Published on: December 28, 2022
ಸೈನಿಕರ ಒನ್ ರ‍್ಯಾಂಕ್ ಒನ್ ಪೆನ್ಶನ್
ಸೈನಿಕರ ಒನ್ ರ‍್ಯಾಂಕ್ ಒನ್ ಪೆನ್ಶನ್
ಸುದ್ದಿಯಲ್ಲಿ ಏಕಿದೆ? ಸಶಸ್ತ್ರ ಪಡೆಗಳ ಪಿಂಚಣಿದಾರರು/ಕುಟುಂಬ ಪಿಂಚಣಿದಾರರ ಒನ್ ರ‍್ಯಾಂಕ್ ಒನ್ ಪೆನ್ಶನ್(ಒಆರ್ ಒಪಿ) ಅನ್ನು ಪರಿಷ್ಕರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆ ಜಾರಿಗೆಯಿಂದ 25 ಲಕ್ಷಕ್ಕೂ ಹೆಚ್ಚು ಯೋಧರ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ.
ಮುಖ್ಯಾಂಶಗಳು
- ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೆ ಮತ್ತು ಅಂಗವಿಕಲ ಪಿಂಚಣಿದಾರರು ಸೇರಿದಂತೆ ಕುಟುಂಬ ಪಿಂಚಣಿದಾರರಿಗೂ ಈ ಪ್ರಯೋಜನೆಯನ್ನು ವಿಸ್ತರಿಸಲಾಗುವುದು.
- ಒಆರ್‌ಒಪಿ ಯೋಜನೆಯಡಿ ವಿವಿಧ ಸಮಯಗಳಲ್ಲಿ ನಿವೃತ್ತರಾದ ಒಂದೇ ಶ್ರೇಣಿಯ ಸೈನಿಕರು ಸಮಾನ ಪಿಂಚಣಿ ಪಡೆಯುತ್ತಾರೆ. ಅವರು ಯಾವುದೇ ಸಮಯದಲ್ಲಿ ನಿವೃತ್ತರಾಗಿದ್ದರೂ ಪಿಂಚಣಿ ಮೊತ್ತದಲ್ಲಿ ಏಕರೂಪತೆ ಇರುತ್ತದೆ.
- ಬಾಕಿಯನ್ನು ನಾಲ್ಕು ಅರ್ಧವಾರ್ಷಿಕ ಕಂತುಗಳಲ್ಲಿ ಪಾವತಿಸಲಾಗುವುದು.
- ಆದಾಗ್ಯೂ, ವಿಶೇಷ/ಉದಾರೀಕೃತ ಕುಟುಂಬ ಪಿಂಚಣಿ ಮತ್ತು ಶೌರ್ಯ ಪ್ರಶಸ್ತಿ ವಿಜೇತರು ಸೇರಿದಂತೆ ಎಲ್ಲಾ ಕುಟುಂಬ ಪಿಂಚಣಿದಾರರಿಗೆ ಒಂದೇ ಕಂತಿನಲ್ಲಿ ಬಾಕಿಯನ್ನು ಪಾವತಿಸಲಾಗುತ್ತದೆ.
ಒಆರ್‌ಒಪಿ ಯೋಜನೆ
- ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ನಿವೃತ್ತ ಸೈನಿಕರಿಗೆ ಒನ್ ರ‍್ಯಾಂಕ್ ಒನ್ ಪೆನ್ಶನ್ (ಒಆರ್‌ಒಪಿ) ಯೋಜನೆ ಘೋಷಿಸಿದ್ದರು. ಒಆರ್‌ಒಪಿ ಯೋಜನೆಯಡಿ ವಿವಿಧ ಸಮಯಗಳಲ್ಲಿ ನಿವೃತ್ತರಾದ ಒಂದೇ ಶ್ರೇಣಿಯ ಸೈನಿಕರು ಸಮಾನ ಪಿಂಚಣಿ ಪಡೆಯುತ್ತಾರೆ. ಅವರು ಯಾವುದೇ ಸಮಯದಲ್ಲಿ ನಿವೃತ್ತರಾಗಿದ್ದರೂ ಪಿಂಚಣಿ ಮೊತ್ತದಲ್ಲಿ ಏಕರೂಪತೆ ಇರುತ್ತದೆ.
- ನವೆಂಬರ್ 7, 2015ರಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಪಡೆಗೆ ಒಆರ್‌ಒಪಿ ಯೋಜನೆ ಪರಿಚಯಿಸಿತು.
- ಆದರೆ ಈ ಯೋಜನೆಯಲ್ಲಿ ಲೋಪಗಳಿವೆ. ಇದರಿಂದ ಮಾಜಿ ಯೋಧರಿಗೆ ಸಂಕಷ್ಟ ಎದುರಾಗಲಿದೆ ಎಂದು ಎಕ್ಸ್ ಸರ್ವೀಸ್‌ಮೆನ್ ಮೂವ್‌ಮೆಂಟ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಕೇಂದ್ರದ ಒಆರ್‌ಒಪಿ ಯೋಜನೆಯನ್ನು ಎತ್ತಿ ಹಿಡಿದಿತ್ತು.