Published on: November 26, 2021

ಸುದ್ಧಿ ಸಮಾಚಾರ 26 ನವೆಂಬರ್ 2021

ಸುದ್ಧಿ ಸಮಾಚಾರ 26 ನವೆಂಬರ್ 2021

 • ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲು ಆಸಕ್ತಿ ತೋರಿಸುವ Rodas ಎಸಿಬಿ ಪೊಲೀಸರು, ಆನಂತರ ಜರಗುವ ನ್ಯಾಯಾಲಯ ಪ್ರಕ್ರಿಯೆಗೆ ನಿರಾಸಕ್ತಿ ತೋರಿಸುತ್ತಾರೆ. ಭ್ರಷ್ಟರ ಆಸ್ತಿಯನ್ನು ಅಕ್ರಮ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರ ಸಲ್ಲಿಸಲು ಸಫಲರಾಗುತ್ತಿಲ್ಲ.
 • ರಾಜ್ಯದಲ್ಲಿ ಶೌಚಾಲಯ ಬಳಕೆಯಲ್ಲಿ ತಾರತಮ್ಯಗಳು ಕಂಡು ಬಂದಿದೆ ಎಂದು Mahendragarh 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.
 • ದೇಶದ ಮಹಿಳೆಯರ ಫಲವಂತಿಕೆಯ ದರ 2.2ರಿಂದ 2ಕ್ಕೆ ಇಳಿಕೆಯಾಗಿದೆ’ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಎರಡನೇ ಹಂತದ ವರದಿಯಲ್ಲಿ ಹೇಳಲಾಗಿದೆ.
 • ದೇಶದ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಇದೇ ಮೊದಲ ಬಾರಿ ಪುರುಷರಿಗಿಂತಲೂ ಹೆಚ್ಚು ಇದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಸಚಿವಾಲಯವು ಹೇಳಿದೆ. ದೇಶದಲ್ಲಿ ಈಗ 1,020 ಮಹಿಳೆಯರಿಗೆ 1,000 ಪುರುಷರು ಇರಬಹುದು ಎಂದು ಸಮೀಕ್ಷೆಯು ಅಂದಾಜಿಸಿದೆ.
 • ಮಾನವಸಂಪನ್ಮೂಲ ಸಲಹಾ ಸಂಸ್ಥೆ (ಹೆಚ್ ಆರ್ ಕನ್ಸಲ್ಟೆನ್ಸಿ) ಎಮರ್ಜಿಂಗ್ ನಡೆಸಿರುವ ಹಾಗೂ ಟೈಮ್ಸ್ ಉನ್ನತ ಶಿಕ್ಷಣ (ಟಿಹೆಚ್ಇ) ಪ್ರಕಟಿಸಿರುವ ಜಾಗತಿಕ ಉದ್ಯೋಗಾರ್ಹತೆ ಶ್ರೇಣಿ ಹಾಗೂ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರವೇಶ ಪಡೆದಿದೆ.
 • ಉತ್ತರ ಪ್ರದೇಶದಲ್ಲಿ ಐದನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ನೋಯ್ಡಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
 • ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ಐದು ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡುವುದನ್ನು 2022ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ.
 • 2022 ಮತ್ತು 2023ರ ಆರ್ಥಿಕ ವರ್ಷದಲ್ಲಿ ಕ್ರಮವಾಗಿ ಶೇ. 9.3 ಮತ್ತು ಶೇ.7.9ರಷ್ಟು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯಾಗಲಿದೆ ಎಂದು ಮೂಡೀಸ್‌ ಅಂದಾಜು ಮಾಡಿದೆ. ಭಾರತ 2021 – 22ರಲ್ಲಿ ವಾರ್ಷಿಕ ಶೇ. 9.3 ರಿಂದ ಶೇ. 9.6 ಜಿಡಿಪಿ ಬೆಳವಣಿಗೆ ಸಾಧಿಸಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.
 • ಭಾರತೀಯ ವಾಯುಪಡೆಗೆ (IAF) ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ಗಳ (LCH) ಮೊದಲ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಿದ್ದಾರೆ. ಎಚ್‌ಎಎಲ್ ನಿರ್ಮಿಸಿರುವ ಈ ಹೆಲಿಕಾಪ್ಟರ್ನ ಮೊದಲ ಹಂತವು ಮೇಕ್ ಇನ್ ಇಂಡಿಯಾಗೆ ದೊಡ್ಡ ಚೈತನ್ಯ ನೀಡಲಿದೆ.
 • ಭಾರತೀಯ ನೌಕಾಪಡೆಯು ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ‘ಐಎನ್‌ಎಸ್ ವೇಲಾ’ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿದೆ. ‘ವೇಲಾ’ ಆಗಮನದೊಂದಿಗೆ ದೇಶದ ನೌಕಾ ಶಕ್ತಿಗೆ ಮತ್ತಷ್ಟು ಬಲ ಬಂದಿದೆ.
 • 1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನೆಪಿಗಾಗಿ ದೇಶ  ಇಂದು (ನವೆಂಬರ್ 26) ಸಂವಿಧಾನ ದಿನವನ್ನು ಆಚರಿಸುತ್ತಿದೆ.
 • ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ.