Published on: November 15, 2023

ಸುಸ್ಥಿರ ನಗರಗಳ ಸವಾಲು ಸ್ಪರ್ಧೆ

ಸುಸ್ಥಿರ ನಗರಗಳ ಸವಾಲು ಸ್ಪರ್ಧೆ

ಸುದ್ದಿಯಲ್ಲಿ ಏಕಿದೆ? ಟೊಯೊಟಾ ಮೊಬಿಲಿಟಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ‘ಸುಸ್ಥಿರ ನಗರಗಳ ಸವಾಲು’ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿರುವ 10 ನಗರಗಳಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನ ಪಡೆದಿದೆ.

ಮುಖ್ಯಾಂಶಗಳು

  • ಈ ಸ್ಪರ್ಧೆಯು 2023 ಜೂನನಲ್ಲಿ ಆರಂಭವಾಗಿತ್ತು.
  • ವಿಶ್ವದ 46 ದೇಶಗಳಿಂದ 150ಕ್ಕೂ ಹೆಚ್ಚು ನಗರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
  • ಸಂಚಾರ ವ್ಯವಸ್ಥೆ (ಮೊಬಿಲಿಟಿ) ಸುಧಾರಣೆಗಾಗಿ ಅಳವಡಿಕೊಳ್ಳುವ ಯೋಜನೆಗಳನ್ನು ನಗರಗಳು ಪ್ರಸ್ತುತಪಡಿಸಿದ್ದವು.
  • ನಗರಗಳು ಸಲ್ಲಿಸಿದ್ದ ಯೋಜನೆಗಳನ್ನು ಪರಿಗಣಿಸಿ ಪ್ರಕಟಿಸಲಾಗಿರುವ 10 ನಗರಗಳ ಆಯ್ಕೆ ಪೂರ್ವ ಪಟ್ಟಿಯಲ್ಲಿ (ಶಾರ್ಟ್‌ ಲಿಸ್ಟ್) ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ವಾರಾಣಸಿ ನಗರ ಎಂಟನೇ ಸ್ಥಾನದಲ್ಲಿದೆ. ನಂತರ ಆಯ್ಕೆ ಪ್ರಕ್ರಿಯೆ ನಡೆದಿದೆ.
  • ಅಂತಿಮವಾಗಿ ಆಯ್ಕೆಯಾಗುವ ಮೂರು ನಗರಗಳಿಗೆ ಟೊಯೊಟಾ ಮೊಬಿಲಿಟಿ ಫೌಂಡೇಷನ್ ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಪ್ರತಿ ವರ್ಷ ₹25 ಕೋಟಿಯಂತೆ 5 ವರ್ಷಗಳವರೆಗೆ ಅನುದಾನವನ್ನು ನೀಡಲಿದೆ
  • 2024ರ ಫೆಬ್ರುವರಿಯಲ್ಲಿ ಅಂತಿಮ ಮೂರು ನಗರಗಳನ್ನು ಪ್ರಕಟಿಸಲಾಗುವುದು.

ಸ್ಪರ್ಧೆಯ ಆಶಯಗಳು

  • ಸಂಚಾರ ವ್ಯವಸ್ಥೆಯನ್ನು ಸಮಗ್ರವಾಗಿ ಉತ್ತಮಗೊಳಿಸುವುದು
  • ನಿವಾಸಿಗಳು/ ವಾಹನ ಸವಾರರಿಗೆ ಸುರಕ್ಷತೆ ಒದಗಿಸುವುದು
  • ಸಂಚಾರ ವ್ಯವಸ್ಥೆಯಲ್ಲಿ ಸುಸ್ಥಿರತೆಯನ್ನು ಉತ್ತಮಗೊಳಿಸಿ ಇಂಗಾಲ ಹೊರಸೂಸುವಿಕೆ ಮತ್ತು ಪರಿಸರದ ಮೇಲಿನ ನಕಾರಾತ್ಮಕ ಪರಿಣಾಮವನ್ನು ಕಡಿಮೆಗೊಳಿಸುವುದು