Published on: January 28, 2023
ಹಂಪಿ ಉತ್ಸವ-2023
ಹಂಪಿ ಉತ್ಸವ-2023
ಸುದ್ದಿಯಲ್ಲಿ ಏಕಿದೆ? ಮೂರು ದಿನಗಳ ಕಾಲ ಹಂಪಿಯಲ್ಲಿ ನಡೆಯುವ ಹಂಪಿ ಉತ್ಸವ-2023 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿ ಸಿದರು.
ಮುಖ್ಯಾಂಶಗಳು
- ಜನವರಿ 30ರವರೆಗೆ ಆರರಿಂದ ಏಳು ನಿಮಿಷಗಳ ಕಾಲ ಹೆಲಿಕಾಪ್ಟರ್ನಲ್ಲಿ ಹಂಪಿಯನ್ನು ನೋಡುವ ಅವಕಾಶ ದೊರಕಲಿದೆ.
- ಹಂಪಿ ಉತ್ಸವದಲ್ಲಿ ಚಿತ್ರಕಲೆ ಶಿಬಿರ, ಫಲಪುಷ್ಪ ಪ್ರದರ್ಶನ, ಮತ್ಸ್ಯಮೇಳ, ಮರಳು ಶಿಲ್ಪಕಲಾ ವೈಭವ, ಲೇಸರ್ ಶೋ, ವಸಂತ ವೈಭವ, ಆಹಾರ ಮೇಳ, ಕವಿಗೋಷ್ಠಿ, ಜಲಕ್ರೀಡೆ, ಕುಸ್ತಿ, ರಸಮಂಜರಿ, ಸಾಹಸ ಕ್ರೀಡೆ ಇತ್ಯಾದಿ ಹಲವು ಬಗೆಯ ಕಾರ್ಯಕ್ರಮಗಳು ಇರಲಿವೆ.
ಉದ್ದೇಶ :
- ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರುಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಹಂಪಿ ಉತ್ಸವವನ್ನು ನಡೆಸುತ್ತದೆ.
ಗಂಧದ ಗುಡಿ ಹಾಗೂ ಕಾಂತಾರ ಚಲನಚಿತ್ರದ ತುಣಕುಗಳು
- ಈ ಬಾರಿಯ ಅರಣ್ಯ ಇಲಾಖೆ ವಸ್ತುಪ್ರದರ್ಶನದಲ್ಲಿ ಜನರಿಗೆ ಕಾಡಿನ ಬಗ್ಗೆ ಒಲವು ಮೂಡಿಸಲು ಡಾ. ರಾಜಕುಮಾರ್ ಅಭಿನಯದ ಗಂದಧ ಗುಡಿ ಹಾಗೂ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರದ ತುಣುಕುಗಳನ್ನು ಪ್ರದರ್ಶಿಸಲಾಗುತ್ತಿದೆ.
‘ಹಂಪಿ ಉತ್ಸವ’
- ವಿಜಯನಗರದ ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯವನ್ನು ಈ ಉತ್ಸವ ಮಾಡಲಿದೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಈಗಾಗಲೇ 1986ರಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.
- ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಹಂಪಿ ಉತ್ಸವವು ಭಾರತದ ಅತ್ಯಂತ ಹಳೆಯ ಉತ್ಸವಗಳಲ್ಲಿ ಒಂದು ಎನ್ನಲಾಗುತ್ತದೆ. ಈ ಉತ್ಸವವನ್ನು ವಿಜಯ ನಗರ ಕಾಲದಿಂದಲೂ ಆಚರಿಸಲಾಗುತ್ತಿದೆ.