Published on: November 30, 2021
ಸುದ್ಧಿ ಸಮಾಚಾರ 30 ನವೆಂಬರ್ 2021
ಸುದ್ಧಿ ಸಮಾಚಾರ 30 ನವೆಂಬರ್ 2021
- ರಾಜ್ಯದಲ್ಲಿ ಹಸುಗಳ ಸಂಖ್ಯೆ ವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ‘ಲಿಂಗ ನಿರ್ಧಾರಿತ ವೀರ್ಯ’ ಬಳಕೆ ಪ್ರಕ್ರಿಯೆ ಚುರುಕುಗೊಳಿಸಲು 2022 ಜನವರಿಯಿಂದ ಸರಕಾರ ಹೊಸ ಅಭಿಯಾನ ಆರಂಭಿಸಲಿದೆ.
- ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಲು ಕೇಂದ್ರ ಸರಕಾರ ನಿರ್ಧರಿಸಿದ ನಂತರ, ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಕೊಟ್ಟು ವಿಸ್ತರಿಸಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
- ಹಿಂದೂ ಮಹಾಸಾಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ನ ನೌಕಾಪಡೆಗಳು ಸಾಗರೋತ್ತರ ತ್ರಿಪಕ್ಷೀಯ ಸಮರಾಭ್ಯಾಸ ನಡೆಸಿವೆ.
- ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರು ವಿಶ್ವದ ಉತ್ತಮ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್ ಡಿ’ಓರ್ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ರಾಬರ್ಟ್ ಲೆವಂಡೊಸ್ಕಿ ಮತ್ತು ಜಾರ್ಗಿನ್ಹೊ ಅವರನ್ನು ಹಿಂದಿಕ್ಕಿದ್ದಾರೆ.
- ಭಾರತೀಯ ನೌಕಾಸೇನೆಯ 25ನೇ ಮುಖ್ಯಸ್ಥರಾಗಿ ಅಡ್ಮಿರಲ್ ಆರ್. ಹರಿ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಡ್ಮಿರಲ್ ಕೆಬಿ ಸಿಂಗ್ ಅವರ ನಿವೃತ್ತಿ ಬಳಿಕ ಅಡ್ಮಿರಲ್ ಆರ್. ಹರಿ ಕುಮಾರ್ ಅವರನ್ನು ನೌಕಾಸೇನೆಯ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
- ಸಾಮಾಜಿಕ ಜಾಲತಾಣ ಟ್ವಿಟರ್ ಮುಖ್ಯ ಕಾಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜಾಕ್ ಡಾರ್ಸಿ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರು ನೂತನ ಸಿಇಒ ಆಗಿ ಆಯ್ಕೆಯಾಗಿದ್ದಾರೆ.