Published on: April 18, 2022

ಹನುಮಂತನ ಪ್ರತಿಮೆ

ಹನುಮಂತನ ಪ್ರತಿಮೆ

ಸುದ್ಧಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 108 ಅಡಿ ಎತ್ತರದ ಭಗವಾನ್ ಹನುಮಾನ್ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.

ಎಲ್ಲಿ ಸ್ಥಾಪಿಸಲಾಗಿದೆ ?

  • ಗುಜರಾತ್‌ನ ಮೊರ್ಬಿಯಲ್ಲಿ ಸ್ಥಾಪಿಸಲಾಗಿದೆ

ಭಗವಾನ್ ಹನುಮಂತ ಚಾರ್ ಧಾಮ್ ಯಾತ್ರೆ

  • ದೇಶದ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹನುಮಂತನ 4 ಪ್ರತಿಮೆಗಳ ಪೈಕಿ ಇದು 2ನೇ ಪ್ರತಿಮೆಯಾಗಿದೆ. ಭಗವಾನ್ ಹನುಮಂತ ಚಾರ್ ಧಾಮ್ ಯಾತ್ರೆಯ ಅಂಗವಾಗಿ ದೇಶದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಪ್ರತಿಮೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು
  • ನಾಲ್ಕು ದಿಕ್ಕುಗಳ ಪೈಕಿ ಪಶ್ಚಿಮದಲ್ಲಿ ನಿರ್ಮಿಸಲಾಗುತ್ತಿರುವ ಪ್ರತಿಮೆ ಇದಾಗಿದ್ದು, ಗುಜರಾತ್‌ನ ಮೊರ್ಬಿಯ ಬಾಪು ಕೇಶವಾನಂದ ಜೀ ಅವರ ಆಶ್ರಮದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ
  • 2010ರಲ್ಲಿ ಮೊದಲಿಗೆ ಉತ್ತರ ದಿಕ್ಕಿಗೆ ಪ್ರತಿಮೆ ನಿರ್ಮಿಸಲಾಗಿತ್ತು. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಈ ಪ್ರತಿಮೆ ನಿರ್ಮಿಸಲಾಗಿತ್ತು.
  • ದಕ್ಷಿಣ ದಿಕ್ಕಿನಲ್ಲಿ ಪ್ರತಿಮೆ ನಿರ್ಮಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಪ್ರಧಾನ ಮಂತ್ರಿ ಕಚೇರಿ ಮಾಹಿತಿಗಳ ಪ್ರಕಾರ ಮೂರನೇ ಪ್ರತಿಮೆಯು ತಮಿಳುನಾಡಿನ ರಾಮೇಶ್ವರದಲ್ಲಿ ನಿರ್ಮಾಣ ಆಗಲಿದೆ.
  • ಪೂರ್ವ ದಿಕ್ಕಿಗೆ ಪಶ್ಚಿಮ ಬಂಗಾಳದಲ್ಲಿ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ

ಹನುಮ ಜಯಂತಿ

  • ರಾಮ ಭಕ್ತ ಭಗವಾನ್ ಹನುಮಂತ ದೇವರ ಜನ್ಮ ದಿನಾಚರಣೆಯನ್ನು ಹನುಮ ಜಯಂತಿ ಎಂದು ಕರೆಯಲಾಗುತ್ತದೆ.