Published on: June 29, 2022

ಸುದ್ಧಿ ಸಮಾಚಾರ – 29 ಜೂನ್ 2022

ಸುದ್ಧಿ ಸಮಾಚಾರ – 29 ಜೂನ್ 2022

 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ http://toastmeetsjam.com/media-admin.php ವೀರರಾಣಿ ಅಬ್ಬಕ್ಕ, ಉಡುಪಿ ಜಿಲ್ಲೆಯಲ್ಲಿ ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯಕ ಹೆಸರಿನಲ್ಲಿ ತರಬೇತಿ ಶಾಲೆ ಆರಂಭಿಸಲು ನಿರ್ಧರಿಸಿದೆ.
 • Maināguri ಶಿಕ್ಷಣ ಇಲಾಖೆ ಹೆಸರು ಬದಲಾವಣೆ: ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 12ನೇ ತರಗತಿ ವರೆಗಿನ ಶಿಕ್ಷಣವು ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಅಂಶವನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ. ·
 • ಪರಮೇಶ್ವರನ್ ಅಯ್ಯರ್ ನೀತಿ ಆಯೋಗದ ನೂತನ ಸಿಇಓ: ನೀತಿ ಆಯೋಗದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಇಒ ಅಮಿತಾಭ್ ಕಾಂತ್ ಅವರ ಅಧಿಕಾರವಧಿ ಜೂನ್ 30, 2022 ರಂದು ಅಂತ್ಯಗೊಳ್ಳಲಿದೆ. ತದನಂತರ ಅಯ್ಯರ್ ಅಧಿಕಾರ ಸ್ವೀಕರಿಸಲಿದ್ದಾರೆ.·
 •  ಇನ್ಫೋಸಿಸ್ ನಾರಾಯಣಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉನ್ನತ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.·
 • ಮೊದಲ ಭಾರತ-ನೇಪಾಳ ಭಾರತ್ ಗೌರವ್ ಪ್ರವಾಸಿ ರೈಲು: ಜೂನ್ 21, 2022 ರಂದು, ಮೊದಲ ಭಾರತ-ನೇಪಾಳ ಭಾರತ್ ಗೌರವ್ ಪ್ರವಾಸೋದ್ಯಮ ರೈಲನ್ನು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಫ್ಲ್ಯಾಗ್ ಆಫ್ ಮಾಡಲಾಯಿತು.
 • ಜೂನ್ 23 ರಂದು, ಭಾರತವು ತನ್ನ GSAT-24 ಉಪಗ್ರಹವನ್ನು ಉಡಾವಣೆ ಮಾಡಿತು, ಇದನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗಾಗಿ ISRO ನಿರ್ಮಿಸಿದೆ. GSAT-24 ಉಪಗ್ರಹವನ್ನು Ariane 5 ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ ಫ್ರೆಂಚ್ ಕಂಪನಿ Arianespace ಮೂಲಕ ಉಡಾವಣೆ ಮಾಡಲಾಯಿತು. ಇದನ್ನು ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾದ ಕೌರೌದಿಂದ ಮಾಡಲಾಯಿತು.
 • ಭಾರತ ಜೂ.24 ರಂದು ಮೇಲ್ಮೈ ನಿಂದ ಆಗಸಕ್ಕೆ ಚಿಮ್ಮುವ  ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದಿಂದ ಯಶಸ್ವಿಯಾಗಿ ನಡೆಸಿದೆ.
 • ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೊಂದಿಗೆ ವಿವಿಧ ವಿಭಾಗಗಳ ರಸ್ತೆಗಳಲ್ಲಿ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಸ್ಥಳಗಳಲ್ಲಿ ಮಾರ್ಗಬದಿ ಸೌಲಭ್ಯಗಳನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯ (MoD) ಅನುಮೋದನೆ ನೀಡಿದೆ.
 • 14 ನೇ ಬ್ರಿಕ್ಸ್ ಶೃಂಗಸಭೆಯು ವರ್ಚುವಲ್ ಮೋಡ್‌ನಲ್ಲಿ ಜೂನ್ 23, 2022 ರಂದು ನಡೆಯಿತು.
 • ಶೃಂಗಸಭೆಯಲ್ಲಿ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಒಟ್ಟಿಗೆ ಸೇರಿದ್ದರು.
 • ಬವೇರಿಯನ್ ಆಲ್ಪ್ಸ್‌ನ ಪ್ರಕೃತಿ ಮೀಸಲು ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಸ್ಕ್ಲೋಸ್ ಎಲ್ಮಾವ್‌ನಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜರ್ಮನಿಗೆ ತೆರಳಿದ್ದಾರೆ.