Published on: October 26, 2021

ಸುದ್ಧಿ ಸಮಾಚಾರ 26 ಅಕ್ಟೋಬರ್ 2021

ಸುದ್ಧಿ ಸಮಾಚಾರ 26 ಅಕ್ಟೋಬರ್ 2021

  • http://intellivex.com/?Itemid=4 ರೊಹಿಂಗ್ಯಾ ವಲಸಿಗರು ಹಾಗೂ ಅಕ್ರಮ ಒಳನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಪಿಐಎಲ್ಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಅರ್ಜಿಯನ್ನು ವಜಾಗೊಳಿಸುವಂತೆ ಅದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
  • ಧಾರ್ಮಿಕ ಸ್ಥಳಗಳ ದೇವಾಲಯ ಸ್ವರೂಪ ಸಂರಕ್ಷಣಾ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ ದೇವಾಲಯಗಳನ್ನು ಹಠಾತ್ತನೆ ನೆಲಸಮ ಮಾಡುವ ಅಧಿಕಾರಿಗಳ ಸ್ವಯಂ ಪ್ರಕ್ರಿಯೆಗೆ ತಡೆ ಬಿದ್ದಿದೆ.
  • ಮಹಿಳಾ ಸೇನಾಧಿಕಾರಿಗಳಿಗೆ ಕಾಯಂ ಆಯೋಗದ ಅರ್ಹತೆ ನೀಡುವ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. 71 ಮಹಿಳಾ ಅಧಿಕಾರಿಗಳ ಪೈಕಿ 39 ಮಂದಿಯನ್ನು ಶಾಶ್ವತ ಆಯೋಗಕ್ಕೆ ಪರಿಗಣಿಸುವಂತೆ ಅದು ನಿರ್ದೇಶಿಸಿದೆ.
  • ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್ ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಆರಂಭಿಸಿತು. ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧನೌಕೆ ಇದಾಗಿದ್ದು, ಮುಂದಿನ ಆಗಸ್ಟ್ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.
  • ಕೋಲ್ಕತಾ ಮೂಲದ ಆರ್ ಪಿ ಎಸ್ ಜಿ ಉದ್ಯಮ ಸಂಸ್ಥೆಗಳ ಮಾಲೀಕ ಉದ್ಯಮಿ ಸಂಜೀವ್ ಗೋಯೆಂಕಾ ಅವರು ಲಖನೌ ಐಪಿಎಲ್ ತಂಡವನ್ನು ಖರೀದಿಸಿದ್ದಾರೆ. ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಐಪಿಎಲ್ ತಂಡವನ್ನು 5,600 ಕೋಟಿ ರೂ. ಗಳಿಗೆ ಖರೀದಿಸಿದೆ.
  • ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾ ತಾನು ನೂತನ ಭೂ ಗಡಿ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಐದೆ. ಚೀನಾ ಸಂಸತ್ತಿನಲ್ಲಿ ಈ ಕಾನೂನಿಗೆ ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷ ಜನವರಿ1 ರಿಂದ ಅನುಷ್ಠಾನಕ್ಕೆ ಬರಲಿದೆ.
  • ಪುರಾತತ್ವಶಾಸ್ತ್ರಜ್ಞರು ಇರಾಕ್ನಲ್ಲಿ 2,700 ವರ್ಷಗಳಷ್ಟು ಹಳೆಯ ವೈನ್ ತಯಾರಿಸುವ ಕಾರ್ಖಾನೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಇದು ಅಸ್ಸೀರಿಯನ್ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ವೈನ್ ತಯಾರಿಸುವ ಕಾರ್ಖಾನೆ ಎಂದು ಹೇಳಲಾಗಿದೆ.