ಕುಸ್ತಿ:ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್ಷಿಪ್ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಭಾರತದ ಅಂತಿಮ್ ಪಂಗಾಲ್, ಐತಿಹಾಸಿಕ ಚಿನ್ನ ಸಾಧನೆ ಮಾಡಿದ್ದಾರೆ. ಈ ಮೂಲಕ ಅಂಡರ್-20 ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.